ದೇಶದಲ್ಲಿ ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಇಂಥ ಸಂದರ್ಭದಲ್ಲಿ ಸಾರಿಗೆ ವ್ಯವಸ್ಥೆ ಕೂಡ ಬಂದ್ ಆಗಿದೆ. ವೈಯಕ್ತಿಕ ಸಾರಿಗೆಯನ್ನು ಬಳಸುವ ಶಕ್ತಿ ನನ್ನಲ್ಲಿಲ್ಲ. ಹಾಗಾಗಿ ಕತ್ತೆಯ ಮೇಲೆ ಆಫೀಸ್ ಗೆ ಬರಲು ಅನುಮತಿ ನೀಡಿ ಎಂದು ಪಾಕಿಸ್ತಾನ ನಾಗರೀಕ ವಿಮಾನಯಾನ ಪ್ರಾಧಿಕಾರದ ಉದ್ಯೋಗಿ ಪತ್ರ ಬರೆದಿದ್ದಾನೆ.

ಇಸ್ಲಾಮಾಬಾದ್ (ಜೂನ್ 3): ಪಾಕಿಸ್ತಾನದಲ್ಲಿ( Pakista) ದಿನದಿಂದ ದಿನಕ್ಕೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಆಗುತ್ತಿದೆ. ಇದರಿಂದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಾಕಿಸ್ತಾನದ ನಾಗರೀಕ ವಿಮಾನಯಾನ ಪ್ರಾಧಿಕಾರದ ಅಧಿಕಾರಿಯೊಬ್ಬ ನಾನು ಕತ್ತೆಯ ಮೇಲೆ ಆಫೀಸ್ ಗೆ ಬರ್ತೇನೆ ಅದಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ನಾಗರಿಕ ವಿಮಾನಯಾನ ಪ್ರಾಧಿಕಾರದ (ಸಿಎಎ) ಮಹಾನಿರ್ದೇಶಕರಿಗೆ ಪತ್ರ ಬರೆದಿರುವ ರಾಜಾ ಆಸಿಫ್ ಇಕ್ಬಾಲ್ (raja asif iqbal) ಅವರು, ತಾವು 25 ವರ್ಷಗಳಿಂದ ಸೇವೆಯಲ್ಲಿದ್ದು ಈಗ ಇಸ್ಲಾಮಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಬರೆದಿದ್ದಾರೆ. ದೇಶದಲ್ಲಿನ ಹಣದುಬ್ಬರವು ಕೇವಲ ಬಡವರ ಬೆನ್ನುಮೂಳೆ ಮುರಿದಿದ್ದು ಮಾತ್ರವಲ್ಲ, ಮಧ್ಯಮವರ್ಗದವರೂ ಕೂಡ ಇದಕ್ಕೆ ಬಲಿಯಾಗಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಇಸ್ಲಾಮಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನನ್ನ ಕತ್ತೆಯ ಬಂಡಿಯನ್ನು (donkey cart) ತರಲು ದಯವಿಟ್ಟು ಅನುಮತಿ ನೀಡಿ ಎಂದು ಅವರು ಕೋರಿಕೊಂಡಿದ್ದಾರೆ. ಈ ಹಣದುಬ್ಬರದಲ್ಲಿ ಸಾರಿಗೆ ಸಂಸ್ಥೆಯು ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ. ಏರುತ್ತಿರುವ ಪೆಟ್ರೋಲ್ ಬೆಲೆಯಿಂದಾಗಿ ವೈಯಕ್ತಿಕ ಸಾರಿಗೆಯನ್ನು ಬಳಸುವುದು ಅಸಾಧ್ಯವಾಗಿದೆ ಎಂದು ಆಸಿಫ್ ಇಕ್ಬಾಲ್ ಬರೆದುಕೊಂಡಿದ್ದಾರೆ.

ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು, ನಾನು ಕಚೇರಿಗೆ ಕತ್ತೆಯ ಬಂಡಿಯ ಮೇಲೆ ಬರಲು ತೀರ್ಮಾನಿಸಿದ್ದೇನೆ. ಪಾರ್ಕಿಂಗ್ ಪ್ರದೇಶದಲ್ಲಿ ನನ್ನ ಕತ್ತೆಯ ಬಂಡಿಯನ್ನು ನಿಲ್ಲಿಸಲು ಅವಕಾಶ ಮಾಡಿಕೊಡಿ ಎಂದು ಆತ ಬರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಎ ವಕ್ತಾರ ಸೈಫಲುಲ್ಲಾ ಖಾನ್, ಪ್ರಾಧಿಕಾರದ ಪ್ರತಿ ಸಿಬ್ಬಂದಿಗೂ ತೈಲದ ಭತ್ಯೆಯನ್ನು ನೀಡಲಾಗುತ್ತಿದೆ. ಅದು ಸಿಗದೇ ಇದ್ದ ಪಕ್ಷದಲ್ಲಿ ಸಿಬ್ಬಂದಿಗೆ ಪಿಕ್ ಅಪ್ ಹಾಗೂ ಡ್ರಾಪ್ ಸರ್ವೀಸ್ ಕೂಡ ಇದೆ. "ನಮ್ಮಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿಗೆ ಪಿಕ್ ಅಪ್ ಹಾಗೂ ಡ್ರಾಪ್ ಸರ್ವೀಸ್ ಇದೆ. ಏರ್ ಪೋರ್ಟ್ ಇಂದಲೇ ಉದ್ಯೋಗಿಗಳಿಗೆ ಮೆಟ್ರೋ ಬಸ್ ಸೇವೆ ಕೂಡ ಇದೆ' ಎಂದು ಸೈಫಲುಲ್ಲಾ ಖಾನ್ ಹೇಳಿದ್ದಾರೆ. ಈ ಪತ್ರ ಬರೀ ಮಾಧ್ಯಮಗಳಲ್ಲಿ ಹೈಲೈಟ್ ಮಾಡುವ ತಂತ್ರವಲ್ಲದೇ ಮತ್ತೇನೂ ಅಲ್ಲ ಎಂದು ಸೈಫಲುಲ್ಲಾ ಹೇಳಿದ್ದಾರೆ.

ಕಳೆದ ವಾರವಷ್ಟೇ ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಮಾಡಲಾಗಿತ್ತು. ಅದಾದ ಒಂದು ವಾರದ ಬಳಿಕ ಪೆಟ್ರೋಲ್ ದರದಲ್ಲಿ ಮತ್ತೆ ಏರಿಕೆ ಮಾಡಲಾಗಿತ್ತು. ಪ್ರಸ್ತುತ ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ಗೆ 209.86 ರೂಪಾಯಿ ಹಾಗೂ ಒಂದು ಲೀಟರ್ ಡೀಸೆಲ್ ಗೆ 204.15 ರೂಪಾಯಿಯಾಗಿದೆ. ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ದರದಲ್ಲಿ 30 ರೂಪಾಯಿ ಏರಿಕೆ ಮಾಡಿದ್ದು, ಶುಕ್ರವಾರದಿಂದಲೇ ಇದು ಜಾರಿಗೆ ಬಂದಿದೆ.

ಭಾರತವು ಪಾಕಿಸ್ತಾವನ್ನು ಮೂರು ಹೋಳು ಮಾಡುತ್ತದೆ ಎಂದು ಎಚ್ಚರಿಸಿದ ಮಾಜಿ ಪ್ರಧಾನಿ ಇಮ್ರಾನ್ ಖಾನ್!

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿದ ತೆರಿಗೆ ಕ್ಷಮಾದಾನ ಯೋಜನೆಯು ಜುಲೈ 2 ರಂದು ಮುಕ್ತಾಯಗೊಳ್ಳುತ್ತಿದೆ ಎಂದು ಘೋಷಿಸಿದರು, ಅದನ್ನು ಪಡೆಯಲು ಯಾರಿಂದಲೂ ಯಾವುದೇ ಅರ್ಜಿ ಸ್ವೀಕಾರ ಮಾಡಲಾಗಿಲ್ಲ ಎಂದಿದ್ದಾರೆ.

Economic Crisis ಲಂಕಾ ಹಾದಿಯಲ್ಲಿ ಪಾಕಿಸ್ತಾನ, ಆರ್ಥಿಕ ಬಿಕ್ಕಟ್ಟಿನಿಂದ ತುಪ್ಪ, ಖಾದ್ಯ ತೈಲ ಬೆಲೆ ದಾಖಲೆಯ ಗರಿಷ್ಠ ಮಟ್ಟ!

ಅನಿವಾರ್ಯ ನಿರ್ಧಾರವು ಹಣದುಬ್ಬರವನ್ನು ಹೆಚ್ಚಿಸುತ್ತದೆ ಮತ್ತು ಜನರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಅವರು ಒಪ್ಪಿಕೊಂಡರು ಆದರೆ ಹಿಂದಿನ ಸರ್ಕಾರದ "ತಪ್ಪು ನಿರ್ಧಾರಗಳಿಂದ" ದೇಶವನ್ನು ದಿವಾಳಿಯಾಗಲು ಬಿಡಲು ಸಾಧ್ಯವಿಲ್ಲ ಎಂದು ಹೇಳಿದರು, ಏಕೆಂದರೆ ಅಂತರರಾಷ್ಟ್ರೀಯ ಬೆಲೆಗಳು ಏರುತ್ತಿದೆ ಮತ್ತು ಸರ್ಕಾರವು ತೆರಿಗೆಗಳನ್ನು ಹೊರತುಪಡಿಸಿ ಪೆಟ್ರೋಲಿಯಂ ಸಬ್ಸಿಡಿಗಳ ಮೇಲೆ ತಿಂಗಳಿಗೆ ಸುಮಾರು 120 ರಿಂದ 130 ಬಿಲಿಯನ್ ನಷ್ಟವನ್ನು ಅನುಭವಿಸುತ್ತಿದೆ. ಹೊಸ ದರಗಳಲ್ಲಿ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿ ಅಥವಾ ನಷ್ಟವು ತಿಂಗಳಿಗೆ ಸುಮಾರು 25 ಬಿಲಿಯನ್ ಅಮೆರಿಕನ್ ಡಾಲರ್ ಕಡಿಮೆಯಾಗುತ್ತದೆ.