Asianet Suvarna News Asianet Suvarna News

95 ವರ್ಷದ ವಿಶ್ವದ ಅತ್ಯಂತ ಹಿರಿಯ ವಿಂಗ್ ವಾಕರ್‌: ವಿಡಿಯೋ ವೈರಲ್‌

  • ವಯಸ್ಸು ಕೇವಲ ನಂಬರ್ ಅಷ್ಟೇ
  • ವಿಶ್ವದ ಅತ್ಯಂತ ಹಿರಿಯ ವಿಂಗ್ ವಾಕರ್ ಇವರು
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
watch video of 95 year old worlds oldest wing walker akb
Author
UK, First Published Apr 13, 2022, 9:17 PM IST

ಬಹುತೇಕ ಜನ 50 ವರ್ಷ ದಾಟಿದವರು ಈ ಸಾಹಸ ಕ್ರೀಡೆ ಎಲ್ಲ ನಮಗಲ್ಲಪ್ಪ ಅಂತ, ಸಾಹಸ ಕ್ರೀಡೆಗಳಿಂದ ಹಿಂದೆ ಸರಿಯುವುದೇ ಹೆಚ್ಚು. ಆದರೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ(ಬ್ರಿಟನ್‌)  95 ವರ್ಷ ವಯಸ್ಸಿನ ವೃದ್ಧರೊಬ್ಬರು ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಸಾಬೀತುಪಡಿಸಿದ್ದಾರೆ. 

ಐವರ್ ಬಟನ್ (Ivor Button) ಎಂಬ ವೃದ್ಧರೊಬ್ಬರು ವಿಮಾನದ ಒಳಗೆ ಪಯಣಿಸುವ ಬದಲು ಬೈಪ್ಲೇನ್‌ನ (biplane) ಮೇಲಿರುವ ಕಂಬಕ್ಕೆ ತಮ್ಮನ್ನು ಕಟ್ಟಿಕೊಂಡು ಆಕಾಶದಲ್ಲಿ ಪಯಣಿಸಿದರು. ಮುತ್ತಜ್ಜನ ಈ ಧೈರ್ಯಶಾಲಿ ಸಾಹಸವು ಆನ್‌ಲೈನ್‌ನಲ್ಲಿ ಸಂಚಲನವನ್ನು ಸೃಷ್ಟಿಸಿದೆ, ಹೀಗೆ ಹಾರುವ ಮೂಲಕ ಅವರು ವಿಶ್ವದ ಅತ್ಯಂತ ಹಳೆಯ ವಿಂಗ್ ವಾಕರ್ ಆಗಿದ್ದಾರೆ. ಈ ಹಿಂದೆ 2013ರಲ್ಲಿ 93ನೇ ವಯಸ್ಸಿನಲ್ಲಿ ಈ ಸಾಧನೆಯನ್ನು ಮಾಡಿದ ದಿವಂಗತ ಥಾಮಸ್ ಲ್ಯಾಕಿ ಅವರ ಸಾಧನೆಯನ್ನು 95ನೇ ವಯಸ್ಸಿನಲ್ಲಿ ಇವರು ಮಾಡುವ ಮೂಲಕ ಐವರ್ ಬಟನ್ ಮುರಿದಿದ್ದಾರೆ.

 

ಗ್ಲೌಸೆಸ್ಟರ್‌ ಶೈರ್‌ನ ಸ್ಟಾವರ್ಟನ್ (Gloucestershire) ವಿಮಾನ ನಿಲ್ದಾಣದಿಂದ ಟೇಕ್‌ ಅಪ್ ಆಗುವ ಮೂಲಕ ಬಟನ್ ಅವರು ಐರಿಶ್ ಸಮುದ್ರದಾದ್ಯಂತ ಒಂದು ಗಂಟೆ 21 ನಿಮಿಷಗಳ ಕಾಲ ಹೀಗೆ ಹಾರಾಟ ನಡೆಸಿದರು. ಈ ಹಾರಾಟದ ಬಳಿಕ ಅವರು ನಾನು ಉತ್ತಮ ಮನಸ್ಸಿನಿಂದ ಹಾರಿದೆ. ನನಗೆ ಭಯವಾಗಲಿಲ್ಲ. ನಾನು ಶೀತವಾಗುವುದರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದೆ ಎಂದು ತಮ್ಮ ಈ ಹಾರಾಟದ ಬಗ್ಗೆ ಬಟನ್  ಅವರು ದಿ ಇಂಡಿಪೆಂಡೆಂಟ್‌ ಜೊತೆ ಹಂಚಿಕೊಂಡಿದ್ದಾರೆ.

ಪ್ಯಾರಾಗ್ಲೈಡಿಂಗ್‌ ಟೇಕಾಫ್‌ಗೂ ಮುನ್ನ ರಭಸವಾಗಿ ಬೀಸಿದ ಗಾಳಿ.. ಜೊತೆಗೆ ಹಾರಿದ ಕೆಲಸಗಾರ

ವಿಮಾನಗಳ ವಿಷಯಕ್ಕೆ ಬಂದರೆ, ಬಟನ್ ಅವರು ವಿನ್ಯಾಸ ಎಂಜಿನಿಯರ್ ಆಗಿ ಕೆಲಸ ಮಾಡಿದ್ದರಿಂದ ಮತ್ತು ಯುದ್ಧದ ಸಮಯದಲ್ಲಿ ಸ್ಟಾವರ್ಟನ್ ವಿಮಾನ ನಿಲ್ದಾಣದಲ್ಲಿ (Staverton Airport) ತಳಮಟ್ಟದ ಸಿಬ್ಬಂದಿಯಾಗಿ ಕೆಲಸ ಮಾಡಿದ್ದರಿಂದ ಅವರಿಗೆ ಈ ಕ್ಷೇತ್ರ ಹೊಸದೇನಲ್ಲ. ಇದು ವಿಶ್ವದ ಅತ್ಯುತ್ತಮ ಕೆಲಸವಾಗಿದೆ ಮತ್ತು ಸ್ಟಾವರ್ಟನ್‌ನಿಂದ ಈ ಹಾರಾಟವನ್ನು ಆನಂದಿಸಲು ನಾನು ಅದೃಷ್ಟಶಾಲಿಯಾಗಿದ್ದೆ ಎಂದು ಅವರು ಸ್ಥಳೀಯ ಮಾಧ್ಯಮ ಲ್ಯಾಡ್‌ಬೈಬಲ್‌ಗೆ ತಿಳಿಸಿದ್ದಾರೆ.

ಆಗ ಅಲ್ಲಿ ನ್ಯಾವಿಗೇಷನಲ್ ತರಬೇತಿ ಶಾಲೆ ಇತ್ತು ಮತ್ತು ನಾನು ಪೈಲಟ್‌ಗೆ ಅವರ ಅಭ್ಯಾಸದ ಹಾರಾಟದಲ್ಲಿ ಭಾಗವಹಿಸಬಹುದೇ ಎಂದು ಕೇಳಿದೆ. ಅವರು ಭರವಸೆ ಇಡಿ ಎಂದರು ಮತ್ತು ನನ್ನನ್ನು ವಿಮಾನದ ತಿರುಗು ಗೋಪುರದಲ್ಲಿ ಇರಿಸಿದರು. ಆದರೆ ಅಲ್ಲಿ ಯಾವುದೇ ಬಂದೂಕುಗಳು ಇರಲಿಲ್ಲ ಇದೊಂದು ಅದ್ಭುತ ಸಮಯ ಎಂದು ಅವರು ಹೇಳಿದರು. 

GoPro ಕ್ಯಾಮರಾ ಕದ್ದು ಮೇಲೆ ಹಾರಿದ ಹಕ್ಕಿ... ವಿಹಂಗಮ ದೃಶ್ಯ ಸೆರೆ
 

ಎಕ್ಸ್‌ಪ್ರೆಸ್ ಯುಕೆಯೊಂದಿಗೆ ಮಾತನಾಡಿದ ಐವರ್ ಬಟನ್,  1932 ರಲ್ಲಿ ನನ್ನ ಆರನೇ ವಯಸ್ಸಿನಲ್ಲಿ ನನ್ನ ಹೆತ್ತವರು ಸರ್ ಅಲನ್ ಕೋಬ್ಯಾಮ್‌ನ ಫ್ಲೈಯಿಂಗ್ ಸರ್ಕಸ್‌ಗೆ ಕರೆದೊಯ್ದಾಗ ಅಲ್ಲಿ ನಾನು ಹಾರಾಟದ ಮೊದಲ ಅನುಭವ ಪಡೆದೆ ಹಾಗೂ ಅದರಿಂದ ಆಕರ್ಷಿತನಾಗಿದ್ದೆ ಎಂದು ಹೇಳಿದರು. ಈ ಫ್ಲೈಯಿಂಗ್ ಸರ್ಕಸ್‌ ಅನೇಕ ಜನರಿಗೆ ವಿಮಾನ ಪ್ರಯಾಣದ ಮೊದಲ ಅನುಭವನ್ನು ನೀಡಿತು. ನಮ್ಮೆಲ್ಲರಿಗೂ ತೆರೆದ ಕಾಕ್‌ಪಿಟ್ ವಿಮಾನದಲ್ಲಿ ಹೋಗಲು ಅವರು ಹತ್ತು ಶಿಲ್ಲಿಂಗ್‌ಗಳನ್ನು(ಕೀನ್ಯಾ, ಸೋಮಾಲಿಯಾ, ತಾಂಜಾನಿಯಾ ಮುಂತಾದ ಕೆಲ ಆಫ್ರಿಕಾ ದೇಶಗಳ ಕರೆನ್ಸಿ ಶಿಲ್ಲಿಂಗ್‌ ಆಗಿದೆ) ಪಾವತಿಸಿದರು. ನನಗೆ ಕಾಕ್‌ಪಿಟ್‌ನ ಮೇಲೆ ನೋಡಲು ಸಾಧ್ಯವಾಗಲಿಲ್ಲ ಆದರೆ ನಾನು ಅದನ್ನು ಇಷ್ಟಪಟ್ಟೆ ಎಂದು ಅವರು ಹೇಳಿದರು.

ಆದಾಗ್ಯೂ, ವೃದ್ಧನ ಈ ಸಾಹಸ ಈಗ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್‌ ಸೃಷ್ಟಿಸಿದೆ. ಇವರು ಅಟಾಕ್ಸಿಯಾ (Ataxia) ಕಾಯಿಲೆಯಿಂದ ಬಳಲುತ್ತಿರುವವರಿಗಾಗಿ ಇರುವ ಚಾರಿಟಿಗಾಗಿ ಹಣವನ್ನು ಸಂಗ್ರಹಿಸಲು ಈ ಸಾಹಸ ಕೈಗೊಂಡಿದ್ದರು. ಅಟಾಕ್ಸಿಯಾ ಕಾಯಿಲೆಯು ಸಮನ್ವಯ, ಸಮತೋಲನ ಮತ್ತು ಮಾತಿನ ಮೇಲೆ ಪರಿಣಾಮ ಬೀರುವ ಸ್ಥಿತಿಯಾಗಿದೆ. ನಾನು ಅಟಾಕ್ಸಿಯಾ UK ಗಾಗಿ ಹಣವನ್ನು ಸಂಗ್ರಹಿಸುತ್ತಿದ್ದೇನೆ ಏಕೆಂದರೆ ಕುಟುಂಬವೊಂದು ಹಾಗೂ ನನಗೆ ತಿಳಿದಿರುವ ಮೂರು ವರ್ಷದ ಮಗು ಇದರಿಂದ ಬಳಲುತ್ತಿದ್ದಾರೆ. ಸುಮಾರು £1,400 ಯುರೋವನ್ನು ಇಲ್ಲಿಯವರೆಗೆ ದೇಣಿಗೆ ರೂಪದಲ್ಲಿ ಸಂಗ್ರಹಿಸಲಾಗಿದೆ ಎಂದು ತಿಳಿದು ಬಂದಿದೆ.

Follow Us:
Download App:
  • android
  • ios