ಕದನ ವಿರಾಮ, ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್‌ ಉಗ್ರರ ಸಮ್ಮತಿ; ಇಸ್ರೇಲ್‌- ಹಮಾಸ್‌ ಕದನದಲ್ಲಿ ಮಹತ್ವದ ಬೆಳವಣಿಗೆ

ಇಸ್ರೇಲ್‌-ಹಮಾಸ್‌ ನಡುವಿನ ಸಮರಕ್ಕೆ 6 ವಾರಗಳ ಕದನ ವಿರಾಮ ಘೋಷಣೆಯಾಗಿದೆ. ಒತ್ತೆಯಾಳುಗಳ ಬಿಡುಗಡೆಗೆ ಎರಡೂ ಕಡೆಯಿಂದ ಸಮ್ಮತಿ ವ್ಯಕ್ತವಾಗಿದ್ದು, ಒಪ್ಪಂದ ಪಾಲನೆಯಾದರೆ ಕಾಯಂ ಯುದ್ಧ ಸ್ಥಗಿತದ ಮಾತುಕತೆ ನಡೆಯಲಿದೆ.

Significant development in the Israel-Hamas conflict mrq

ಕೈರೋ: ಕಳೆದ 15 ತಿಂಗಳಲ್ಲಿ 50 ಸಾವಿರಕ್ಕೂ ಹೆಚ್ಚು ಜನರ ಬಲಿಪಡೆದ, 1 ಲಕ್ಷಕ್ಕೂ ಹೆಚ್ಚು ಜನರು ಗಾಯಗೊಂಡ ಇಸ್ರೇಲ್‌-ಹಮಾಸ್‌ ನಡುವಿನ ಸಮರಕ್ಕೆ ತಾತ್ಕಾಲಿಕ ವಿರಾಮ ಬುಧವಾರ ರಾತ್ರಿ ಘೋಷಣೆ ಆಗಿದೆ. ಈ ಕದನ ವಿರಾಮದ ಅವಧಿ ಸದ್ಯಕ್ಕೆ 6 ವಾರಗಳಿಗೆ ಸೀಮಿತವಾಗಿದೆ ಹಾಗೂ ಪರಸ್ಪರರ ಒತ್ತೆಯಾಳುಗಳ ಬಿಡುಗಡೆ ಆಗಲಿದೆ. ಈ ಅವಧಿಯಲ್ಲಿ ಒಪ್ಪಂದ ಅಂಶಗಳನ್ನು ಎರಡೂ ಬಣಗಳು ಪಾಲಿಸಿದರೆ, ಕಾಯಂ ಆಗಿ ಯುದ್ಧ ಸ್ಥಗಿತದ ಕುರಿತು ಮಾತುಕತೆಗಳು ಕೂಡಾ ನಡೆಯಲಿವೆ. ಕದನ ವಿರಾಮ ಘೋಷಣೆ ಸಂಬಂಧ ಅರಬ್ ದೇಶಗಳು ಮತ್ತು ಅಮೆರಿಕದ ಪ್ರತಿನಿಧಿಗಳು ಕತಾರ್‌ನಲ್ಲಿ ಹಲವು ದಿನಗಳಿಂದ ನಡೆಸಿದ ಸಂಧಾನ ಫಲಿಸಿದ್ದು, ಕದನ ವಿರಾಮದ ಅಂಶಗಳಿಗೆ ಇಸ್ರೇಲ್ ಮತ್ತು ಹಮಾಸ್ ಎರಡೂ ಕಡೆಯಿಂದ ಸಮ್ಮತಿ ವ್ಯಕ್ತವಾಗಿದೆ. 

ಈ ಸಂಧಾನದ ಪ್ರಸ್ತಾಪಕ್ಕೆ  ಇಸ್ರೇಲ್ ಸಚಿವ ಸಂಪುಟ  ಅನುಮೋದನೆ  ನೀಡಿದ  ಬಳಿಕ ಜಾರಿಯಾಗಲಿದೆ. ಒಪ್ಪಂದದ ಅನ್ವಯ ಎರಡೂ ಗುಂಪುಗಳು ಪರಸ್ಪರರ ಮೇಲಿನ ದಾಳಿ ನಿಲ್ಲಿಸಲಿವೆ. ಜೊತೆಗೆ ಹಮಾಸ್ ಉಗ್ರರು ತಾವು ಒತ್ತೆ ಇಟ್ಟುಕೊಂಡಿರುವ ಇಸ್ರೇಲ್ ಸೇರಿದಂತೆ ವಿವಿಧ ದೇಶಗಳ ಪ್ರಜೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಜೊತೆಗೆ ಕದನ ವಿರಾಮದ ಅವಧಿ ಸದ್ಯಕ್ಕೆ 6 ವಾರಗಳಿಗೆ ಸೀಮಿತವಾಗಿದ್ದು, ಈ ಅವಧಿಯಲ್ಲಿ ಒಪ್ಪಂದ ಅಂಶಗಳನ್ನು ಎರಡೂ ಬಣಗಳು ಪಾಲಿಸಿದರೆ, ಯುದ್ಧ ಸ್ಥಗಿತದ ಮಾತುಕತೆಗಳು ಕೂಡಾ ನಡೆಯಲಿವೆ.

ಯುದ್ಧಕ್ಕೆ ಕಾರಣ?
2023ರ ಅ.7ರಂದು ಹಮಾಸ್ ಉಗ್ರರು ಇಸ್ರೇಲ್‌ನೊಳಗೆ ನುಗ್ಗಿ 1200 ಜನರ ಹತ್ಯೆಗೈದು, 250 ಜನರನ್ನು ಅಪಹರಿಸಿದ್ದರು. ಬಳಿಕ ಹಮಾಸ್ ಮತ್ತು ಇಸ್ರೇಲ್ ನಡುವೆ ಭೀಕರ ಯುದ್ಧ ಆರಂಭವಾಗಿತ್ತು. ಈ ಯುದ್ಧ ದಲ್ಲಿ ಇದುವರೆಗೂ ಗಾಜಾಪಟ್ಟಿ ಪ್ರದೇಶದಲ್ಲಿನ 45000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದರು. ಇನ್ನೊಂದೆಡೆ ಇಸ್ರೇಲ್‌ನಲ್ಲೂ 2000ಕ್ಕೂ ಹೆಚ್ಚು ಜನರ ಸಾವು ಸಂಭವಿಸಿತ್ತು.

ಇದನ್ನೂ ಓದಿ: ನೆತನ್ಯಾಹು ಶಾಂತಿಮಂತ್ರ VS ಖಮೇನಿ ಯುದ್ಧತಂತ್ರ: ಇಸ್ರೇಲಿನ ನಿದ್ದೆಗೆಡಿಸಿದ್ದೇಕೆ ಇರಾನಿನ ಸೀಕ್ರೆಟ್ ವೆಪನ್?

Latest Videos
Follow Us:
Download App:
  • android
  • ios