ವಯಸ್ಸು ಕೇವಲ 12... ಪಂಚಿಂಗ್‌ನಿಂದ ಮರವನ್ನೇ ಉರುಳಿಸುತ್ತಿದ್ದಾಳೆ ಬಾಲಕಿ
- ಮರಕ್ಕೆ ಬಾಲಕಿಯ ಯರ್ರಾಬಿರ್ರಿ ಪಂಚ್
- 12 ವರ್ಷದ ಬಾಲಕಿಯ ಸಾಹಸಕ್ಕೆ ನೆಟ್ಟಿಗರು ಫಿದಾ
- ರಷ್ಯಾ ಮೂಲದ ಎವ್ನಿಕಾ ಸಾದ್ವಕಾಸ್
ವಯಸ್ಸಿನ ಆಧಾರದ ಮೇಲೆ ಮನುಷ್ಯರ ಶಕ್ತಿಯನ್ನು ಅಳೆಯಲಾಗದು ಎಂಬುದನ್ನು12 ವರ್ಷದ ಬಾಲಕಿಯೊಬ್ಬಳು ತೋರಿಸಿಕೊಟ್ಟಿದ್ದಾಳೆ. ಈಕೆ ತನ್ನ ಪಂಚಿಂಗ್‌ನಿಂದಲೇ ಕುಟ್ಟಿ ಕುಟ್ಟಿ ಮರವನ್ನು ಬೀಳಿಸುತ್ತಿದ್ದಾಳೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಶಕ್ತಿಶಾಲಿ ಬಾಲಕಿಯ ಹೆಸರು ಎವ್ನಿಕಾ ಸಾದ್ವಕಾಸ್ (Evnika Saadvakass)ರಷ್ಯಾ ಮೂಲದ ಈ ಬಾಲಕಿ ಬಾಕ್ಸರ್ ಆಗಿದ್ದು, ಈಕೆ ಮರಕ್ಕೆ ಪಂಚ್ ಮಾಡುತ್ತಿರುವ ಈ ವಿಡಿಯೋ ಈಗ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಎವ್ನಿಕಾ ತನ್ನ ತಂದೆಯಿಂದ ತರಬೇತಿ ಪಡೆದಿದ್ದಾಳೆ. ಆಕೆಯ ತಂದೆ ರುಸ್ಟ್ರಾಮ್ ಸಾದ್ವಾಕಾಸ್ (Rustram Saadvakass) ವೃತ್ತಿಪರ ಬಾಕ್ಸಿಂಗ್ (boxing) ತರಬೇತಿದಾರರಾಗಿದ್ದಾರೆ. ಇವರು ತಮ್ಮ ಮಗಳು ನಾಲ್ಕು ವರ್ಷದವಳಿದ್ದಾಗಲೇ ಆಕೆಗೆ ಬಾಕ್ಸಿಂಗ್ ಮೇಲಿದ್ದ ಆಸಕ್ತಿಯನ್ನು ಗುರುತಿಸಿ ತರಬೇತಿ ನೀಡಲು ಶುರು ಮಾಡಿದ್ದರು.
ಎವ್ನಿಕಾ ನಾಲ್ಕು ವರ್ಷದವಳಿದ್ದಾಗಲೇ ಆಕೆಯ ಈ ಸುಂದರ ನಡೆಯನ್ನು ನಾನು ಗಮನಿಸಿದ್ದೆ. ಆಕೆ ತುಂಬಾ ಏಕಾಗ್ರತೆಯ ಜೊತೆ ಕಠಿಣ ಪರಿಶ್ರಮಿಯಾಗಿದ್ದು, ಇದು ಆಕೆಯ ಗುಣದ ಉತ್ತಮ ಲಕ್ಷಣವಾಗಿದೆ. ನಾನು ಆಗಲೇ ಆಕೆಯಲ್ಲಿ ಆ ಮೊದಲ ಆಸಕ್ತಿಯನ್ನು ಗಮನಿಸಿದ್ದು, ನಾನು ಅದನ್ನು ಅಭಿವೃದ್ಧಿಗೊಳಿಸಲು ನಿರ್ಧರಿಸಿದೆ.
ಎವ್ನಿಕಾ ಈಗ ತನ್ನ ಏಳು ಒಡಹುಟ್ಟಿದವರು ಮತ್ತು ತಂದೆಯೊಂದಿಗೆ ರಷ್ಯಾದ ವೊರೊನೆಜ್ (Voronezh area) ಪ್ರದೇಶದಲ್ಲಿ ವಾರಕ್ಕೆ ಐದು ಬಾರಿ ತರಬೇತಿ ನೀಡುತ್ತಾಳೆ. ಆಕೆಯ ತಾಯಿ, ಅನಿಯಾ ಸಾದ್ವಕಾಸ್ (Ania Saadvakass) ಮಾಜಿ ಜಿಮ್ನಾಸ್ಟ್ ಆಗಿದ್ದು, ಅವರು ತಮ್ಮ ಕುಟುಂಬದಲ್ಲಿರುವ ಬಾಕ್ಸರ್ ಅಲ್ಲದ ಏಕೈಕ ವ್ಯಕ್ತಿಯೂ ಆಗಿದ್ದಾರೆ.
India Book of Records ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಮೈಸೂರಿನ 8ರ ಬಾಲಕಿ ದಾಖಲೆ
2020 ರಲ್ಲಿ, ಏಳು ವರ್ಷದ ರೋರಿ ವ್ಯಾನ್ ಉಲ್ಫ್ಟ್ (Rory van Ulft) 80 ಕಿಲೋಗ್ರಾಂಗಳಷ್ಟು ಮಣ ಭಾರದ ತೂಕವನ್ನು ಎತ್ತುವ ಮೂಲಕ ಜಗತ್ತನ್ನು ಬೆಚ್ಚಿಬೀಳಿಸಿದರು. ಅವರು USA ವೇಟ್‌ಲಿಫ್ಟಿಂಗ್ ಯೂತ್ ನ್ಯಾಷನಲ್ ಚಾಂಪಿಯನ್‌ಶಿಪ್ ಗೆದ್ದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ.
4 ವರ್ಷದ ಪುಟ್ಟ ಅಭಿಮಾನಿಯತ್ತ ಕೈ ಬೀಸಿದ ಟೊಟೆನ್‌ಹ್ಯಾಮ್ ಫುಟ್‌ಬಾಲ್ ಪ್ಲೇಯರ್.. ಬಾಲಕಿಯ ಖುಷಿ ನೋಡಿ
ಪುಟ್ಟ ಬಾಲಕಿಯೊಬ್ಬಳು ತನ್ನ ಸಾಕು ನಾಯಿಯೊಂದಿಗೆ ಸಾಹಸ ಪ್ರದರ್ಶಿಸುತ್ತಿರುವ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣ (social Media)ದಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು 2 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದರು. 1 ನಿಮಿಷದ ಈ ವೀಡಿಯೊದಲ್ಲಿ, ಚಿಕ್ಕ ಹುಡುಗಿ ತನ್ನ ಸಾಕು ನಾಯಿಯೊಂದಿಗೆ ಕೆಲವು ಅದ್ಭುತ ಸಾಹಸಗಳನ್ನು ಮಾಡುವುದನ್ನು ಕಾಣಬಹುದು. ಬಾಲಕಿಯ ಜೊತೆ ನಾಯಿಯು ಚುರುಕಾಗಿದ್ದು, ಮಗುವೂ ನೀಡುವ ಎಲ್ಲಾ ಸೂಚನೆಗಳನ್ನು ಆಗಲೇ ಗಮನಿಸಿ ಅಳವಡಿಸಿಕೊಳ್ಳುತ್ತಿತ್ತು. ಮತ್ತು ಬಾಲಕಿಯೊಂದಿಗೆ ಒಂದು ಹೆಜ್ಜೆಯೂ ತಪ್ಪಾಗದಂತೆ ಸಾಹಸಗಳನ್ನು ಮಾಡುತ್ತದೆ. ಈ ವಿಡಿಯೋ ನೋಡಿದರೆ ಇಬ್ಬರೂ ಈ ಸಾಹಸಗಳನ್ನು ಅಭ್ಯಾಸ ಮಾಡಲು ಸಾಕಷ್ಟು ಸಮಯವನ್ನು ತೆಗೆದುಕೊಂಡಿರಬಹುದು ಎಂದು ಎನಿಸುತ್ತದೆ. ಶ್ವಾನ(Dog) ಮತ್ತು ಬಾಲಕಿ ಇಬ್ಬರೂ ಈ ವಿಡಿಯೋವನ್ನು ಮತ್ತಷ್ಟು ಅದ್ಭುತವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಾಣುತ್ತದೆ.