Asianet Suvarna News Asianet Suvarna News

ಹೈಜಾಕ್ ಆದ ಹಡಗಿನ ನೆರವಿಗೆ ಹೋದ ಚಾಪರ್ ಮೇಲೆ ಗುಂಡು ಹಾರಿಸಿದ ಕಡಲ್ಗಳ್ಳರು: ಹೆಡೆಮುರಿ ಕಟ್ಟಿದ ಭಾರತೀಯ ನೇವಿ

ಇತ್ತೀಚೆಗೆ ಸಮುದ್ರಗಳಲ್ಲಿ ಕಡಲ್ಗಳ್ಳರ ಹಾವಳಿ ಹೆಚ್ಚಾಗಿದ್ದು,  ಹೈಜಾಕ್ ಆದ ಹಡಗೊಂದರ ನೆರವಿಗೆ ಧಾವಿಸಿದ ಭಾರತೀಯ ನೌಕಾಪಡೆಗೆ ಸೇರಿದ ನೇವಿ ಹೆಲಿಕಾಪ್ಟರ್ ಮೇಲೆ ಸೋಮಾಲಿಯಾದ ಕಡಲ್ಗಳ್ಳರು ಗುಂಡಿನ ದಾಳಿ ನಡೆಸಿದ್ದಾರೆ

Somali pirate firing at a Indian Navy chopper which was goes to rescue of hijacked Malta Ship akb
Author
First Published Mar 17, 2024, 2:51 PM IST

ನವದೆಹಲಿ: ಇತ್ತೀಚೆಗೆ ಸಮುದ್ರಗಳಲ್ಲಿ ಕಡಲ್ಗಳ್ಳರ ಹಾವಳಿ ಹೆಚ್ಚಾಗಿದ್ದು,  ಹೈಜಾಕ್ ಆದ ಹಡಗೊಂದರ ನೆರವಿಗೆ ಧಾವಿಸಿದ ಭಾರತೀಯ ನೌಕಾಪಡೆಗೆ ಸೇರಿದ ನೇವಿ ಹೆಲಿಕಾಪ್ಟರ್ ಮೇಲೆ ಸೋಮಾಲಿಯಾದ ಕಡಲ್ಗಳ್ಳರು ಗುಂಡಿನ ದಾಳಿ ನಡೆಸಿದ್ದಾರೆ. ಈ ದೃಶ್ಯಾವಳಿಗಳು ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತೀಯ ನೌಕಾಪಡೆ ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ. ವೀಡಿಯೋದಲ್ಲಿ ಆಕಾಶದಲ್ಲಿ ಹಾರಾಡುತ್ತಿರುವ ಹೆಲಿಕಾಪ್ಟರ್ ಮೇಲೆ ಚಲಿಸುತ್ತಿರುವ ಹಡಗಿನ ಮೇಲಿಂದ ಗುಂಡು ಹಾರಿಸುವುದನ್ನು ಕಾಣಬಹುದಾಗಿದೆ. 

ಅಪಹರಣಕ್ಕೊಳಗಾದ ಹಡಗನ್ನು ಸಮೀಪಿಸುತ್ತಿರುವಂತೆಯೇ ನೌಕಾಪಡೆಯ ಹೆಲಿಕಾಪ್ಟರ್‌ ಮೇಲೆ ಸೊಮಾಲಿಯ ಕಡಲುಗಳ್ಳರು ಗುಂಡು ಹಾರಿಸಿದ್ದಾರೆ.  ಸಿಸಿಲಿ ಮತ್ತು ಉತ್ತರ ಆಫ್ರಿಕಾದ ಕರಾವಳಿಯ ನಡುವಿನ ಮಧ್ಯ ಮೆಡಿಟರೇನಿಯನ್ ದ್ವೀಪಸಮೂಹವಾದ ಮಾಲ್ಟಾದ ಧ್ವಜವನ್ನು ಹೊಂದಿದ್ದ ಬೃಹತ್ ಸರಕು ಸಾಗಣೆ ಹಡಗಾ ex-MV Ruenನ್ನು ಕಳೆದ ವರ್ಷ ಡಿಸೆಂಬರ್ 14 ರಂದೇ ಕಡಲ್ಗಳ್ಳರು ಅಪಹರಿಸಿದ್ದರು. ಅಲ್ಲದೇ ಇದೇ ಹಡಗನ್ನು ಬಳಸಿಕೊಂಡು ಮೆಡಿಟರೇನಿಯನ್ ಸಮುದ್ರದಲ್ಲಿ ಕಡಲ್ಗಳ್ಳತನ ದರೋಡೆಗೆ ಮುಂದಾಗಿದ್ದರು ಎಂದು ನೌಕಾಪಡೆ ಹೇಳಿದೆ. 

ಭಾರತೀಯ ನಾವಿಕರನ್ನು ಅಪಹರಿಸಿದ ನೈಜಿರಿಯಾ ಕಡಲ್ಗಳ್ಳರು!

ಭಾರತೀಯ ನೌಕಾಪಡೆಯ ಯುದ್ಧನೌಕೆಯು, ಈ ಅಪಹರಿಸಲ್ಪಟ್ಟ ಹಡಗನ್ನು ತಡೆದ ನಂತರ, ಕಡಲ್ಗಳ್ಳರು ಈ ಗುಂಡಿನ ದಾಳಿ ನಡೆಸಿದರು. ಎಂಟು ಸೆಕೆಂಡ್‌ಗಳ  ವಿಡಿಯೋದಲ್ಲಿ ಕಡಲುಗಳ್ಳರ ಹಡಗಿನ ಡೆಕ್‌ನತ್ತ ನಡೆದಾಡುವುದನ್ನು ತೋರಿಸುತ್ತದೆ ಮತ್ತು ಅಪಹರಣಕ್ಕೊಳಗಾದ ಹಡಗಿನ ಮೇಲೆ ಹಾರಾಡುತ್ತಿರುವ ಹೆಲಿಕಾಪ್ಟರ್‌ಗೆ ಗುರಿಯಿಟ್ಟು ಗುಂಡು ಹಾರಿಸುವುದನ್ನು ಕಾಣಬಹುದು.

ಭಾರತೀಯ ನೌಕಾಪಡೆಯು ಹೈಜಾಕ್ ಆದ ಎಕ್ಸ್ ಎಂವಿ ರುಯೆನ್ ಅನ್ನು ತಡೆಯುವ ಮೂಲಕ ಆ ಪ್ರದೇಶದ ಮೂಲಕ ಸಂಚರಿಸುವ ಹಡಗುಗಳನ್ನು ಹೈಜಾಕ್ ಮಾಡಲು ಯತ್ನಿಸುವ ಸೊಮಾಲಿಯಾ ಕಡಲ್ಗಳ್ಳರ ಯತ್ನ ವಿಫಲಗೊಳಿಸಿದೆ. 14 ಡಿಸೆಂಬರ್ 23 ರಂದು ಸೊಮಾಲಿಯ ಕಡಲ್ಗಳ್ಳರಿಂದ ಈ ಎಕ್ಸ್-ಎಂವಿ ರುಯೆನ್ ಹಡಗು ಅಪಹರಿಸಲ್ಪಟ್ಟಿತ್ತು ಈ ಹಡಗನ್ನು ಹೈಜಾಕ್ ಮಾಡಿದ ಬಳಿಕ ಕಡಲ್ಗಳ್ಳರು ಅದನ್ನು ತಮ್ಮದಾಗಿಸಿಕೊಂಡು ಆ ಹಾದಿಯಲ್ಲಿ ಸಾಗುವ ಇತರ ಹಡಗುಗಳ ದರೋಡೆಗೆ ಬಳಸುತ್ತಿದ್ದರು ಎಂದು ಭಾರತೀಯ ನೌಕಾಪಡೆ ತನ್ನ  ಟ್ವಿಟ್ಟರ್‌ ಹೇಳಿಕೆಯಲ್ಲಿ ತಿಳಿಸಿದೆ.

ಗುಂಡಿನ ದಾಳಿ ಹಿನ್ನೆಲೆಯಲ್ಲಿ ನೌಕಾಪಡೆಯು ಈಗ ಆತ್ಮರಕ್ಷಣೆಗಾಗಿ  ಪ್ರಯತ್ನಿಸುತ್ತಿದ್ದು, ಕಡಲ್ಗಳ್ಳರಿಗೆ ಶರಣಾಗುವಂತೆ ಹಾಗೂ  ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಕಡಲ್ಗಳ್ಳರಿಗೆ ಕರೆ ನೀಡಿದೆ ಎಂದು ತಿಳಿದು ಬಂದಿದೆ. ಮಾರ್ಚ್ 15 ರಂದು ಭಾರತೀಯ ಯುದ್ಧ ನೌಕೆಯೂ ಈ ಅಪಹರಣಕ್ಕೊಳಗಾದ ಹಡಗನ್ನು ತಡೆಯಿತು. ಈ ವೇಳೆ ಕಡಲ್ಗಳ್ಳರು ಗುಂಡು ಹಾರಿಸಿದಾಗ ನೌಕಾಪಡೆಯೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಕಡಲ್ಗಳ್ಳರನ್ನು ಎದುರಿಸಲು ಅಂತಾರಾಷ್ಟ್ರೀಯ ಕಾನೂನು ಕ್ರಮವನ್ನು ತೆಗೆದುಕೊಳ್ಳುತ್ತಿದೆ. 

ಇತ್ತೀಚಿಗೆ ಬಂದ ವರದಿಯ ಪ್ರಕಾರ ಭಾರತೀಯ ನೌಕಾಪಡೆಯೂ ಅಪಹರಣಕ್ಕೊಳಗಾದ ಹಡನ್ನು ಹತೋಟಿಗೆ ಪಡೆದಿದ್ದು, ಅದರಲ್ಲಿದ್ದ  17 ಸಿಬ್ಬಂದಿಯನ್ನು ಸ್ಥಳಾಂತರ ಮಾಡಿದೆ. ಅಲ್ಲದೇ ಮಾಲ್ಟಿ ದೇಶದ ಹಡಗಿನಲ್ಲಿದ್ದ ಎಲ್ಲಾ 35 ಕಡಲ್ಗಳ್ಳರು ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಕಾರ್ಯಾಚರಣೆ ಒಟ್ಟು 40 ಗಂಟೆಗಳನ್ನು ತೆಗೆದುಕೊಂಡಿದೆ. ವಶಕ್ಕೆ ಪಡೆದ ಹಡಗಿನಲ್ಲಿ ಅಕ್ರಮ ಶಸ್ತ್ರಾಸ್ತ್ರಗಳಿರುವ ಬಗ್ಗೆ ತಪಾಸಣೆ ನಡೆಸಲಾಗಿದೆ. 

 

 

Follow Us:
Download App:
  • android
  • ios