ಈ ಪಟಾಕಿ ಮನುಷ್ಯನಿಗೆ ಎಷ್ಟು ಮಾರಕವೋ ಅದಕ್ಕಿಂತ ಎರಡು ಪಟ್ಟು ಪ್ರಾಣಿಗಳ ಜೀವ ಹಿಂಡುತ್ತದೆ. ಹಬ್ಬ ಮತ್ತಿತ್ತರ ಸಂಭ್ರಮಾಚರಣೆ ಸಂದರ್ಭ ಸಾಕಷ್ಟು ಪಟಾಕಿಗಳನ್ನು ಸುಟ್ಟು ಬೂದಿ ಮಾಡುತ್ತೇವೆ. ಆದರೆ ಈ ಪಟಾಕಿ ಅಬ್ಬರ ನಮ್ಮದೇ ಸಾಕು ಪ್ರಾಣಿಗಳ ಮೇಲೆ ಯಾವ ಪರಿಣಾಮ ಉಂಟುಮಾಡುತ್ತದೆ?

ಪ್ರಶ್ನೆ ಸಹಜವಾಗಿಯೇ ವಾಸ್ತವಿಕತೆಯ ಪ್ರಶ್ನೆ ಎತ್ತುತ್ತದೆ. ಸ್ಕಾಟ್ ಲ್ಯಾಂಡ್ ನ ಮಹಿಳೆಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ  ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಯಿತು. ಅದಕ್ಕೆ ಕಾರಣವೂ ಇದೆ.

ಸ್ಕಾಟ್ ಲೆಂಡ್ ಮೂಲದ ಮಾರ್ಗರೇಟ್ ಆಡಮ್ಸ್ ಆಕೆಯ ಸಾಕು ನಾಯಿಯ ಫೋಟೋ ಹಂಚಿಕೊಂಡಿದ್ದಾರೆ, ಪಟಾಕಿಯ ಪರಿಣಾಮದಿಂದ ಆಕೆಯ ಮುದ್ದು ನಾಯಿ ಕಣ್ಣು ಕಳೆದುಕೊಂಡಿದೆ.

ಪಟಾಕಿ ಕಂಡು ಬಾಂಬ್ ಎಂದು ಬೇಸ್ತು ಬಿದ್ದ ರಾಮನಗರದ ಮಂದಿ

ಪಟಾಕಿ ಮಾರಾಟಕ್ಕೆ ಒಂದು ಎಂಡ್ ಸಿಗಬೇಕು ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ. ಕೆಲ ವರ್ಷಗಳ ದುರಂತವನ್ನು ಮಹಿಳೆ ಮತ್ತೆ ನೋವಿನಿಂದಲೇ ನೆನಪು ಮಾಡಿಕೊಳ್ಳುತ್ತಾಳೆ. ಎಫ್ ಎಂ ಚಾನಲ್ ವೊಂದರಲ್ಲಿ ಸಂದರ್ಶನಕ್ಕೆ ಕುಳಿತ ಮಹಿಳೆ ಸಾಕು ಪ್ರಾಣಿಗಳ ವಿಚಾರದಲ್ಲಿ ತಮಗಿರುವ ಅಪಾರ ಪ್ರೀತಿ ತೋರಿಸಿದ್ದು ಅಲ್ಲದೇ ಪಟಾಕಿ ಯಾವ ಕಾರಣಕ್ಕೆ ಬ್ಯಾನ್ ಮಾಡಬೇಕು ಎಂಬುದನ್ನು ಹೇಳಿದರು.

ಜನರು ಪಟಾಕಿ ಸಿಡಿಸುತ್ತಲೇ ಇದ್ದರು. ನನ್ನ ಮುದ್ದು ನಾಯಿ ಆ ಹೋರಾಟದಲ್ಲಿ ಸಿಲುಕಿಕೊಂಡಿತ್ತು. ಬಾಗಿಲುಗಳ ಲೂಕ ಮೇಲೆ ಹತ್ತಲು, ಟಾಯ್ಲೆಟ್ ನಲ್ಲಿ ಅಡಗಿ ಕುಳಿತುಕೊಳ್ಳಲು ನಾಯಿ ಪ್ರಯತ್ನ ಮಾಡಿತು. ಅದರ ಉದ್ಧೇಶ ಈ ಪಟಾಕಿ ಸಿಡಿತದಿಂದ ತಪ್ಪಿಸಿಕೊಳ್ಳುವಿದೇ ಆಗಿತ್ತು.

ಇದಾದ ಮರುದಿನ ಆಕೆಯ ಕಣ್ಣಿನ ಬಳಿ ಏನೋ ಆಗಿದ್ದು ನನ್ನ ಗಮನಕ್ಕೆ ಬಂದಿದೆ. ಪರೀಕ್ಷಿಸಿದಾಗ ನಾಯಿ ತನ್ನ ಕಣ್ಣಿನ ಗುಡ್ಡಗೆ ಹಾನಿ ಮಾಡಿಕೊಂಡಿರುವುದು ಗೊತ್ತಾಗಿದೆ.

ತನ್ನ ಮುದ್ದು ಶ್ವಾನ ಸೂಜಿ ನೆನೆಪಿನಲ್ಲಿಯೇ, ಆಕೆಗೆ ನ್ಯಾಯ ಕೊಡಿಸುವಿದಕ್ಕಾಗಿಯೇ ಮಹಿಳೆ ಪಟಾಕಿ ಮಾರಾಟದ ನಿಷೇಧಕ್ಕಾಗಿ ಹೋರಾಟಕ್ಕೆ ಇಳಿದಿದ್ದಾರೆ.