Save Soil: ಚೆಕ್‌ ದೇಶದಲ್ಲಿ ಸದ್ಗುರು ‘ಮಣ್ಣು ಉಳಿಸಿ’ ಜಾಗೃತಿ

ಈಶ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಅವರ ‘ಮಣ್ಣು ಉಳಿಸಿ’ 100 ದಿನದ ಜಾಗೃತಿ ಆಂದೋಲನ ಶನಿವಾರ ಚೆಕ್‌ ಗಣರಾಜ್ಯದ ರಾಜಧಾನಿ ಪ್ರಾಗ್‌ ತಲುಪಿತು.

Sadhguru Bike Rally Czech Republic Entry gvd

ಬೆಂಗಳೂರು (ಮಾ.28): ಈಶ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಅವರ ‘ಮಣ್ಣು ಉಳಿಸಿ’ 100 ದಿನದ ಜಾಗೃತಿ ಆಂದೋಲನ ಶನಿವಾರ ಚೆಕ್‌ ಗಣರಾಜ್ಯದ ರಾಜಧಾನಿ ಪ್ರಾಗ್‌ ತಲುಪಿತು. 192ದೇಶಗಳ ಭೌಗೋಳಿಕ ಗುಣಲಕ್ಷಣದಡಿ ರೂಪಿಸಲಾದ ಜಾಗತಿಕ ಕರಡು ನೀತಿಯನ್ನು ಸದ್ಗುರು ಅಲ್ಲಿನ ಕೃಷಿ ಸಚಿವರಾದ ಇವಾ ವೆಸೆಲಾ ಅವರಿಗೆ ನೀಡಿದರು.

ಈ ವೇಳೆ ಮಾತನಾಡಿದ ಸದ್ಗುರು, ಈ ಪ್ರದೇಶದ ಹವಾಮಾನ, ಸಾಂಪ್ರದಾಯಿಕ ಕೃಷಿ ಪದ್ಧತಿ, ಭೂಮೇಲ್ಮೈ ಆಧರಿಸಿ ತಜ್ಞರು, ವಿಜ್ಞಾನಿಗಳೊಂದಿಗೆ ಸಮಾಲೋಚಿಸಿ ಕರಡು ನೀತಿ ತಯಾರಿಸಲಾಗಿದೆ. ಇದು ಮಣ್ಣಿನ ರಕ್ಷಣೆ, ಭವಿಷ್ಯದ ಆಹಾರ ಉತ್ಪಾದನೆಗೆ ಸಹಕಾರಿಯಾಗಲಿದೆ ಎಂದರು. ಕೃಷಿ ಭೂಮಿಯ ಕಾರ್ಪೋರೆಟ್‌ ಖರೀದಿ, ಮಣ್ಣಿನಲ್ಲಿನ ಜೈವಿಕ ಅಂಶದ ಮಹತ್ವ ಹಾಗೂ ಅಂತಹ ಮಣ್ಣು ನೀರನ್ನು ಹಿಡಿದಿಟ್ಟುಕೊಳ್ಳುವ ಅಂಶಗಳ ಕುರಿತು ವಿವರಿಸಿದರು.

ನಂತರ ಪ್ರಾಗ್‌ನ ಗಣಿತಜ್ಞ ಕಾರೆಲ್‌ ಜಾನೆಸೆಕ್‌ ಅವರೊಂದಿಗೆ ಸಮಾಲೋಚನೆ ನಡೆಸಿದ ಸದ್ಗುರು, ‘ಸೇವ್‌ ಸಾಯಿಲ್‌’ ಆಂದೋಲನದಲ್ಲಿ ಸ್ಥಳೀಯ ಉತ್ಸಾಹಿಗಳು ಹೆಚ್ಚೆಚ್ಚು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಹೇಳಿದರು. ಮಣ್ಣಿನ ನಾಶ ತಡೆಗಟ್ಟಲು ತುರ್ತು ಕಾರ್ಯನೀತಿ ರೂಪಿಸುವ ಅಗತ್ಯತೆ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಜನರು ಕೇಳಿದ ಪರಿಸರ ರಕ್ಷಣೆ ಮತ್ತು ಮಣ್ಣಿನ ಫಲವತ್ತತೆ, ಅಜ್ಞಾನ, ಆಧ್ಮಾತ್ಮಿಕತೆ, ಪ್ರಜ್ಞೆ ಸೇರಿದಂತೆ ಮತ್ತಿತರ ಅಂಶಗಳ ಕುರಿತು ಸದ್ಗುರು ಉತ್ತರಿಸಿದರು. ಪ್ರಾಗ್‌ ನಾಗರಿಕರು ‘ಸೇವ್‌ ಸಾಯಿಲ್‌’ ಜಾಗೃತಿ ಪೋಸ್ಟರ್‌ ಹಿಡಿದು ಅಭಿಯಾನಕ್ಕೆ ಬೆಂಬಲ ಸೂಚಿಸಿದರು.

Save Soil: ಸದ್ಗುರು ಬೈಕ್‌ ರ‍್ಯಾಲಿ ನೆದರ್‌ಲೆಂಡ್‌ ಪ್ರವೇಶ

ಹೋರಾಟಗಾರರ ಸ್ಮರಣೆ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಸದ್ಗುರು ರಾರ‍ಯಲಿಯಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದ ತೆಲಂಗಾಣದ ಕೋಮರಂ ಭೀಮ್‌ ಹಾಗೂ ತಮಿಳುನಾಡಿನ ತಿರುಪ್ಪುರ ಕುಮುರನ್‌ (ಕುಮಾರಸಾಮಿ ಮುದಲಿಯಾರ್‌) ಅವರನ್ನು ಪರಿಚಯಿಸಿದರು. ನಮಗಾಗಿ, ದೇಶಕ್ಕಾಗಿ ಹೋರಾಡಿ ಮಹಾನ್‌ ನಾಯಕರನ್ನು ಸ್ಮರಿಸಬೇಕು. ಹೋರಾಟಗಾರರ ಇತಿಹಾಸ ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ನಿತ್ಯ ಒಬ್ಬೊಬ್ಬ ಹೋರಾಟಗಾರರನ್ನು ಪರಿಚಯಿಸುತ್ತೇನೆ ಎಂದು ಹೇಳಿದರು.

100 ದಿನದ ಏಕಾಂಗಿ ಬೈಕ್ ರ‍್ಯಾಲಿ ಆರಂಭಿಸಿದ ಸದ್ಗುರು: ಕಾವೇರಿ ಕೂಗೂ ಸೇರಿದಂತೆ ಹಲವು ಸಾಮಾಜಿಕ ಅಭಿಯಾನಗಳ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿರುವ ಸದ್ಗುರು ಜಗ್ಗಿವಾಸುದೇವ್ ಇದೀಗ ಮಣ್ಣು ಉಳಿಸಿ ಅಭಿಯಾನ ಭರ್ಜರಿಯಾರಿ ಆರಂಭಿಸಿದ್ದಾರೆ. ಲಂಡನ್‌ನಿಂದ ಏಕಾಂಗಿಯಾಗಿ ಬೈಕ್ ಮೂಲಕ ಭಾರತಕ್ಕೆ ಆಗಮಿಸಲಿದ್ದಾರೆ. 27 ರಾಷ್ಟ್ರಗಳ ಸುತ್ತಿ ಬರೋಬ್ಬರಿ 30,000 ಕಿಲೋಮೀಟರ್ ಕ್ರಮಿಸಿ ಭಾರತ ಪ್ರವೇಶಿಸಲಿದ್ದಾರೆ.  ಲಂಡನ್‌ನಿಂದ ಆರಂಭಗೊಳ್ಳುವ ಮಣ್ಣು ಉಳಿಸಿ ಬೈಕ್ ರ‍್ಯಾಲಿ ಕರ್ನಾಟಕದ ಕಾವೇರಿಯಲ್ಲಿ ಅಂತ್ಯಗೊಳ್ಳಲಿದೆ. 

ಬರೋಬ್ಬರಿ 100 ದಿನ ಸದ್ಗುರು ಬೈಕ್ ಮೂಲಕ 27 ರಾಷ್ಟ್ರಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಸಂಚರಿಸಲಿದ್ದಾರೆ. ಲಂಡನ್‌ನ ಪ್ರತಿಷ್ಠಿತ ಟ್ರಾಫಲ್ಗರ್ ಸ್ಕ್ವಾರ್‌ನಿಂದ ಸೇವ್ ಸಾಯಿಲ್ ಅಭಿಯಾನದ ಬೈಕ್ ರ‍್ಯಾಲಿಗೆ ಚಾಲನೆ ನೀಡಲಾಗಿದೆ. 100 ದಿನಗಳ ಬೈಕ್ ಸಂಚಾರದಲ್ಲಿ 27 ರಾಷ್ಟ್ರಗಳಲ್ಲಿ ಸದ್ಗುರು ಆಯಾ ದೇಶದ ಪ್ರಮುಖರ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಪ್ರತಿ ದೇಶದಲ್ಲಿ ಮಾಧ್ಯಮದ ಜೊತೆ ಪರಿಸರ ಜಾಗೃತಿ ಮೂಡಿಸಲಿದ್ದಾರೆ. ಈಗಾಗಲೇ ಕೆರಿಬಿಯನ್‌ನ 6 ದೇಶಗಳು ಸದ್ಗುರು ಮಣ್ಣು ಉಳಿಸಿ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡಿದೆ.

Save Soil Campaign: ಲಂಡನ್‌ನಿಂದ ಕಾವೇರಿವರೆಗೆ 35,000 ಕಿ.ಮೀ ಸದ್ಗುರು ಬೈಕ್‌ ರ್ಯಾಲಿ

ಅಭಿಯಾನವು ಮಾ.21​ರಿಂದ ಆರಂಭ​ವಾ​ಗಲಿದ್ದು ಲಂಡನ್‌ನಿಂದ ಕರ್ನಾಟಕದ ಕಾವೇರಿವರೆಗೆ ‘ಮಣ್ಣು ಉಳಿಸಿ’ ಬೈಕ್‌ ರಾರ‍ಯಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾರ‍ಯಲಿಯು ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನದಂದು ಕೊನೆಗೊಳ್ಳಲಿದೆ. ಒಟ್ಟು ನೂರು ದಿನಗಳ ಬೈಕ್‌ ರಾರ‍ಯಲಿಯನ್ನು ಸದ್ಗುರುಗಳು ಏಕಾಂಗಿಯಾಗಿ ಸಂಚರಿಸಲಿದ್ದಾರೆ. ಅಭಿಯಾನದಡಿ ಲಂಡನ್‌ನಿಂದ ಕರ್ನಾಟಕದ ಕಾವೇರಿವರೆಗಿನ 30 ಸಾವಿರ ಕಿಲೋಮೀಟರ್‌ ಕ್ರಮಿಸುವ ಮೂಲಕ ಬರ್ಲಿನ್‌, ಪ್ಯಾರಿಸ್‌, ಜಿನೇವಾ ಸೇರಿದಂತೆ 27 ರಾಷ್ಟ್ರಗಳಲ್ಲಿ ಬೈಕ್‌ ರಾರ‍ಯಲಿ ನಡೆಸಿ ಸುಮಾರು 350 ಕೋಟಿ ಜನರಿಗೆ ಮಣ್ಣಿನ ಬಗ್ಗೆ ಅರಿವು ಮೂಡಿಸುವ ಗುರಿ ಹೊಂದಲಾಗಿದೆ.

Latest Videos
Follow Us:
Download App:
  • android
  • ios