ಇಂಡಿಗೋ ಗಗನಸಖಿ ಕಣ್ಣೀರಿನ ವಿದಾಯ: ವೈರಲ್ ವಿಡಿಯೋಗೆ ಮನಸೋತ ನೆಟ್ಟಿಗರು
ಗಗನಸಖಿಯೊಬ್ಬಳು ಇಂಡಿಗೋ ಸಂಸ್ಥೆಯಲ್ಲಿನ ತಮ್ಮ ಕೆಲಸದ ಕೊನೆ ದಿನ ಘೋಷಿಸುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ.
ಸಾಮಾಜಿಕ ಜಾಲತಾಣದದಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತವೆ. ಇಂಟರ್‌ನೆಟ್‌ನಲ್ಲಿ ನೆಟ್ಟಿರರನ್ನು ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಸಾಕಷ್ಟು ವಿಡೀಯೋಗಳು ಸಿಗುತ್ತವೆ. ಇಂಥಹದ್ದೇ ವಿಡಿಯೋವೊಂದು ಈಗ ವೈರಲ್ ಆಗುತ್ತಿದ್ದು ಗಗನಸಖಿಯ ಈ ವಿಡಿಯೋಗೆ ನೆಟ್ಟಿಗರು ಮನಸೋತಿದ್ದಾರೆ. ಗಗನಸಖಿಯೊಬ್ಬಳು ಇಂಡಿಗೋ ಸಂಸ್ಥೆಯಲ್ಲಿನ ತಮ್ಮ ಕೆಲಸದ ಕೊನೆ ದಿನ ಘೋಷಿಸುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ.
ಅಮೃತಾ ಸುರೇಶ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಫ್ಲೈಟ್ ಅಟೆಂಡೆಂಟ್ ಸುರಭಿ ನಾಯರ್ ಪ್ರಯಾಣಿಕರೊಂದಿಗೆ ಮಾತನಾಡುವುದನ್ನು ಕಾಣಬಹುದು. ವಿಡಿಯೋದಲ್ಲಿ ಸುರಭಿ ಕಣ್ಣೀರು ಸುರಿಸುತ್ತಾ ತಮ್ಮ ಸಂಸ್ಥೆಯ ಬಗ್ಗೆ ಮತ್ತು ತನ್ನ ಹಿರಿಯರಿಂದ ಕಲಿತ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಇಂಡಿಗೋ ಸಂಸ್ಥೆಗೆ ವಿದಾಯ ಹೇಳಿದ್ದಾಳೆ
ಇದನ್ನೂ ಓದಿ: ತಾಂಜೇನಿಯಾದಲ್ಲೂ ಕೆಜಿಎಫ್ 2 ಹವಾ; ಕಿಲಿ ಪಾಲ್ ಬಾಯಲ್ಲಿ ಕೆಜಿಎಫ್ ಡೈಲಾಗ್.!
“ಎಲ್ಲರಿಗೂ ಧನ್ಯವಾದಗಳು. ನಮ್ಮೊಂದಿಗೆ ಪ್ರಯಾಣಿಸುವ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮ್ಮಿಂದಾಗಿ, ನಾವು ಸಮಯಕ್ಕೆ ಸರಿಯಾಗಿ ಅಥವಾ ಸಮಯಕ್ಕಿಂತ ಮುಂಚೆಯೇ - ನಮ್ಮ ವಿಮಾನಗಳಂತೆಯೇ ನಮಗೆ ಸಂಬಳವನ್ನು ಪಡೆಯುತ್ತೇವೆ, ”ಎಂದು ಹೇಳುತ್ತಾ ಸುರಭಿ ಆನಂದ ಭಾಷ್ಪ ಸುರಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ನೆಟ್ಟಗರು ಸುರಭಿಗೆ ಶುಭ ಹಾರೈಕೆಗಳನ್ನು ನೀಡಿದ್ದು ಅವಳಂತಹ ನಿಷ್ಠಾವಂತ ಉದ್ಯೋಗಿ ಪಡೆಯಲು ಸಂಸ್ಥೆ ಅದೃಷ್ಟಶಾಲಿಯಾಗಿರಬೇಕು ಎಂದು ಬರೆದಿದ್ದಾರೆ.
ಕಳೆದ ವರ್ಷ, ಸೆಪ್ಟೆಂಬರ್‌ನಲ್ಲಿ, ಆಯತ್ ಎಂಬ ಇಂಡಿಗೋ ಗಗನಸಖಿ ಮನಿಕೆ ಮ್ಯಾಗೆ ಹಿತೆ ಎಂಬ ವೈರಲ್ ಹಾಡಿಗೆ ತನ್ನ ಮುದ್ದಾದ ನೃತ್ಯಕ್ಕಾಗಿ ವೈರಲ್ ಆಗಿದ್ದರು. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಿಲ್ಲೊಂದು ವಿಡಿಯೋ ವೈರಲ್ ಆಗುತ್ತಿರತ್ತದೆ. ಈ ವೀಡಿಯೊ ಕುರಿತು ನಿಮ್ಮ ಅಭಿಪ್ರಾಯವೇನು?