ಇಂಗ್ಲೆಂಡ್(ಡಿ.24): ರೂಪಾಂತಗೊಂಡ ಕೊರೋನಾದ ಎರಡನೇ ಅಲೆ ಜಗತ್ತನ್ನು ಮತ್ತೊಮ್ಮೆ ಪೀಡಿಸುತ್ತಿದ್ದು, ಇಂಗ್ಲೆಂಡ್‌ನಲ್ಲಿ ಕೊರೋನಾ ಪರೀಕ್ಷೆ ಮಾಡುತ್ತಿದ್ದು, ಹಬ್ಬಸ ಸಮಯದಲ್ಲೇ 10 ಸಾವಿರಕ್ಕೂ ಹೆಚ್ಚು ಟ್ರಕ್ಕರ್ಸ್ ದಾರಿ ಮಧ್ಯೆ ಬಾಕಿಯಾಗಿದ್ದಾರೆ. ಹಾಠಾತ್ತನೆ ನಡೆಯುತ್ತಿರೋ ಕೊರೋನಾ ಪರೀಕ್ಷೆಯಿಂದಾಗಿ ಟ್ರಕ್‌ನಲ್ಲಿದ್ದವರೆಲ್ಲಾ ಆಹಾರ, ನಿದ್ರೆಯಿಲ್ಲದೆ ರಸ್ತೆಯಲ್ಲೇ ಕಳೆಯುವಂತಾಗಿದೆ.

ಫ್ರಾನ್ಸ್ ಗಡಿಯಲ್ಲಿ ಸಿಕ್ಕಿ ಹಾಕಿಕೊಂಡಿರುವ ಟ್ರಕ್ಕರ್ಸ್‌ಗಳಿಗೆ ಅನಿರೀಕ್ಷಿತ ನೆರವು ಸಿಕ್ಕಿದೆ. ಚಿಕ್ಕದೊಂದು ಸ್ವಯಂಸೇವಕರ ಪಡೆ ಟ್ರಕ್ಕರ್ಸ್‌ಗಳಿಗೆ ನೆರವಾಗಿದೆ. ಬ್ರಿಟಿಷ್ ಸಿಖ್ಖ್ ಸ್ವಯಂ ಸೇವಕರ ತಂಡವೊಂದು ಚಿಕ್‌ಪೀ ಕರಿ ಮತ್ತು ಫೀಝಾಗಳನ್ನು ಟ್ರಕ್ಕರ್ಸ್‌ಗೆ ಹಂಚಿದೆ.

ಕ್ರಿಸ್ಮಸ್‌ನ ಸಂಪ್ರದಾಯಿಕ ಆಹಾರ: ಖಾದ್ಯಗಳ ಹಿಂದೆ ಇದೆ ಅಚ್ಚರಿಯ ಕಥೆ

ನಾವು ಸಿಖ್ ಧರ್ಮದಲ್ಲಿದ್ದೇವೆ, ನಮ್ಮಲ್ಲಿ ಲಂಗರ್ ಎಂಬ ಪರಿಕಲ್ಪನೆಯನ್ನು ನಾವು ಅನುಸರಿಸುತ್ತೇವೆ. ಸಮುದಾಯ ಅಡಿಗೆ ನಮ್ಮಲ್ಲಿ ಹಿಂದಿನಿಂದಲೂ ಇದೆ ಎಂದು ಖಲ್ಸಾ ಏಡ್ ಸಂಸ್ಥಾಪಕ ರವೀಂದರ್ ಸಿಂಗ್ ರಾಯಿಟರ್ಸ್ಗೆ ತಿಳಿಸಿದ್ದಾರೆ.

ನಾವು ಬ್ರಿಟಿಷ್ ಸಿಖ್ಖರು ನಮ್ಮ ಸಂಪ್ರದಾಯವನ್ನು ಈಗ ನಡೆಸುವುದು ಕನಿಷ್ಠಸಹಾಯ. ಕ್ರಿಸ್‌ಮಸ್‌ ಸಮೀಪದಲ್ಲಿರುವಾಗ ಈ ನೆಲದಲ್ಲಿ ಜನರಿಗೆ ಏನಾಗುತ್ತಿದೆ ಎಂದು ತಿಳಿಯದ ಸ್ಥಿತಿಯಲ್ಲಿದ್ದಾರೆ ಎಂದಿದ್ದಾರೆ.

ಕೇಕ್ ಶೋನಲ್ಲಿ ಕೊರೋನಾ ಕೇಕ್..! ಇನ್ನೂ ಏನೇನಿವೆ..? ಇಲ್ನೋಡಿ ವಿಡಿಯೋ

ಅನೇಕ ಟ್ರಕ್ ಚಾಲಕರು ರಸ್ತೆಯ ಬದಿಯಲ್ಲಿಯೇ ತಮ್ಮಲ್ಲಿ ಉಳಿದಿರುವ ಕೊನೆಯ ಆಹಾರವನ್ನು ಸೇವಿಸಿದ್ದಾರೆ ಎಂದಿದ್ದಾರೆ. ಟ್ರಕ್ಕರ್ಸ್ ಕ್ರಿಸ್‌ಮಸ್‌ಗಾಗಿ ಮನೆಗೆ ಸೇರುತ್ತಾರೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ. ಕುಟುಂಬದ ಜೊತೆ ಹಬ್ಬ ಆಚರಿಸಬೇಕಿದ್ದ ಜನ ಕೊರೋನಾದಿಂದಾಗಿ ಸಿಕ್ಕಿ ಹಾಕಿಕೊಂಡಿದ್ದಾರೆ.