ಹೂಸ್ಟನ್ (ನ. 13):  ಜಗತ್ತಿನ ಅತಿ ಉದ್ದವಾದ ನೈಲ್ ನದಿ ಅಂದಾಜಿಸಿದ್ದಕ್ಕಿಂತಲೂ 6 ಪಟ್ಟು ಹಳೆಯ ನದಿ ಯಾಗಿದೆ ಎಂದು ವರದಿಯೊಂದು ತಿಳಿಸಿದೆ. ನೈಲ್ ನದಿಯನ್ನು 3 ಕೋಟಿ ವರ್ಷಗಳ ಹಿಂದೆ ಹುಟ್ಟಿಕೊಂಡಿತ್ತು ಎಂದು ಈವರೆಗೂ ನಂಬಲಾಗಿತ್ತು. ಆದರೆ ಅದಕ್ಕಿಂತಲೂ ಹಳೆಯದಾಗಿದೆ ಎಂದು ನೇಚರ್ ಜಿಯೋಸೈನ್ಸ್ ನಿಯತಕಾಲಿಕೆ ತನ್ನ ವರದಿಯಲ್ಲಿ ಹೇಳಿದೆ.

ಚೀನಾ: ಮನುಷ್ಯ ಮುಖ ಹೋಲುವ ಮೀನು ಪತ್ತೆ!

ಭೌಗೋಳಿಕತೆ, ನದಿಯ ಮೇಲ್ಮೈ ಹರಿವು, ಅದು ಹರಿದು ಹೋಗುವ ಸ್ಥಳಗಳ ಆಧಾರದ ಮೇಲೆ ನೇಚರ್ ಜಿಯೋಸೈನ್ಸ್ ನಿಯತಕಾಲಿಕೆ ಸಮೀಕ್ಷೆ ನಡೆಸಿದೆ. ಇಥಿಯೋಪಿಯಾ ಪ್ರಸ್ಥಭೂಮಿಯು ೩೦ ಕೋಟಿ ವರ್ಷ ಹಿಂದೆ ಸೃಷ್ಟಿಯಾಗಿದೆ ಎಂದಿದೆ ವರದಿ.