ವಿಡಿಯೋ ಪೋಸ್ಟ್ ಮಾಡಿದ ನಟ ರಾಕ್‌ ಜಾನ್ಸನ್ ಕೆಲವು ವಾರದ ಹಿಂದೆ ತಮ್ಮ ಕುಟುಂಬಕ್ಕೆ ಕೊರೋನಾ ಪಾಸಿಟಿವ್ ಬಂದಿತ್ತು ಎಂದು ತಿಳಿಸಿದ್ದಾರೆ. ಎಲ್ಲರೂ ಅಗತ್ಯ ಮುನ್ನೆಚ್ಚರಿಕೆ, ಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ನಟ ತಮ್ಮ ಫ್ಯಾನ್ಸ್‌ ಬಳಿ ಮನವಿ ಮಾಡಿದ್ದಾರೆ.

WWE ರೆಸ್ಲಿಂಗ್ ಸೂಪರ್ ಸ್ಟಾರ್ ರಾಕ್‌ ಕುಟುಂಬಕ್ಕೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ನಟ ದ್ವೇನ್ ಜಾನ್ಸನ್ ಗುರುವಾರ ತಮ್ಮ ಕುಟುಂಬಕ್ಕೆ ಕೊರೋನಾ ಪಾಸಿಟಿವ್ ಬಂದಿದೆ ಎನ್ನುವುದನ್ನು ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಪತ್ನಿ ಲಾರೆನ್ ಹಾಗೂ ಮಕ್ಕಳಾದ ಟಿಯಾ ಮತ್ತು ಝಾಸಿ ಈಗ ಮೊದಲಿಗಿಂತ ಚೇತರಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಟ್ವಿಟರ್ ಹಿಸ್ಟರಿಯಲ್ಲೇ ಅತ್ಯಧಿಕ ಲೈಕ್ಸ್ ಪಡೆದ ಚಡ್ವಿಕ್ ಬೋಸ್ಮನ್ ಕೊನೆಯ ಪೋಸ್ಟ್

ನಾನು ವೈಯಕ್ತಿಕವಾಗಿ ಮತ್ತು ಕುಟುಂಬ ಸಮೇತ ಎದುರಿಸುತ್ತಿರುವ ಅತ್ಯಂತ ಸಾವಲಿನ ಸಮಯ. ಜೀವನದಲ್ಲಿ ಹಲವು ಸಲ ಗಾಯಗೊಂಡು, ಘಾಸಿಕೊಂಡದ್ದಕ್ಕಿಂತ ಇದು ಬಹಳ ವಿಭಿನ್ನ, ನನ್ನ ಮೊದಲ ಆದ್ಯತೆ ನನ್ನ ಕುಟುಂಬದ ಸುರಕ್ಷತೆ. ನಾವು ಸುರಕ್ಷಿತವಾಗಿದ್ದೇವೆ. ಆದರೆ ನಮಗೆ ಕೊರೋನಾ ಪಾಟಿಸಿವ್ ಬಂದಿದೆ ಎಂದಿದ್ದಾರೆ.

ನಾನು ನನ್ನ ಆಶೀರ್ವಾದಗಳನ್ನು ನೋಡುತ್ತಿದ್ದೇನೆ. ಏಕೆಂದರೆ ಇದು ಎಂದಿನ ಹಾಗಲ್ಲ ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ನನ್ನ ಸ್ನೇಹಿತರು ತಮ್ಮ ಹೆತ್ತವರನ್ನು, ಅವರ ಪ್ರೀತಿಪಾತ್ರರನ್ನು ಈ ವೈರಸ್‌ನಿಂದಾಗಿ ಕಳೆದುಕೊಂಡಿದ್ದಾರೆ. ಮಕ್ಕಳಲ್ಲಿ ಯಾವುದೇ ರೋಗಲಕ್ಷಣಗಳು ಕಾಣಿಸುವುದಿಲ್ಲ., ಆದ್ದರಿಂದ ನಮ್ಮ ಮಕ್ಕಳಾದ ಜಾಝಿ ಮತ್ತು ಟಿಯಾ ಅವರಿಗೆ ಸ್ವಲ್ಪ ಗಂಟಲು ನೋವಿತ್ತು. ಲಾರೆನ್ ಮತ್ತು ನನಗೆ ಭಿನ್ನ ಲಕ್ಷಣವಿತ್ತು ಎಂದಿದ್ದಾರೆ.

ಮಿಷನ್ ಇಂಪಾಸಿಬಲ್' ಬೆತ್ತಲಾದ ನಟಿ ಕೊಟ್ಟ ಕ್ಯಾಪ್ಶನ್ ಅಬ್ಬಬ್ಬಾ..!

ನಮ್ಮ ಅತ್ಯಂತ ಆಪ್ತ ಕುಟುಂಬ ಸ್ನೇಹಿತರಿಂದ ನಮಗೆ ಕೋವಿಡ್ -19 ಬಂತು. ನಿಮ್ಮ ಸ್ನೇಹಿತರು, ಕುಟುಂಬಸ್ಥರು, ಪ್ರೀತಿಪಾತ್ರರು ಇದ್ದಾರೆ. ಈಗ ನೀವು ಯಾರನ್ನು ಮನೆಗೆ ಆಹ್ವಾನಿಸುತ್ತೀರಿ ಎಂಬುದರ ಕುರಿತು ಇನ್ನೂ ಹೆಚ್ಚಿನ ಶಿಸ್ತು ಅನುಸರಿಸಿ. ಆರೋಗ್ಯ ಮತ್ತು ಸ್ವಾಸ್ಥ್ಯದ ಬಗ್ಗೆ ಹೆಚ್ಚಿನ ಬದ್ಧತೆ ಇರಲಿ. ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಾವು ಎಲ್ಲವನ್ನು ಮಾಡಬೇಕು. ನಾವು ನಿಯಂತ್ರಿಸಬಹುದಾದ ವಸ್ತುಗಳನ್ನು ನಿಯಂತ್ರಿಸಬೇಕು. ನಿಮ್ಮ ರೋಗನಿರೋಧಕ ಶಕ್ತಿ ರಾಜಿ ಮಾಡಿಕೊಳ್ಳದಿದ್ದಾಗ, ಕೋವಿಡ್ -19 ಅನ್ನು ಸೋಲಿಸಬಹುದು ಎಂದಿದ್ದಾರೆ.

ಹಾಲಿವುಡ್ ನಟ ರಾಕ್ ಎಲ್ಲ ಸಮಯದಲ್ಲೂ ಮಾಸ್ಕ್ ಧರಿಸುವಂತೆ ತಮ್ಮ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ. "ಮುಖವಾಡ ಧರಿಸುವುದು ರಾಜಕೀಯ ವಿಷಯವಲ್ಲ, ಇದು ನಿಜ ಎಂದಿದ್ದಾರೆ. ಜಾನ್ಸನ್ ಡಿಸ್ನಿ ಚಲನಚಿತ್ರ ಜಂಗಲ್ ಕ್ರೂಸ್ ರಿಲೀಸ್ ಎದುರು ನೋಡುತ್ತಿದ್ದಾರೆ. ಇದರಲ್ಲಿ ಅವರು ಮೊದಲ ಬಾರಿಗೆ ಎಮಿಲಿ ಬ್ಲಂಟ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.