Asianet Suvarna News Asianet Suvarna News

ಕೊರೋನಾ ಕಾಟ: ಬೆಂಗಳೂರಲ್ಲಿ 40000 ದಾಟಿದ ಸಕ್ರಿಯ ಕೇಸ್‌

ಬೆಂಗಳೂರಲ್ಲಿ ಗುರುವಾರ 3189 ಹೊಸ ಕೇಸ್‌| 2631 ಮಂದಿ ಗುಣಮುಖ| ಕಳೆದ 24 ಗಂಟೆಗಳ ಅವಧಿಯಲ್ಲಿ 17 ಮಂದಿ ಪುರುಷರು ಹಾಗೂ 12 ಮಂದಿ ಮಹಿಳೆಯರು ಸೇರಿ ಒಟ್ಟು 29 ಮಂದಿ ಸಾವು| ಮೃತರ ಪೈಕಿ ಬಹುತೇಕರು 50 ವರ್ಷ ಮೀರಿದವರೇ ಆಗಿದ್ದಾರೆ| 

Crossing 40000 Active Coronavirus Cases in Bengaluru
Author
Bengaluru, First Published Sep 4, 2020, 9:52 AM IST
  • Facebook
  • Twitter
  • Whatsapp

ಬೆಂಗಳೂರು(ಸೆ.04):ರಾಜಧಾನಿಯಲ್ಲಿ ಕಳೆದ 24 ತಾಸಿನಲ್ಲಿ 3,189 ಹೊಸ ಕೊರೋನಾ ಪಾಸಿಟಿವ್‌ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 40 ಸಾವಿರ ಗಡಿ ದಾಟಿದೆ.

ಆರೋಗ್ಯ ಇಲಾಖೆ ಗುರುವಾರ ಹೊರಡಿಸಿರುವ ಕೋವಿಡ್‌ ವರದಿಯಲ್ಲಿ ನಗರದಲ್ಲಿ 3,189 ಹೊಸ ಪ್ರಕರಣಗಳು ವರದಿಯಾಗಿದ್ದು, ಈವರೆಗೆ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 1,38,701ಕ್ಕೆ ಏರಿಕೆಯಾಗಿದೆ. ಇದೇ ವೇಳೆ 2,631 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಒಟ್ಟು 96,194 ಜನರು ಗುಣಮುಖರಾಗಿದ್ದಾರೆ. ಇನ್ನು ನಗರದಲ್ಲಿ 40,440 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 276 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುಡ್ ನ್ಯೂಸ್ : ಉಡುಪಿ ಜಿಲ್ಲೆ ಆಗುತ್ತಿದೆ ಕೊರೋನಾ ಮುಕ್ತ

29 ಸಾವು:

ಕಳೆದ 24 ಗಂಟೆಗಳ ಅವಧಿಯಲ್ಲಿ 17 ಮಂದಿ ಪುರುಷರು ಹಾಗೂ 12 ಮಂದಿ ಮಹಿಳೆಯರು ಸೇರಿ ಒಟ್ಟು 29 ಮಂದಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ನಗರದಲ್ಲಿ ಈವರೆಗೆ ನಗರದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 2,066ಕ್ಕೆ ಏರಿಕೆಯಾಗಿದೆ. ಮೃತರ ಪೈಕಿ ಬಹುತೇಕರು 50 ವರ್ಷ ಮೀರಿದವರೇ ಆಗಿದ್ದಾರೆ.

ಪಶ್ಚಿಮ ವಲಯದಲ್ಲಿ ಅತಿ ಹೆಚ್ಚು ಕಂಟೈನ್ಮೆಂಟ್‌ ಪ್ರದೇಶ

ಬಿಬಿಎಂಪಿ ಎಂಟು ವಲಯಗಳಲ್ಲಿ ಒಟ್ಟು 13,645 ಸೋಂಕು ಸಕ್ರಿಯ ಕಂಟೈನ್ಮೆಂಟ್‌ ಪ್ರದೇಶಗಳಿವೆ. ಈ ಪೈಕಿ ಅತಿ ಹೆಚ್ಚು ಪಶ್ಚಿಮ ವಲಯ 3,032, ಪೂರ್ವ 2,685, ದಕ್ಷಿಣ 2,596, ರಾಜರಾಜೇಶ್ವರಿನಗರ ವಲಯ 1,539, ಮಹದೇವಪುರ ವಲಯ 1,242, ಬೊಮ್ಮನಹಳ್ಳಿ ವಲಯ 1,048, ದಾಸರಹಳ್ಳಿ ವಲಯ 991 ಹಾಗೂ ಯಲಹಂಕ ವಲಯದಲ್ಲಿ 512 ಕಂಟೈನ್ಮೆಂಟ್‌ ಪ್ರದೇಶಗಳಿವೆ.
 

Follow Us:
Download App:
  • android
  • ios