Asianet Suvarna News Asianet Suvarna News

Saudi Princess Basmah Released: 3 ವರ್ಷಗಳ ಸೆರೆವಾಸದಿಂದ ಸೌದಿ ರಾಜಕುಮಾರಿಗೆ ಮುಕ್ತಿ, ಬಂಧನಕ್ಕೂ ಬಿಡುಗಡೆಗೂ ಕಾರಣ ನಿಗೂಢ

3 ವರ್ಷಗಳಿಂದ ಜೈಲುಪಾಲಾಗಿದ್ದ ಸೌದಿ ರಾಜಕುಮಾರಿ ಬಾಸ್ಮಾ ಬಿಂಟ್‌ ಸೌದ್‌  ಮತ್ತು ಆಕೆಯ ಮಗಳನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ. ಅನಾರೋಗ್ಯ ಹಿನ್ನೆಲೆ ಬಿಡುಗಡೆಗೊಳಿಸಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

Saudi Princess Basmah Bint Saud Released After 3-year gow
Author
Bengaluru, First Published Jan 10, 2022, 11:04 PM IST

ರಿಯಾದ್(ಜ.10): ಕಳೆದ 3 ವರ್ಷಗಳಿಂದ ಜೈಲುಪಾಲಾಗಿದ್ದ ಸೌದಿ ರಾಜಕುಮಾರಿಯನ್ನು (Saudi Princess) ಅಧಿಕಾರಿಗಳು ಬಿಡುಗಡೆಗೊಳಿಸಿದ್ದಾರೆ. ರಾಜಕುಮಾರಿ ಬಂಧನಕ್ಕೆ ಯಾವುದೇ ಕಾರಣಗಳು ಖಚಿತವಾಗಿ ತಿಳಿದುಬಂದಿರಲಿಲ್ಲ. ಅಂತೆಯೇ ಇದೀಗ ರಾಜಕುಮಾರಿ ಬಿಡುಗಡೆಗೂ ಯಾವುದೇ ಕಾರಣಗಳು ತಿಳಿದುಬಂದಿಲ್ಲ. ಅನಾರೋಗ್ಯ ಹಿನ್ನೆಲೆ ಬಿಡುಗಡೆಗೊಳಿಸಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ರಾಜಕುಮಾರಿ ಜೊತೆ ಅವರ 30 ವರ್ಷದ ಮಗಳನ್ನು ಮೂರು ವರ್ಷಗಳ ಸೆರೆವಾಸದ ನಂತರ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಮಾನವ ಹಕ್ಕುಗಳ ಸಂಘಟನೆ ಟ್ವೀಟ್ ಮಾಡಿ ತಿಳಿಸಿದೆ. ಅವರ ಕಾನೂನು ಸಲಹೆಗಾರ ಹೆನ್ರಿ ಎಸ್ಟ್ರಾಮನ್ ಅವರು  ಬಿಡುಗಡೆ ಬಗ್ಗೆ ಮಾಹಿತಿ ನೀಡಿದ್ದು, ಜೈಲಿನಿಂದ ಬಿಡುಗಡೆಗೊಂಡು ಜೆಡ್ಡಾದಲ್ಲಿರುವ ತಮ್ಮ ಮನೆಗೆ ತೆರಳಿದ್ದಾರೆ ಎಂದಿದ್ದಾರೆ.

ರಾಜಕುಮಾರಿ ಬಾಸ್ಮಾ ಅವರು 1953 ರಿಂದ 1964 ರವರೆಗೆ ಸೌದಿ ಅರೇಬಿಯಾವನ್ನು ಆಳಿದ ದಿವಂಗತ ಕಿಂಗ್ ಸೌದ್ ಅವರ ಕಿರಿಯ ಮಗಳು. ಅವರು ಸೌದಿ ಅರೇಬಿಯಾ ಮಹಿಳೆಯರನ್ನು ನಡೆಸಿಕೊಳ್ಳುವ ರೀತಿಯನ್ನು ಟೀಕಿಸಿದ್ದಾರೆ. ರಾಜಮನೆತನದ ಸದಸ್ಯೆ ಬಾಸ್ಮಾ ಬಿಂಟ್‌ ಸೌದ್‌ (57) (Basmah bint Saud bin Abdulaziz al-Saud) ಅವರನ್ನು 2019ರ ಮಾರ್ಚ್‌ ತಿಂಗಳಲ್ಲಿ ಬಂಧಿಸಲಾಗಿತ್ತು. 2020 ರಲ್ಲಿ ಬಾಸ್ಮಾ ಅನಾರೋಗ್ಯದ ಬಗ್ಗೆ ಹೇಳಿಕೊಂಡರೂ ಬಿಡುಗಡೆ ಮಾಡಿರಲಿಲ್ಲ.  2015ರಲ್ಲಿ ರಾಜನಾಗಿ ಅಧಿಕಾರ ಸ್ವೀಕರಿಸಿದ್ದ ರಾಜಕುಮಾರ ಮೊಹಮದ್ ಬಿನ್ ಸಲ್ಮಾನ್ (Mohammed bin Salman) ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕುವ ಕಾರ್ಯಕ್ಕೆ ಇಳಿದಿದ್ದರು. 

ತಮ್ಮ ವಿರೋಧಿಗಳು ಹಾಗೂ ಬಂಧುವರ್ಗದವರನ್ನೇ ಭ್ರಷ್ಟಾಚಾರದ ಆರೋಪ ಮತ್ತು ಅಧಿಕಾರಕ್ಕಾಗಿ ಸಂಚು, ನಡೆಸಿದ ಆರೋಪ ಹೊರಿಸಿ ಜೈಲಿಗಟ್ಟಲಾಗಿತ್ತು ಅದೇ ಸಂದರ್ಭದಲ್ಲಿ ಸೌದಿಯ ಎರಡನೇ ರಾಜನ ಮಗಳು ರಾಜಕುಮಾರಿ ಬಾಸ್ಮಾ ಬಿಂಟ್‌ ಸೌದ್‌ ಅವರನ್ನು ಜೈಲಿಗಟ್ಟಲಾಗಿತ್ತು.

ವಯಸ್ಸು ಕೇವಲ 12... ಪಂಚಿಂಗ್‌ನಿಂದ ಮರವನ್ನೇ ಉರುಳಿಸುತ್ತಿದ್ದಾಳೆ ಬಾಲಕಿ

ಅಲ್‌ ಹೈರ್‌ ಜೈಲಿನಲ್ಲಿ () ರಾಜಕುಮಾರಿಯನ್ನು ಇಡಲಾಗಿತ್ತು. ಇದೇ ಜೈಲಿನಲ್ಲಿ ಅನೇಕ ರಾಜಕೀಯ ನಾಯಕರನ್ನೂ ಬಂಧಿಸಿಡಲಾಗಿದೆ.  ಇದೀಗ ಬಿಡುಗಡೆಯಾಗಿರುವ ರಾಜಕುಮಾರಿ ಬಾಸ್ಮಾ ಅವರು ತಮ್ಮ ಕುಟುಂಬವರ್ಗದವರನ್ನು ಕೂಡಿಕೊಂಡಿದ್ದು ತಮ್ಮ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲಿದ್ದಾರೆ. 

2017ರಲ್ಲಿ ರಿಯಾದ್‌ನ ಐಷಾರಾಮಿ ರಿಟ್ಜ್-ಕಾರ್ಲ್‌ಟನ್ ಹೋಟೆಲ್‌ನಲ್ಲಿ ಭ್ರಷ್ಟಾಚಾರ-ವಿರೋಧಿ ಅಭಿಯಾನ ನಡೆದಿತ್ತು. ಇದಾಗಿ ಮೂರು ತಿಂಗಳ ಅವಧಿಯಲ್ಲಿ ಹತ್ತಾರು ರಾಜಕುಮಾರರು ಮತ್ತು ವಿಶ್ವಾಸದ್ರೋಹದ ಆರೋಪದಲ್ಲಿ ಶಂಕಿತರನ್ನು ಬಂಧಿಸಿ ಜೈಲಿನಲ್ಲಿಡಲಾಗಿತ್ತು. ಅಂತೆಯೇ 2020ರಲ್ಲಿ ರಾಜ ಸಲ್ಮಾನ್ ಅವರ ಸಹೋದರ ಮತ್ತು ಸೋದರಳಿಯನನ್ನು ರಾಯಲ್ ಗಾರ್ಡ್ ಬಂಧಿಸಿದ್ದರು.

ಸೇನಾ ಭದ್ರತೆ ಮತ್ತು ಗೌಪ್ಯತೆಗೆ ಧಕ್ಕೆ: ವಾಟ್ಸಾಪ್, ಟೆಲಿಗ್ರಾಮ್ ಬಳಕೆ ನಿಷೇಧಿಸಿದ ಸ್ವಿಸ್ ಆರ್ಮಿ!

ಬಹಿರಂಗವಾಗಿ ಮಾತನಾಡುವ ಮಾನವ ಹಕ್ಕುಗಳ ವಕೀಲೆ ಮತ್ತು ರಾಜಮನೆತನದ ಸದಸ್ಯರಾಗಿರುವ ರಾಜಕುಮಾರಿ ಬಾಸ್ಮಾ ಬಿಂತ್ ಸೌದ್ ಬಿನ್ ಅಬ್ದುಲಜೀಜ್ ಅಲ್-ಸೌದ್ ಅವರು ತಮ್ಮ ಮಗಳು ಸೌಹೌದ್ ಅಲ್-ಶರೀಫ್ ಅವರೊಂದಿಗೆ ಮಾರ್ಚ್ 2019 ರಲ್ಲಿ ಪಲಾಯನ ಮಾಡುತ್ತಿದ್ದಾಗ ನಕಲಿ ಪಾಸ್‌ಪೋರ್ಟ್ ಹೊಂದಿದ ಆರೋಪದಲ್ಲಿ ಬಂಧಿಸಲಾಗಿತ್ತು ಎಂದು ಹೇಳಲಾಗಿತ್ತು. ಆದರೆ ಇದಕ್ಕೆ ಯಾವುದೇ ಪುರಾವೆ ಇಲ್ಲ.  ಮಾರ್ಚ್ 1, 2019 ರಂದು ಜೆಡ್ಡಾದ  ತಮ್ಮ ನಿವಾಸದಲ್ಲಿ ಬಾಸ್ಮಾ  ಮತ್ತು ಅವರ ಮಗಳನ್ನು ಬಂಧಿಸಲಾಗಿತ್ತು.

ಇನ್ನು ಬಿಡುಗಡೆ ಸಂಬಂಧ ಕುರಿತು ಪ್ರತಿಕ್ರಿಯಿಸಲು ಸೌದಿ ಅಧಿಕಾರಿಗಳು ನಿರಾಕರಿಸಿದ್ದಾರೆ.  ಕುಟುಂಬದವರ ಪ್ರಕಾರ ಅನಾರೋಗ್ಯದಲ್ಲಿದ್ದ ಬಾಸ್ಮಾ ಬಿಂತ್ ವೈದ್ಯಕೀಯ ಚಿಕಿತ್ಸೆಗಾಗಿ ಸ್ವಿಟ್ಜರ್ಲೆಂಡ್‌ಗೆ ತೆರಳಲು ತಯಾರಿ ನಡೆಸುತ್ತಿದ್ದ ಸ್ವಲ್ಪ ದಿನಗಳ ಮುಂಚೆ ಬಂಧಿಸಲಾಗಿತ್ತು.  ಜೈಲಿನಲ್ಲಿ ಆಕೆಯ ಅನಾರೋಗ್ಯದ ಸ್ಥಿತಿ ಹೇಗಿದೆ ಎಂದು ಎಂದಿಗೂ ಬಹಿರಂಗಪಡಿಸಲಿಲ್ಲ. 

Follow Us:
Download App:
  • android
  • ios