ಅಬುಜಾ(ಮೇ.07): ಸರಕು ಸಾಗಾಣಿಕಾ ಹಡಗಿನ ಮೇಲೆ ದಾಳಿ ಮಾಡಿ, ಭಾರತ ಮೂಲದ ಐವರು ನಾವಿಕರನ್ನು ಕಡಲ್ಗಳ್ಳರು ಅಪಹರಿಸಿರುವ ಘಟನೆ ನೈಜಿರಿಯಾದಲ್ಲಿ ನಡೆದಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್,  ಅಪಹರಣಕ್ಕೀಡಾದ ಭಾರತೀಯ ನಾವಿಕರ ಸುರಕ್ಷಿತ ಬಿಡುಗಡೆ ಕ್ರಮ ಕೈಗೊಳ್ಳುವಂತೆ ನೈಜಿರಿಯಾದ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಹೇಳಿದ್ದಾರೆ.

ಕಡಲ್ಗಳ್ಳರ ವಶದಲ್ಲಿರುವ ಭಾರತೀಯ ನಾವಿಕರ ಬಿಡುಗಡೆಗಾಗಿ ನೈಜಿರಿಯಾ ಸರ್ಕಾರದೊಂದಿಗೆ ಭಾರತ ಸರ್ಕಾರ ಚರ್ಚೆ ನಡೆಸಿದೆ ಎಂದು ಸುಷ್ಮಾ ಮಾಹಿತಿ ನೀಡಿದ್ದಾರೆ.