8 ಅಡಿ ಚಿನ್ನಲೇಪಿತ ಸಿಂಹಾಸನ ಮೇಲೆ ರಾಮಲಲ್ಲಾ ವಿರಾಜಮಾನ: ಅಕ್ಷತೆ ಪೂಜೆಗೆ 100 ಕ್ವಿಂಟಲ್‌ ಅಕ್ಕಿ ಬಳಕೆ

ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯೊಳಗೆ 8 ಅಡಿ ಎತ್ತರದ ಚಿನ್ನದ ಲೇಪಿತ ಅಮೃತಶಿಲೆಯ ಸಿಂಹಾಸನದ ಮೇಲೆ ರಾಮಲಲ್ಲಾನ ವಿಗ್ರಹವನ್ನು ಇರಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ (Sri Rama Janmabhoomi Tirtha Kshetra Trust) ಸದಸ್ಯರು ಮಂಗಳವಾರ ತಿಳಿಸಿದ್ದಾರೆ.

Ayodhya A idol of Lord Ram Lalla will be installed on an 8 feet high gold plated marble throne inside the sanctum 100 quintals of rice used for Akshathe Puja akb

ಅಯೋಧ್ಯೆ: ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯೊಳಗೆ 8 ಅಡಿ ಎತ್ತರದ ಚಿನ್ನದ ಲೇಪಿತ ಅಮೃತಶಿಲೆಯ ಸಿಂಹಾಸನದ ಮೇಲೆ ರಾಮಲಲ್ಲಾನ ವಿಗ್ರಹವನ್ನು ಇರಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ (Sri Rama Janmabhoomi Tirtha Kshetra Trust) ಸದಸ್ಯರು ಮಂಗಳವಾರ ತಿಳಿಸಿದ್ದಾರೆ.

ರಾಜಸ್ಥಾನದ ಕುಶಲಕರ್ಮಿಗಳು (artisans) ಸಿಂಹಾಸನವನ್ನು ತಯಾರಿಸಲಾಗುತ್ತಿದ್ದು, ಡಿ.15ರೊಳಗೆ ಅದು ಅಯೋಧ್ಯೆಗೆ ತಲುಪಲಿದೆ. ರಾಮಮಂದಿರದ ಗರ್ಭಗುಡಿಯಲ್ಲಿ ಸಿಂಹಾಸನವನ್ನು ಇರಿಸಲಾಗುವುದು. ಇದು 8 ಅಡಿ ಎತ್ತರ, 3 ಅಡಿ ಉದ್ದ ಮತ್ತು 4 ಅಡಿ ಅಗಲ ಇರಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ (Anil Mishra) ತಿಳಿಸಿದ್ದಾರೆ.

ಹಂದಿಯ ಹೃದಯ ಕಸಿಗೊಳಗಾಗಿ ಬದುಕಿದ್ದ ವ್ಯಕ್ತಿ 40 ದಿನದ ಬಳಿಕ ಸಾವು

ಇದೇ ವೇಳೆ ಗರ್ಭಗುಡಿಯ ನಿರ್ಮಾಣ ಪೂರ್ಣಗೊಂಡಿದೆ ಎಂದ ಮಿಶ್ರಾ, ಡಿ.15 ರೊಳಗೆ ರಾಮ ಮಂದಿರದ ನೆಲ ಅಂತಸ್ತು ಸಿದ್ಧವಾಗಬೇಕಿದೆ. ಮೊದಲ ಅಂತಸ್ತಿನ ಶೇ.80 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದಿದ್ದಾರೆ. ಭಕ್ತರು ಹೆಚ್ಚಿನ ಪ್ರಮಾಣದ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ದಾನ ಮಾಡಿದ್ದಾರೆ. ಆದರೆ ಅವುಗಳ ಸಂಗ್ರಹ ಕಷ್ಟ. ಹೀಗಾಗಿ ಪ್ರತಿಷ್ಠಿತ ಸಂಸ್ಥೆಯ ಮಾರ್ಗದರ್ಶನದಲ್ಲಿ ಅವುಗಳನ್ನುಕರಗಿಸಿ ಸಂಗ್ರಹಿಸಿಡುವ ಕೆಲಸ ನಡೆದಿದೆ ಎಂದರು.

ಅಕ್ಷತೆ ಪೂಜೆಗೆ 100 ಕ್ವಿಂಟಲ್‌ ಅಕ್ಕಿ ಬಳಕೆ: ದೇಶಾದ್ಯಂತ ರಾಮಭಕ್ತರಿಗೆ ವಿತರಣೆ

ಅಯೋಧ್ಯೆ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, 100 ಕ್ವಿಂಟಾಲ್ ಅಕ್ಕಿ ಖರೀದಿಗೆ ಆರ್ಡರ್ ಮಾಡಿದೆ. ಅದನ್ನು ರಾಮಲಲ್ಲಾ ಪ್ರತಿಷ್ಠಾಪನೆ ವೇಳೆ ನಡೆಯುವ ‘ಅಕ್ಷತೆ ಪೂಜೆ’ಯಲ್ಲಿ (Akshathe Puja) ಬಳಸಲಾಗುವುದು ಮತ್ತು ನಂತರ ದೇಶಾದ್ಯಂತ ಭಗವಾನ್ ರಾಮನ ಆರಾಧಕರಿಗೆ ವಿತರಿಸಲಾಗುತ್ತದೆ.

ಇದರೊಂದಿಗೆ, ಒಂದು ಕ್ವಿಂಟಾಲ್ ಅರಿಶಿನ ಮತ್ತು ದೇಸಿ ತುಪ್ಪವನ್ನು ಸಹ ಆರ್ಡರ್ ಮಾಡಲಾಗಿದೆ. ಅಕ್ಕಿಯ ಜತೆ ಅವನ್ನು ಬೆರೆಸಿ ಅಕ್ಷತೆ ಸಿದ್ಧಪಡಿಸಲಾಗುತ್ತದೆ. ಅದನ್ನು ಹಿತ್ತಾಳೆಯ ‘ಕಲಶ’ ದಲ್ಲಿ ನ.5ರಂದು ಪೂಜೆಯ ಸಮಯದಲ್ಲಿ ಭಗವಾನ್ ರಾಮನ ಆಸ್ಥಾನದ ಮುಂದೆ ಇಡಲಾಗುತ್ತದೆ. ನಂತರ ಅಕ್ಕಿಯನ್ನು ವಿಶ್ವ ಹಿಂದೂ ಪರಿಷತ್ತಿನ (Vishwa Hindu Parishad) ಮೂಲಕ ವಿತರಿಸಲಾಗುತ್ತದೆ.

ಹೆಣ್ಣಿನಂತೆ ಅಳು, ರಕ್ಷಿಸುವಂತೆ ಮೊರೆ: ಪಕ್ಕದ ಮನೆಯವರು ನೀಡಿದ ದೂರು ಕೇಳಿ ಮನೆಗೆ ಬಂದ ಪೊಲೀಸರೇ ಶಾಕ್‌?

ವಿವಿಧ ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿ 2 ಕೋಟಿಗೂ ಹೆಚ್ಚು ಕರಪತ್ರಗಳನ್ನು ಮುದ್ರಿಸಲಾಗಿದೆ. ಈ ಕರಪತ್ರಗಳನ್ನು ಅಕ್ಷತೆಯ ಜೊತೆಗೆ ದೇಶದ ಪ್ರತಿ ಮನೆಗೂ ಕಳುಹಿಸಲಾಗುವುದು ಎಂದು ರಾಮಜನ್ಮಭೂಮಿ ಟ್ರಸ್ಟ್‌ (The Ramjanmabhoomi Trust) ಹೇಳಿದೆ. ನ.5ರಂದು ಪ್ರತಿಯೊಬ್ಬ ಪ್ರತಿನಿಧಿಗೆ ಐದು ಕೆಜಿ ಅಕ್ಕಿ ನೀಡಲಾಗುವುದು. ಜ.1 ರಿಂದ 15ರವರೆಗೆ ದೇಶದ 5 ಲಕ್ಷ ಹಳ್ಳಿಗಳಲ್ಲಿ ‘ಪೂಜಿತ ಅಕ್ಷತೆ’ ವಿತರಿಸಲಾಗುತ್ತದೆ.

ಏತನ್ಮಧ್ಯೆ, ದೇಶಾದ್ಯಂತದ ರಾಮನ ಭಕ್ತರು ಲೈವ್ ಫೀಡ್ ಮೂಲಕ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ದೇವಾಲಯದ ಟ್ರಸ್ಟ್ ಗ್ರಾಮ ಮತ್ತು ಪಟ್ಟಣಗಳಲ್ಲಿನ ದೇವಾಲಯಗಳಲ್ಲಿ ಟೀವಿ ಪರದೆಗಳನ್ನು ಅಳವಡಿಸಲು ವ್ಯವಸ್ಥೆ ಮಾಡಿದೆ. ಇದರಿಂದ ಅಯೋಧ್ಯೆ ಜನಸಂದಣಿ ನಿಯಂತ್ರಣಕ್ಕೆ ಬರಲಿದೆ ಎಂದು ಟ್ರಸ್ಟ್‌ ಹೇಳಿದೆ.

Latest Videos
Follow Us:
Download App:
  • android
  • ios