Save Soil ಸದ್ಗುರು ಮಣ್ಣು ಉಳಿಸಿ ಆಂದೋಲನಕ್ಕೆ ಬಾರ್ಬಡೋಸ್ ಸೇರಿ 6 ರಾಷ್ಟ್ರಗಳ ಬೆಂಬಲ!

  • ಪರಿಸರ ಜಾಗೃತಿ ಮೂಡಿಸಲು ಮತ್ತೊಂದು ಆಂದೋಲನ
  • ಸದ್ಗುರುವಿನಿಂದ ಮಣ್ಣು ಉಳಿಸಿ ಆಂದೋಲನ
  • ಸದ್ಗುರು ಜೊತೆ ಕೈಜೋಡಿಸಿದ ಕೆರಿಬಿಯನ್ 6 ರಾಷ್ಟ್ರಗಳು
Six Caribbean nations sign MoU with sadhguru on save Soil movement ensure long term food and water security ckm

ನವದೆಹಲಿ(ಮಾ.15): ಭಾರತದಲ್ಲಿ ಕಾವೇರಿ ಕೂಗು ಸೇರಿದಂತೆ ಹಲವು ಪರಿಸರ ಆಂದೋಲನದ ಮೂಲಕ ಜನರಲ್ಲಿ ಜಾಗೃತಿ ಹಾಗೂ ವಿಶ್ವವನ್ನೇ ಮುಂದೀನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಸದ್ಗುರು ಜಗ್ಗಿವಾಸುದೇವ್ ಇದೀಗ ಮಣ್ಣ ಉಳಿಸಿ ವಿಶೇಷ ಆಂದೋಲನ ಆರಂಭಿಸಿದ್ದಾರೆ. ಮಹಾ ಶಿವರಾತ್ರಿಯಂದು ಆರಂಭಿಸಿದ ಈ ಆಂದೋಲನಕ್ಕೆ ಭಾರತ ಸೇರಿದಂತೆ ವಿಶ್ವದಲ್ಲೇ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಇದೀಗ ಬಾರ್ಬಡೋಸ್ ದೇಶ ಸದ್ಗುರು ಮಣ್ಣು ಉಳಿಸಿ ಆಂದೋಲನಕ್ಕೆ ಕೈಜೋಡಿಸಿದೆ. ಈ ಮೂಲಕ ಕೆರಿಬಿಯನ್‌ನ 6ನೇ ದೇಶ ಸದ್ಗುರು ಜೊತೆ ಒಪ್ಪಂದಕ್ಕೆ ಸಹಿ ಮಾಡಿದೆ.

ಕಾಡು ನಾಶ, ಬದಲಾದ ತಾಪಮಾನ, ಅತಿವೃಷ್ಟಿ ಅನಾವೃಷ್ಟಿ ಸೇರಿದಂತೆ ಹಲವು ಸಮಸ್ಯೆಗಳನ್ನು ಭಾರತ ಸೇರಿದಂತೆ ವಿಶ್ವವೇ ಎದುರಿಸುತ್ತಿದೆ. ಅತೀಯದ ಮಳೆ, ಗುಡ್ಡ ಕುಸಿತ, ಪ್ರವಾಹ, ಬರಗಾಲ ಸೇರಿದಂತೆ ಹಲವು ಪ್ರಾಕೃತಿಕ ವಿಕೋಪಗಳು ಇತ್ತೀಚೆಗೆ ನಡೆದು ಹೋಗಿದೆ. ಪರಿಣಾಮ ಮಣ್ಣು ಸವಕಳಿಯಾಗುತ್ತಿದೆ. ಇದನ್ನು ಉಳಿಸದಿದ್ದರೆ ಮುಂದಿನ 50 ವರ್ಷಗಳಲ್ಲಿ ತುತ್ತು ಆಹಾರಕ್ಕೂ ಪರಿದಾಡುವ ಪರಿಸ್ಥಿತಿ ಎದುರಾಗಲಿದೆ ಎಂದು ವಿಜ್ಞಾನಿಗಳ ಸಂಶೋಧನಾ ವರದಿ ಹೇಳುತ್ತಿದೆ. ಇದರ ಬೆನ್ನಲ್ಲೇ ಮಣ್ಣು ಉಳಿಸಲು ವಿಶೇಷ ಕಾರ್ಯಕ್ರಮವನ್ನು ಸದ್ಗುರು ಹಮ್ಮಿಕೊಂಡಿದ್ದಾರೆ. ಈ ಆಂದೋಲನಕ್ಕೆ ಕೆರಿಬಿಯನ್ ರಾಷ್ಟ್ರಗಳಾದ ಆ್ಯಂಟಿಗುವಾ, ಬಾರ್ಬಡೋಸ್, ಡೋಮಿನಿಕಾ, ಸೈಂಟ್ ಲೂಸಿಯಾ, ಗಯಾನಾ, ಸೈಂಟ್ ಕಿಟಿಸ್ ದೇಶಗಳು ಮಣ್ಣು ಉಳಿಸುವ ವಿಶೇಷ ಕಾರ್ಯಕ್ರಮ ತಮ್ಮ ತಮ್ಮ ದೇಶದಲ್ಲಿ ಆಯೋಜಿಸಲು ಸದ್ಗುರು ಜಗ್ಗಿವಾಸುದೇವ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

Cauvery Calling Movement: ಸಸಿ ನೆಡುವ ಚಳವಳಿ ಇಡೀ ದೇಶ ವ್ಯಾಪಿಸಲಿ

ಕೆರಿಬಿಯನ್ ರಾಷ್ಟ್ರಗಳು ಮಾತ್ರವಲ್ಲ, ದೇಶ ವಿದೇಶದ ಸೆಲೆಬ್ರೆಟಿಗಳು ಈ ವಿಶೇಷ ಆಂದೋಲನದಲ್ಲಿ ಸದ್ಗುರು ಜೊತೆ ನಿಂತಿದ್ದಾರೆ. ಈ ಆಂದೋಲನದ ಮೂಲಕ ಆಯಾ ದೇಶಗಳು ಎದುರಿಸುತ್ತಿರುವ ಮಣ್ಣಿನ ಸವಕಳಿಯನ್ನು ನಿಲ್ಲಿಸಲು ಪ್ರತಿಜ್ಞೆ ಮಾಡಲಾಗುತ್ತದೆ. ಬಳಿಕ ಅದಕ್ಕೆ ತಕ್ಕಂತೆ ಕಾರ್ಯಗಳನ್ನು ಮಾಡಲಾಗುತ್ತದೆ. ಮಣ್ಣನ್ನು ಉಲಿಸಲು ಬೇಕಾದ ಪೂರಕ ಪರಿಸರವನ್ನು ಕಾಪಾಡಿಕೊಳ್ಳುವ ಹಾಗೂ ಸೃಷ್ಟಿಸಲಾಗುತ್ತದೆ. 

 

 

ಬೆಂಬಲ ನೀಡಿದ ಕೆರಿಬಿಯನ್ ದೇಶ, ಪ್ರಧಾನಿ ಹಾಗೂ ಇತರ ಗಣ್ಯರಿಗೆ ಸದ್ಗುರು ಧನ್ಯವಾದ ಹೇಳಿದ್ದಾರೆ. ಜೊತೆಯಾಗಿ ಮುಂದಿನ ಪೀಳಿಗಿಗೆ ಮಣ್ಣು ಹಾಗೂ ಪರಿಸರವನ್ನು ಹಾಳುಮಾಡದೇ ನೀಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸದ್ಗುರು ಹೇಳಿದ್ದಾರೆ.

Maha Shivratri 2022: ಶಿವನ ಜಪ ಮಾಡಿ ಕುಣಿದ ಸ್ಟಾರ್ ಹೀರೋಯಿನ್ಸ್!

ಮಣ್ಣು ಉಳಿಸಿ’ ಬೈಕ್‌ ರ್ಯಾಲಿ: ಸದ್ಗುರು, ತಂಡ ಲಂಡನ್‌ಗೆ
ಲಂಡನ್‌ನಿಂದ ಕರ್ನಾಟಕದ ಕಾವೇರಿವರೆಗೆ ಮಾ.21ರಿಂದ ನೂರು ದಿನಗಳ ಕಾಲ ಹಮ್ಮಿಕೊಂಡಿರುವ ‘ಮಣ್ಣು ಉಳಿಸಿ’ ಬೈಕ್‌ ರಾರ‍ಯಲಿ ಜಾಗೃತಿ ಅಭಿಯಾನ ನಿಮಿತ್ತ ಶನಿವಾರ ಈಶ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್‌ ಮತ್ತು ಸ್ವಯಂಸೇವಕರ ತಂಡವು ಕೊಯಮತ್ತೂರಿನ ಯೋಗ ಕೇಂದ್ರದಿಂದ ಲಂಡನ್‌ನತ್ತ ಪ್ರಯಾಣ ಮಾಡಿದೆ. ಈ ಪ್ರಯಾಣದಲ್ಲಿ ಕೆರಿಬಿಯನ್ ದೇಶಗಳ ಪ್ರಧಾನಿ, ಅಧ್ಯಕ್ಷರನ್ನು ಭೇಟಿ ಮಾಡಿ ಆಂದೋಲನದ ಭಾಗವಾಗಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಮಣ್ಣಿನ ರಕ್ಷಣೆ ಕುರಿತು ಅರಿವು ಮೂಡಿಸಲು ಈಶ ಫೌಂಡೇಶನ್‌ ಲಂಡನ್‌ನಿಂದ ಕಾವೇರಿವರೆಗೆ ನೂರು ದಿನಗಳ ಅಭಿಯಾನ ಹಮ್ಮಿಕೊಂಡಿದೆ. ಅಭಿಯಾನದಡಿ 35 ಸಾವಿರ ಕಿಲೋ ಮೀಟರ್‌ ಕ್ರಮಿಸುವ ಮೂಲಕ ಸುಮಾರು 27 ರಾಷ್ಟ್ರಗಳಲ್ಲಿ ಬೈಕ್‌ ರಾರ‍ಯಲಿ ನಡೆಸಲಿದೆ. ಈ ವೇಳೆ ಮಣ್ಣಿನ ರಕ್ಷಣೆ, ಭವಿಷ್ಯದಲ್ಲಿ ಉಂಟಾಗಲಿರುವ ಸಮಸ್ಯೆ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲಿದೆ. ಮಣ್ಣಿನ ರಕ್ಷಣೆ ಕುರಿತು ನೀತಿ ರೂಪಿಸಲು ಆಯಾ ರಾಷ್ಟ್ರಗಳ ಅಧ್ಯಕ್ಷರು ಅಭಿಯಾನಕ್ಕೆ ಕೈಜೋಡಿಸುವ ಸಾಧ್ಯತೆ ಇದೆ.

ಮಣ್ಣಿನ ಸವಕಳಿಯಿಂದ ಯುವಪೀಳಿಗೆಗೆ ಮುಂದಿನ 50 ವರ್ಷದಲ್ಲಿ ಆಹಾರ ಸಮಸ್ಯೆ ಉಂಟಾಗಲಿದೆ. ನಿರ್ಲಕ್ಷಿಸಿದರೆ ಇದು ಜಾಗತಿಕ ಸಮಸ್ಯೆಯಾಗಲಿದೆ. ಹೀಗಾಗಿ ಮಣ್ಣಿನ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು. ಈ ಕುರಿತು ಕೆಲವು ತಿಂಗಳ ಹಿಂದೆ ಜನಪ್ರತಿನಿಧಿಗಳ ಜತೆ ಸಭೆ ನಡೆಸಿ, ಮಣ್ಣಿನ ರಕ್ಷಣೆಗಾಗಿ ನೀತಿ ರೂಪಿಸುವಂತೆ ಆಗ್ರಹಿಸಿದ್ದೇವೆ ಎಂದು ಸದ್ಗುರು ಜಗ್ಗಿ ವಾಸುದೇವ್‌ ಅವರು ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios