ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಇಸ್ರೇಲ್ ಪ್ರವಾಸ ಕೈಗೊಂಡಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ಭೇಟಿಯ ವೇಳೆ ರಕ್ಷಣೆ ಮತ್ತು ಭದ್ರತಾ ಸಹಕಾರವನ್ನು ಹೆಚ್ಚಿಸುವುದು ಪ್ರಮುಖ ಚರ್ಚೆಯಾಗಿದೆ.

ಇಸ್ರೇಲ್: ಭಾರತದ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗಾಗಿ ಇಸ್ರೇಲ್ ಪ್ರವಾಸ ಕೈಗೊಂಡಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅವರ ಪತ್ನಿಯನ್ನು ಭೇಟಿಯಾಗಿ ಉಭಯ ಕುಶಲೋಪರಿ ನಡೆಸಿದ್ದಾರೆ. ಈ ವೇಳೆ ಒಂದು ಹಾಸ್ಯಮಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು.

Add Asianetnews Kannada as a Preferred SourcegooglePreferred

ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ಗೆ ಬಂದಿಳಿಯುತ್ತಿದ್ದಂತೆಯೇ ನೆತನ್ಯಾಹು ಹಾಗೂ ಅವರ ಪತ್ನಿ ವಿಮಾನ ನಿಲ್ದಾಣದಲ್ಲಿಯೇ ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಧರಿಸಿದ್ದ ಕೋಟ್‌ನ ಜೇಬಿನಲ್ಲಿ ಕೇಸರಿ ಬಣ್ಣದ ಸ್ಕ್ವೇರ್, ನೆತನ್ಯಾಹು ಗಮನ ಸೆಳೆಯಿತು. ಯಾಕೆಂದರೆ ನೆತನ್ಯಾಹು ಪತ್ನಿ ಕೂಡಾ ಕೇಸರಿ ಬಣ್ಣದ ಕೋಟ್ ಧರಿಸಿದ್ದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೀಗಿದೆ ನೋಡಿ ವಿಡಿಯೋ:

View post on Instagram

ಇರಾನ್‌-ಅಮೆರಿಕ ಯುದ್ಧಾತಂಕ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರವಾಗಿರುವ ನಡುವೆಯೇ, ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ಪ್ರಧಾನಿ ನರೇಂದ್ರ ಮೋದಿ ಬುಧವಾರದಿಂದ 2 ದಿನ ಇಸ್ರೇಲ್‌ ಪ್ರವಾಸ ಕೈಗೊಂಡಿದ್ದಾರೆ.

9 ವರ್ಷಗಳಲ್ಲಿ ಇದು ಮೋದಿಯವರ 2ನೇ ಇಸ್ರೇಲ್ ಭೇಟಿ:

ಇಸ್ರೇಲ್‌ಗೆ ಪ್ರಧಾನಿ ನರೇಂದ್ರ ಮೋದಿ 2017ರಲ್ಲಿ ಮೊದಲ ಭೇಟಿ ನೀಡಿದ್ದರು. ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಅಧ್ಯಕ್ಷ ಐಸಾಕ್ ಹೆರ್ಜಾಗ್ ಜೊತೆಗೂ ಸಭೆ ನಡೆಸಲಿದ್ದಾರೆ. ಗುರುವಾರ ನಡೆಯಲಿರುವ ಉಭಯ ಪ್ರಧಾನಿಗಳನ್ನು ಒಳಗೊಂಡ ನಿಯೋಗ ಮಟ್ಟದ ಮಾತುಕತೆಯಲ್ಲಿ ಪರಸ್ಪರ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಹೆಚ್ಚಿಸುವುದು ಕೇಂದ್ರಬಿಂದುವಾಗಿರಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ನ ಸಂಸತ್ತು ‘ಕ್ನೆಸೆಟ್‌’ ಪ್ರವೇಶಿಸುತ್ತಿದ್ದಂತೆ ಸಂಸದರೆಲ್ಲ ‘ಮೋದಿ ಮೋದಿ’ ಎಂಬ ಉದ್ಗಾರ ಮೊಳಗಿಸಿದರು. ಬಳಿಕ ಅವರನ್ನು ಪ್ರಶಂಸಿಸುತ್ತಾ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದ್ದು ವಿಶೇಷವಾಗಿತ್ತು.

ಮೋದಿ ನಿಮಗೆ ಧನ್ಯವಾದ: ನೆತನ್ಯಾಹು

‘ನೀವು ಇಸ್ರೇಲ್ ಪರವಾಗಿ ನಿಂತಿದ್ದೀರಿ, ಧನ್ಯವಾದಗಳು ನನ್ನ ಗೆಳೆಯ..’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಭಾಷಣದಲ್ಲಿ ಹೇಳಿದರು. ಆಗ ಮೋದಿ ಅವರು ನೆತನ್ಯಾಹು ಕೈಕುಲುಕಿ ಧನ್ಯವಾದ ಸಮರ್ಪಿಸಿದರು.