ಬೆಂಗಳೂರಿನ IISC ದಾಳಿಕೋರ ಉಗ್ರನ ಹಮ್ಜಾ ಮೇಲೆ ದಾಳಿ ನಡೆಸಿದ ಅನಾಮಿಕ ಯಾರು? ದಾಳಿಯಲ್ಲಿ ಹಮ್ಜಾ ತೀವ್ರವಾಗಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. 

ಇಸ್ಲಾಮಾಬಾದ್‌ (ಏ.17): ಲಷ್ಕರ್‌ ಎ ತೊಯ್ಬಾ ಉಗ್ರ ಸಂಘಟನೆಯ ಸಹ ಸಂಸ್ಥಾಪಕರ ಪೈಕಿ ಒಬ್ಬನಾದ ಅಮೀರ್‌ ಹಮ್ಜಾ (66) ಮೇಲೆ ಅನಾಮಿಕ ವ್ಯಕ್ತಿಗಳು ಪಾಕಿಸ್ತಾನದ ವಾಣಿಜ್ಯ ರಾಜಧಾನಿ ಲಾಹೋರ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಹಮ್ಜಾ ತೀವ್ರವಾಗಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ವರ್ಷ ಬುದುಕುಳಿದಿದ್ದ ಹಮ್ಜಾ

ಲಾಹೋರ್‌ನ ಟೀವಿ ವಾಹಿನಿಯೊಂದರ ಕಚೇರಿ ಮೇಲೆ ಅನಾಮಿಕ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಕಳೆದ ವರ್ಷ ಕೂಡಾ ಹಮ್ಜಾನ ಮೇಲೆ ಗುಂಡಿನ ದಾಳಿ ನಡೆದಿತ್ತಾದರೂ ಆತ ಬದುಕುಳಿಗಿದ್ದ. ಬಳಿಕ ಆತನ ಭದ್ರತೆಯನ್ನು ಹೆಚ್ಚಿಸಲಾಗಿತ್ತು.

ಬೆಂಗಳೂರಿನ ಐಐಎಸ್‌ಸಿ ಮೇಲೆ ದಾಳಿ

ಈಗ ಪಂಜಾಬ್‌ ಪ್ರಾಂತ್ಯದ ಗುಜ್ರನ್ವಾಲಾ ಮೂಲದ ವ್ಯಕ್ತಿಯಾಗಿದ್ದು 1985ರಲ್ಲಿ ಹಫೀಜ್‌ ಸಯೀದ್‌ ಜೊತೆಗೂಡಿ ಲಷ್ಕರ್‌ ಸಂಘಟನೆ ಸ್ಥಾಪಿಸಿದ್ದ. ಈತ 2005ರಲ್ಲಿ ಬೆಂಗಳೂರಿನ ಐಐಎಸ್‌ಸಿ ಮೇಲಿನ ದಾಳಿ ಸೇರಿದಂತೆ ಭಾರತದಾದ್ಯಂತ ನಡೆದ ಹಲವು ಉಗ್ರ ದಾಳಿಗಳ ಹಿಂದೆ ಹಮ್ಜಾನ ಕೈವಾಡವಿತ್ತು. ಸಂಘಟನೆಯಲ್ಲಿ ಸಯೀದ್‌ ನಂತರದ ಸ್ಥಾನ ಹೊಂದಿರುವ ಹಮ್ಜಾ ಕಾಲದಿಂದ ಕಾಲಕ್ಕೆ ಸಂಘಟನೆಗೆ ಹೊಸ ದಿಕ್ಕು ತೋರಿಸುತ್ತಾ, ಉಗ್ರ ಸಿದ್ದಾಂತವನ್ನು ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.

ಪ್ರಖರ ಭಾಷಣಕಾರನಾಗಿ, ಲೇಖಕನಾಗಿ, ಲಷ್ಕರ್‌ ಸಂಘಟನೆಯ ಮುಖವಾಣಿ ಪತ್ರಿಕೆಯ ಸಂಪಾದಕನಾಗಿಯೂ ಹಮ್ಜಾ ಗುರುತಿಸಿಕೊಂಡಿದ್ದಾನೆ. ಬೆಂಗಳೂರಿನ ಇಂಡಿಯನ ಇನ್ಸಿಟಿಟ್ಯೂಟ್ ಆಫ್ ಸೈನ್ಸ್ ಮೇಲೆ ದಾಳಿ ನಡೆಸಿದ ಮಾಸ್ಟರ್ ಮೈಂಡ್ ಈತ. ಭಾರತದ ಮೇಲೆ ದಾಳಿ ನಡೆಸಿ ಪಾಕಿಸ್ತಾನದಲ್ಲಿ ಭಾರಿ ಭದ್ರತೆಯಲ್ಲಿ ಕಳೆಯುತ್ತಿರುವ ಹಲವು ಉಗ್ರರಿಗೆ ಅನಾಮಿಕ ಸಿಂಹಸ್ವಪ್ನವಾಗಿ ಪರಿಣಿಮಿಸಿದ್ದಾನೆ.

ಭಾರತದ ಮೇಲೆ ಉಗ್ರ ದಾಳಿ ನಡೆಸುತ್ತಿರುವ ಉಗ್ರರು ಇದೀಗ ಭಾರಿ ಭದ್ರತೆ ನೀಡುವಂತೆ ಪಾಕಿಸ್ತಾನ ಸರ್ಕಾರಕ್ಕೆ ಅರ್ಜಿಗಳು ಹೆಚ್ಚಾಗುತ್ತಿದೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ, ಏನೂ ಮಾಡಲಾಗದ ಸ್ಥಿತಿಯಲ್ಲಿದೆ. ಇತ್ತ ಕೆಲ ಉಗ್ರರಿಗೆ ಹೆಚ್ಚಿನ ಭದ್ರತೆ ಒದಗಿಸಲು ಸಾಧ್ಯವಾಗದೇ ಪರದಾಡುವ ಸ್ಥಿತಿ ಎದುರಾಗಿದೆ.