*  3ನೇ ದಿನ ಆ್ಯಮ್‌ಸ್ಟರ್‌ಡ್ಯಾಂ ತಲುಪಿದ ‘ಮಣ್ಣು ಉಳಿಸಿ-100’ ರ‍್ಯಾಲಿ*  ಸದ್ಗುರು ಜತೆಗೆ ಸಂವಾದ ನಡೆಸಿದ ಖ್ಯಾತ ನಟಿ ಕ್ಯಾರಿಸ್‌ ವ್ಯಾನ್‌ ಹೌಟೆನ್‌*  ‘ಮಣ್ಣು ಉಳಿಸಿ’ ಅಭಿಯಾನದಲ್ಲಿ ಅವರೊಂದಿಗೆ ಪಾಲ್ಗೊಳ್ಳಲು ಹರ್ಷ: ಕ್ಯಾರಿಸ್‌ 

ಬೆಂಗಳೂರು(ಮಾ.25): ಈಶ ಫೌಂಡೇಶನ್‌(Isha Foundation) ಸಂಸ್ಥಾಪಕ ಸದ್ಗುರು(Sadhguru) ಹಮ್ಮಿಕೊಂಡ ‘ಮಣ್ಣು ಉಳಿಸಿ- 100 ದಿನದ ಬೈಕ್‌ ರ‍್ಯಾಲಿ’(Bike Rally) ಅಭಿಯಾನವು ಮೂರನೇ ದಿನ (ಮಾ.23) ನೆದರ್‌ಲ್ಯಾಂಡ್‌(Netherlands) ರಾಜಧಾನಿ ಆ್ಯಮ್‌ಸ್ಟರ್‌ಡ್ಯಾಮ್‌(Amsterdam) ತಲುಪಿದೆ. ಇಲ್ಲಿನ ಖ್ಯಾತ ನಟಿ ‘ಕ್ಯಾರಿಸ್‌ ವ್ಯಾನ್‌ ಹೌಟೆನ್‌’ ಅವರು ಸದ್ಗುರು ಜತೆಗೆ ಸಂವಾದ ನಡೆಸಿದರು.

ಐಕಾನಿಕ್‌ ಟಿವಿ ಶೋ ಆದ ಗೇಮ್‌ ಆಫ್‌ ಥ್ರೋನ್ಸ್‌ನಲ್ಲಿ ‘ಮೆಲಿಸಾಂಡ್ರೆ’ ಎಂದು ಪ್ರಸಿದ್ಧರಾಗಿರುವ ಈ ನಟಿ, ಇತ್ತೀಚೆಗೆ ಸದ್ಗುರು ಭಾಷಣದ ವಿಡಿಯೋ ನೋಡಿದ್ದ ನನ್ನಲ್ಲಿ ಕುತೂಹಲ ಮೂಡಿತ್ತು. ಈಗ ಪುನಃ ‘ಮಣ್ಣು ಉಳಿಸಿ’ ಅಭಿಯಾನದಲ್ಲಿ ಅವರೊಂದಿಗೆ ಪಾಲ್ಗೊಳ್ಳಲು ಹರ್ಷವೆನಿಸುತ್ತದೆ ಎಂದು ತಿಳಿಸಿದರು. ನಂತರ ‘ಸೇವ್‌ ಸಾಯ್ಲ್’ ಜಾಗೃತಿ ಭಾವಚಿತ್ರ ಪ್ರದರ್ಶಿಸಿ ಅಭಿಯಾನಕ್ಕೆ ಬೆಂಬಲ ಸೂಚಿಸಿದರು.

Save Soil Campaign: ಲಂಡನ್‌ನಿಂದ ಕಾವೇರಿವರೆಗೆ 35,000 ಕಿ.ಮೀ ಸದ್ಗುರು ಬೈಕ್‌ ರ್ಯಾಲಿ

ಸದ್ಗುರು ಮಾತನಾಡಿ, ನಿಮ್ಮಂತೆಯೆ ವಿಶ್ವದ 3-4 ಮಿಲಿಯನ್‌ ಜನರು ಬದುಕಿಗೆ ಅಗತ್ಯವಿರುವ ಮಣ್ಣಿನ ರಕ್ಷಣೆ(Save Soil) ಬಗ್ಗೆ ಮಾತನಾಡಬೇಕು. ಅವರೆಲ್ಲರಲ್ಲೂ ಅರಿವು ಮೂಡಿಸುವ ಉದ್ದೇಶದಿಂದ 100 ದಿನಗಳ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರಿಂದ ಬದಲಾವಣೆ ಸಾಧ್ಯವಾಗಲಿದೆ. 192 ದೇಶಗಳ ಭೌಗೋಳಿಕತೆ ಅನುಗುಣವಾಗಿ ಮಣ್ಣು ರಕ್ಷಣೆಯ ಕಾರ್ಯ ನೀತಿ ರೂಪಿಸಲಾಗಿದೆ ಎಂದು ವಿವರಿಸಿದರು. ಸಂವಾದದಲ್ಲಿ ನೆರೆದಿದ್ದ ಆ್ಯಮ್‌ಸ್ಟರ್‌ಡ್ಯಾಮ್‌ನ ನೂರಾರು ಜನ ಮಣ್ಣಿನ ರಕ್ಷಣೆ ಬಗ್ಗೆ ತಿಳಿದುಕೊಂಡರು.

ಹೋರಾಟಗಾರರ ಸ್ಮರಣೆ:

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಸದ್ಗುರು ರಾರ‍ಯಲಿಯಲ್ಲಿ ಭಾರತದ(India) ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದ ತೆಲಂಗಾಣದ ಕೋಮರಂ ಭೀಮ್‌ ಹಾಗೂ ತಮಿಳುನಾಡಿನ ತಿರುಪ್ಪುರ ಕುಮುರನ್‌ (ಕುಮಾರಸಾಮಿ ಮುದಲಿಯಾರ್‌) ಅವರನ್ನು ಪರಿಚಯಿಸಿದರು. ನಮಗಾಗಿ, ದೇಶಕ್ಕಾಗಿ ಹೋರಾಡಿ ಮಹಾನ್‌ ನಾಯಕರನ್ನು ಸ್ಮರಿಸಬೇಕು. ಹೋರಾಟಗಾರರ ಇತಿಹಾಸ ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ನಿತ್ಯ ಒಬ್ಬೊಬ್ಬ ಹೋರಾಟಗಾರರನ್ನು ಪರಿಚಯಿಸುತ್ತೇನೆ ಎಂದು ಹೇಳಿದರು.

Save Soil ಆಂದೋಲನ, ಲಂಡನ್‌ನಿಂದ ಭಾರತಕ್ಕೆ 100 ದಿನದ ಏಕಾಂಗಿ ಬೈಕ್ ರ‍್ಯಾಲಿ ಆರಂಭಿಸಿದ ಸದ್ಗುರು!

ಲಂಡನ್: ಕಾವೇರಿ ಕೂಗೂ ಸೇರಿದಂತೆ ಹಲವು ಸಾಮಾಜಿಕ ಅಭಿಯಾನಗಳ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿರುವ ಸದ್ಗುರು ಜಗ್ಗಿವಾಸುದೇವ್ ಇದೀಗ ಮಣ್ಣು ಉಳಿಸಿ ಅಭಿಯಾನ ಭರ್ಜರಿಯಾರಿ ಆರಂಭಿಸಿದ್ದಾರೆ. ಲಂಡನ್‌ನಿಂದ(London) ಏಕಾಂಗಿಯಾಗಿ ಬೈಕ್ ಮೂಲಕ ಭಾರತಕ್ಕೆ ಆಗಮಿಸಲಿದ್ದಾರೆ. 27 ರಾಷ್ಟ್ರಗಳ ಸುತ್ತಿ ಬರೋಬ್ಬರಿ 30,000 ಕಿಲೋಮೀಟರ್ ಕ್ರಮಿಸಿ ಭಾರತ ಪ್ರವೇಶಿಸಲಿದ್ದಾರೆ. 
ಲಂಡನ್‌ನಿಂದ ಆರಂಭಗೊಳ್ಳುವ ಮಣ್ಣು ಉಳಿಸಿ ಬೈಕ್ ರ‍್ಯಾಲಿ(Motorcycle Journey) ಕರ್ನಾಟಕದ(Karnataka) ಕಾವೇರಿಯಲ್ಲಿ ಅಂತ್ಯಗೊಳ್ಳಲಿದೆ. ಬರೋಬ್ಬರಿ 100 ದಿನ ಸದ್ಗುರು ಬೈಕ್ ಮೂಲಕ 27 ರಾಷ್ಟ್ರಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಸಂಚರಿಸಲಿದ್ದಾರೆ. ಲಂಡನ್‌ನ ಪ್ರತಿಷ್ಠಿತ ಟ್ರಾಫಲ್ಗರ್ ಸ್ಕ್ವಾರ್‌ನಿಂದ ಸೇವ್ ಸಾಯಿಲ್ ಅಭಿಯಾನದ ಬೈಕ್ ರ‍್ಯಾಲಿಗೆ ಚಾಲನೆ ನೀಡಲಾಗಿದೆ.

Save Soil ಸದ್ಗುರು ಮಣ್ಣು ಉಳಿಸಿ ಆಂದೋಲನಕ್ಕೆ ಬಾರ್ಬಡೋಸ್ ಸೇರಿ 6 ರಾಷ್ಟ್ರಗಳ ಬೆಂಬಲ!

100 ದಿನಗಳ ಬೈಕ್ ಸಂಚಾರದಲ್ಲಿ 27 ರಾಷ್ಟ್ರಗಳಲ್ಲಿ ಸದ್ಗುರು ಆಯಾ ದೇಶದ ಪ್ರಮುಖರ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಪ್ರತಿ ದೇಶದಲ್ಲಿ ಮಾಧ್ಯಮದ ಜೊತೆ ಪರಿಸರ ಜಾಗೃತಿ ಮೂಡಿಸಲಿದ್ದಾರೆ. ಈಗಾಗಲೇ ಕೆರಿಬಿಯನ್‌ನ 6 ದೇಶಗಳು ಸದ್ಗುರು ಮಣ್ಣು ಉಳಿಸಿ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡಿದೆ.

ಅಭಿಯಾನವು ಮಾ.21​ರಿಂದ ಆರಂಭ​ವಾ​ಗಲಿದ್ದು ಲಂಡನ್‌ನಿಂದ ಕರ್ನಾಟಕದ ಕಾವೇರಿವರೆಗೆ ‘ಮಣ್ಣು ಉಳಿಸಿ’ (ಸೇವ್‌ ಸಾಯ್‌್ಲ) ಬೈಕ್‌ ರಾರ‍ಯಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾರ‍ಯಲಿಯು ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನದಂದು ಕೊನೆಗೊಳ್ಳಲಿದೆ. ಒಟ್ಟು ನೂರು ದಿನಗಳ ಬೈಕ್‌ ರಾರ‍ಯಲಿಯನ್ನು ಸದ್ಗುರುಗಳು ಏಕಾಂಗಿಯಾಗಿ ಸಂಚರಿಸಲಿದ್ದಾರೆ. ಅಭಿಯಾನದಡಿ ಲಂಡನ್‌ನಿಂದ ಕರ್ನಾಟಕದ ಕಾವೇರಿವರೆಗಿನ 30 ಸಾವಿರ ಕಿಲೋಮೀಟರ್‌ ಕ್ರಮಿಸುವ ಮೂಲಕ ಬರ್ಲಿನ್‌, ಪ್ಯಾರಿಸ್‌, ಜಿನೇವಾ ಸೇರಿದಂತೆ 27 ರಾಷ್ಟ್ರಗಳಲ್ಲಿ ಬೈಕ್‌ ರಾರ‍ಯಲಿ ನಡೆಸಿ ಸುಮಾರು 350 ಕೋಟಿ ಜನರಿಗೆ ಮಣ್ಣಿನ ಬಗ್ಗೆ ಅರಿವು ಮೂಡಿಸುವ ಗುರಿ ಹೊಂದಲಾಗಿದೆ.