‘ಪಾಕಿಸ್ತಾನವು ರಹಸ್ಯವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುತ್ತಿದೆ’ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಪಾಕಿಸ್ತಾನ ತಳ್ಳಿಹಾಕಿದೆ. ‘ಪಾಕಿಸ್ತಾನವು ಪರಮಾಣು ಪರೀಕ್ಷೆಗಳನ್ನು ಮೊದಲು ಪ್ರಾರಂಭಿಸುವ ದೇಶವಲ್ಲ’ ಎಂದಿದೆ.

ಇಸ್ಲಾಮಾಬಾದ್: ‘ಪಾಕಿಸ್ತಾನವು ರಹಸ್ಯವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುತ್ತಿದೆ’ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಪಾಕಿಸ್ತಾನ ತಳ್ಳಿಹಾಕಿದೆ. ‘ಪಾಕಿಸ್ತಾನವು ಪರಮಾಣು ಪರೀಕ್ಷೆಗಳನ್ನು ಮೊದಲು ಪ್ರಾರಂಭಿಸುವ ದೇಶವಲ್ಲ’ ಎಂದಿದೆ.

ಅಮೆರಿಕದ ಸಿಬಿಎಸ್ ನ್ಯೂಸ್ ಜೊತೆ ಮಾತನಾಡಿದ ಪಾಕಿಸ್ತಾನಿ ಅಧಿಕಾರಿ

ಅಮೆರಿಕದ ಸಿಬಿಎಸ್ ನ್ಯೂಸ್ ಜೊತೆ ಮಾತನಾಡಿದ ಪಾಕಿಸ್ತಾನಿ ಅಧಿಕಾರಿಯೊಬ್ಬರು, ‘ಪಾಕಿಸ್ತಾನ ಯಾವತ್ತೂ ಪರಮಾಣು ಪರೀಕ್ಷೆಗಳನ್ನು ನಡೆಸಿದ ಮೊದಲ ದೇಶವಲ್ಲ. ಅಲ್ಲದೆ, ಪರಮಾಣು ಪರೀಕ್ಷೆಗಳನ್ನು ಪುನಾರಂಭಕ್ಕೆ ಮುಂದಾಗುವ ಮೊದಲಿಗರೂ ನಾವಲ್ಲ’ ಎಂದು ಹೇಳಿದರು.

ನಾವೂ 33 ವರ್ಷ ಬಳಿಕ ಪರೀಕ್ಷೆಗೆ ಮುಂದಾಗಿದ್ದೇವೆ’

ಟ್ರಂಪ್‌ ಸೋಮವಾರ ಮಾತನಾಡಿ, ‘ಪಾಕ್‌, ಚೀನಾ, ರಷ್ಯಾ ಸೇರಿ ಅನೇಕ ದೇಶಗಳು ರಹಸ್ಯವಾಗಿ ಅಣ್ವಸ್ತ್ರ ಪ್ರಯೋಗ ನಡೆಸುತ್ತಿವೆ. ಹೀಗಾಗಿಯೇ ನಾವೂ 33 ವರ್ಷ ಬಳಿಕ ಪರೀಕ್ಷೆಗೆ ಮುಂದಾಗಿದ್ದೇವೆ’ ಎಂದಿದ್ದರು.

ಚೀನಾ ಕೂಡ ಸೋಮವಾರ ಟ್ರಂಪ್‌ ಹೇಳಿಕೆ ತಳ್ಳಿಹಾಕಿತ್ತು.