ನವದೆಹಲಿ(ನ.23): ಹಿಮಾಲಯದ ತಪ್ಪಲಿನ ಪುಟ್ಟದೇಶ ಭೂತಾನ್‌ನ ಭೂಭಾಗವನ್ನು ಅತಿಕ್ರಮಿಸಿ, ಭಾರತದ ಮೇಲೆ ಕಣ್ಗಾವಲು ಇಡುವ ತನ್ನ ಕುತಂತ್ರ ಮುಂದುವರೆಸಿರುವ ಚೀನಾ, ಭೂತಾನ್‌ ಗಡಿಯೊಳಗೆ 9 ಕಿ.ಮೀ. ಉದ್ದದ ರಸ್ತೆಯನ್ನು ನಿರ್ಮಾಣ ಮಾಡಿರುವ ಸಂಗತಿ ಉಪಗ್ರಹ ಚಿತ್ರಗಳಿಂದ ಬೆಳಕಿಗೆ ಬಂದಿದ್ದು ಭಾರತದ ಕಳವಳಕ್ಕೆ ಕಾರಣವಾಗಿದೆ.

ಚೀನಾ ಸದ್ದಡಗಿಸಲು ಭಾರತದ ಸುರಂಗ ತಂತ್ರ!

ಮೂರು ವರ್ಷಗಳ ಹಿಂದೆ ಅಂದರೆ 2017ರಲ್ಲಿ ಡೋಕ್ಲಾಂನಲ್ಲಿ ಸಂಘರ್ಷ ಏರ್ಪಟ್ಟಿದ್ದಾಗ ಝಾಂಪೆಲ್ರಿ ದಿಬ್ಬದ ಪ್ರದೇಶವನ್ನು ತಲುಪಲು ಚೀನಾ ಯೋಧರು ಪ್ರಯತ್ನ ಪಟ್ಟಿದ್ದರು. ಅದಕ್ಕೆ ಭಾರತೀಯ ಯೋಧರು ಯಶಸ್ವಿಯಾಗಿ ತಡೆಯೊಡ್ಡಿದ್ದರು. ಈ ಜಾಗವನ್ನೇನಾದರೂ ಚೀನಾ ಅತಿಕ್ರಮಿಸಿಕೊಂಡರೆ ಭಾರತವನ್ನು ಈಶಾನ್ಯ ಭಾರತದ ಜತೆ ಬೆಸೆಯುವ ‘ಚಿಕನ್‌ ನೆಕ್‌’ ಭಾಗದ ಸ್ಪಷ್ಟಚಿತ್ರಣ ಚೀನಾಕ್ಕೆ ಸಿಗುತ್ತದೆ. ಆದ ಕಾರಣ ಭಾರತೀಯ ಯೋಧರು ಅವಕಾಶ ನೀಡಿರಲಿಲ್ಲ.

ಆದರೆ ಇದೀಗ ಭೂತಾನ್‌ನೊಳಗೆ 9 ಕಿ.ಮೀ. ರಸ್ತೆ ನಿರ್ಮಿಸುವ ಮೂಲಕ ಝಾಂಪೆಲ್ರಿ ದಿಬ್ಬವನ್ನು ತಲುಪಲು ಚೀನಾ ಪರಾರ‍ಯಯ ಹಾದಿ ಸೃಷ್ಟಿಸಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. 2017ರಲ್ಲಿ ಡೋಕ್ಲಾಂ ಸಂಘರ್ಷ ಏರ್ಪಟ್ಟಿದ್ದ ಸ್ಥಳಕ್ಕೂ ಹೊಸ ರಸ್ತೆಗೂ 10 ಕಿ.ಮೀ.ಗಿಂತ ಅಂತರ ಕಡಿಮೆ ಇದೆ. ತೋರ್ಸಾ ನದಿ ದಂಡೆಯಲ್ಲಿ ಈ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ.

ಮುಂಬೈ ಸ್ತಬ್ಧಗೊಳಿಸಿದ್ದ ವಿದ್ಯುತ್‌ ಕಡಿತಕ್ಕೆ ಸೈಬರ್‌ ದಾಳಿ ಕಾರಣ?

2017ರಲ್ಲಿ 2 ತಿಂಗಳ ಕಾಲ ಸೃಷ್ಟಿಯಾಗಿದ್ದ ಡೋಕ್ಲಾಂ ಬಿಕ್ಕಟ್ಟು ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ವುಹಾನ್‌ನಲ್ಲಿ ನಡೆಸಿದ ಸಭೆಯೊಂದಿಗೆ ಅಂತ್ಯವಾಗಿತ್ತು. ಆದರೆ ಈ ಬಾರಿ ಚೀನಾ ಬಿಕ್ಕಟ್ಟಿನ ಸ್ಥಳದ ತಂಟೆಗೆ ಬರದೆ ಪರಾರ‍ಯಯ ದಾರಿ ಸೃಷ್ಟಿಸಿರುವ ಸಾಧ್ಯತೆ ಇದೆ. ಅದೂ ಅಲ್ಲದೆ, ಗಡಿಯಲ್ಲಿ ಶಾಶ್ವತ ರಚನೆಗಳು, ರಸ್ತೆಗಳು ಹಾಗೂ ಹಳ್ಳಿಗಳನ್ನೇ ನಿರ್ಮಿಸುವ ಮೂಲಕ ಡೋಕ್ಲಾಂ ಭಾಗದಲ್ಲಿ ಮೂರು ವರ್ಷಗಳ ಹಿಂದೆ ಇದ್ದ ಸ್ಥಿತಿಯನ್ನೇ ಬದಲಿಸುತ್ತಿದೆ ಎಂದು ವ್ಯೂಹಾತ್ಮಕ ವ್ಯವಹಾರಗಳ ಪರಿಣತ ಡಾ

ಬ್ರಹ್ಮ ಚೆಲ್ಲನೆ ತಿಳಿಸಿದ್ದಾರೆ ಎಂದು ಟೀವಿ ವಾಹಿನಿಯೊಂದು ವರದಿ ಮಾಡಿದೆ.