ಉಕ್ರೇನ್ ಮತ್ತು ರಷ್ಯಾ ನಡುವಿನ ಸಮರ ಈಗ ಎರಡನೇ ತಿಂಗಳಿಗೆ ಕಾಲಿಟ್ಟಿದ್ದು, ಅಂತ್ಯವಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಈ ನಡುವೆ ಉಕ್ರೇನ್‌ ಸೈನಿಕನ ಈ ವಿಡಿಯೋ ಹೊರಬಂದಿದೆ.

ಉಕ್ರೇನ್‌ (ಏ. 20): ಯುದ್ಧ ಪೀಡಿತ ಉಕ್ರೇನಲ್ಲಿ ಸ್ಮಾರ್ಟ್‌ಫೋನ್‌ವೊಂದು ಸೈನಿಕನ ಜೀವ ಉಳಿಸಿದ್ದು, ಸೈನಿಕ ಹಾನಿಗೊಳಗಾದ ಸ್ಮಾರ್ಟ್‌ಫೋನನ್ನು ತೋರಿಸುತ್ತರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಬ್ಬರು ಸೈನಿಕರ ನಡುವಿನ ಸಂಭಾಷಣೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿದ್ದು, ವಿಡಿಯೋದಲ್ಲಿ ಸೈನಿಕನೊಬ್ಬ ತನ್ನ ಫೋನನ್ನು ಜೇಬಿನಿಂದ ಹೊರತೆಗೆದು ಅದರಲ್ಲಿ ಬುಲೆಟ್ಟೊಂದನ್ನು ಹೊಕ್ಕಿರುವುದನ್ನು ತೋರಿಸುತ್ತಿದ್ದಾನೆ. ರಷ್ಯಾ ಉಕ್ರೇನ್‌ ಯುದ್ಧ ಆರಂಭವಾದಾಗಿನಿಂದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. 

ಈಗ ಉಕ್ರೇನ್‌ ಯೊಧನ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ರಷ್ಯಾದ ಪಡೆಗಳಿಂದ ಹಾರಿಸಲ್ಪಟ್ಟ ಗುಂಡಿನಿಂದ ಉಕ್ರೇನಿಯನ್ ಸೈನಿಕ ಜೀವವನ್ನು ಸ್ಮಾರ್ಟ್‌ಫೋನ್ ಉಳಿಸಿದ್ದು, 7.62 ಎಂಎಂ ಬುಲೆಟನ್ನು ಮೊಬೈಲ್‌ ಯಶಸ್ವಿಯಾಗಿ ತಡೆದಿದೆ. ಬುಲೆಟ್ ಫೋನ್‌ನಲ್ಲಿಯೇ ಉಳಿದಿರುವುದನ್ನು ನಾವು ವೈರಲ್‌ ವಿಡಿಯೋದಲ್ಲಿ ಕಾಣಬಹುದು. 

ಇದನ್ನೂ ಓದಿ:ಇಂಡಿಗೋ ಗಗನಸಖಿ ಕಣ್ಣೀರಿನ ವಿದಾಯ: ವೈರಲ್‌ ವಿಡಿಯೋಗೆ ಮನಸೋತ ನೆಟ್ಟಿಗರು

ಉಕ್ರೇನ್ ಮತ್ತು ರಷ್ಯಾ ನಡುವಿನ ಸಮರ ಈಗ ಎರಡನೆ ತಿಂಗಳಿಗೆ ಕಾಲಿಟ್ಟಿದ್ದು, ಅಂತ್ಯವಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಈ ನಡುವೆ ಉಕ್ರೇನ್‌ ಸೈನಿಕನ ಈ ವಿಡಿಯೋ ಹೊರಬಂದಿದೆ. ಉಕ್ರೇನಿಯನ್ ಸೈನಿಕನು ವೈರಲ್ ವೀಡಿಯೊದಲ್ಲಿ, ಸಿಕ್ಕಿಬಿದ್ದ ಬುಲೆಟ್‌ನೊಂದಿಗೆ ತನ್ನ ಹಾನಿಗೊಳಗಾದ ಫೋನ್ ಅನ್ನು ತೋರಿಸುತ್ತಾ "...ಸ್ಮಾರ್ಟ್‌ಫೋನ್ ನನ್ನ ಜೀವವನ್ನು ಉಳಿಸಿದೆ" ಎಂದು ಹೇಳುತ್ತಾನೆ.

YouTube video player

ವೈರಲ್ ವೀಡಿಯೊದಲ್ಲಿ, ಸೈನಿಕನು ತನ್ನ ಸಹ ಯೋಧರೊಂದಿಗೆ ಮಾತನಾಡುತಿದ್ದು, ಹರ್ಷಚಿತ್ತದಿಂದ ತನ್ನ ಮೊಬೈಲ್ ಫೋನ್ ತೋರಿಸುತ್ತಿದ್ದಾನೆ. ಸೈನಿಕನು ತನ್ನ ಸಹ ಯೋಧರೊಂದಿಗೆ ಮಾತನಾಡುವಾಗ ಹಿನ್ನೆಲೆಯಲ್ಲಿ ಗುಂಡಿನ ಸದ್ದುಗಳನ್ನು ಕೂಡ ಕೇಳಬಹುದು. 

ಇನ್ನು ಈ ವೈರಲ್‌ ವಿಡಿಯೋಗೆ ನೆಟ್ಟಿಗರು ಫನ್ನೀ ಕಮೆಂಟ್ಸ್‌ಗಳನ್ನು ಹಾಕಿದ್ದು ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಸಾಕಷ್ಟು ಲೈಕ್ಸ್‌, ಕಾಮೆಂಟ್ಸ್‌ ಹಾಗೂ ಶೇರ್ಸ್‌ ಪಡೆದುಕೊಂಡಿದೆ. "ಇದು ನೋಕಿಯಾ ಆಗಿದ್ದರೆ ಈ ಫೋನ್‌ ಇನ್ನೂ ಕಾರ್ಯನಿರ್ವಹಿಸುತ್ತದೆ" ಎಂದು ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದರೆ, "ಅದು ನೋಕಿಯಾ ಆಗಿದ್ದರೆ, ಅದು ಬುಲೆಟನ್ನು ಶೂಟರ್‌ಗೆ ಹಿಂತಿರುಗಿಸುತ್ತಿತ್ತು" ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.

ರಷ್ಯಾ ಉಕ್ರೇನ್‌ ಯುದ್ಧ:  ಭಾರೀ ಸುಲಭದ ಗೆಲುವಿನ ಲೆಕ್ಕಾಚಾರದಲ್ಲಿ ಫೆ.24ರಂದು ಉಕ್ರೇನ್‌ ಮೇಲೆ ರಷ್ಯಾ ದಾಳಿ ಆರಂಭಿಸಿ ಈಗ ಎರಡೂ ತಿಂಗ ತುಂಬಿದೆ. ಆದರೆ ಮಿತ್ರ ದೇಶಗಳು ನೀಡಿದ ಶಸ್ತ್ರಾಸ್ತ್ರಗಳನ್ನೇ ಬಳಸಿಕೊಂಡು, ರಷ್ಯಾ ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾಗಿರುವ ಉಕ್ರೇನ್‌ ಸೇನೆ, ಕಳೆದ ಎರಡು ತಿಂಗಳಲ್ಲಿ ಸಾವಿರಾರು ಯೋಧರು, ನಾಗರಿಕರ ಸಾವು, ಭಾರೀ ಆಸ್ತಿ ಪಾಸ್ತಿ ನಷ್ಟದ ಹೊರತಾಗಿಯೂ ದೇಶದ ಸ್ವಾತಂತ್ರ್ಯ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ:ಉಕ್ರೇನ್‌ನ ಬೃಹತ್‌ ಸಿಟಿಗಳ ಮೇಲೆ ರಷ್ಯಾ ಭೀಕರ ದಾಳಿ

ರಾಜಧಾನಿ ಕೀವ್‌, ಖಾರ್ಕೀವ್‌, ಮರಿಯುಪೋಲ್‌, ಒಡೆಸ್ಸಿ ಸೇರಿದಂತೆ ಪ್ರಮುಖ ನಗರಗಳನ್ನೇ ಗುರಿಯಾಗಿಸಿ ಸತತ ದಾಳಿ ನಡೆಸಿದ್ದ ರಷ್ಯಾ, ಇದೀಗ ಉಕ್ರೇನ್‌ ವಶದಲ್ಲಿರುವ ಪ್ರಮುಖ ನಗರಗಳನ್ನು ಕೈಬಿಟ್ಟು, ಹಲವು ವರ್ಷಗಳಿಂದ ಉಕ್ರೇನಿ ಬಂಡುಕೋರರ ವಶದಲ್ಲಿರುವ ಡೋನ್‌ಬಾಸ್‌ ಪ್ರದೇಶವನ್ನು ಪೂರ್ಣವಾಗಿ ವಶಪಡಿಸಿಕೊಳ್ಳುವತ್ತ ಗಮನ ಹರಿಸಿದೆ. ಹೀಗಾಗಿ ಕಳೆದೊಂದು ವಾರದಿಂದ ಉಕ್ರೇನ್‌ನ ಪ್ರಮುಖ ನಗರಗಳಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡು ತನ್ನ ಗಮನವನ್ನು ಕೇವಲ ದೇಶದ ಪೂರ್ವ ಭಾಗಕ್ಕೆ ಸೀಮಿತಗೊಳಿಸಿದೆ. ಅದರಲ್ಲೂ