ಎಲ್ಲಿರುವೆ ಪ್ರತಿಕ್ರಿಯಿಸಲು ಏಕೆ ತಡ ಎಂದು ಕೇಳಿದ್ದ ಅಮ್ಮ: ಸಾವಿಗೂ ಮುನ್ನ ಕೊನೆ ಸಂದೇಶ ಕಳುಹಿಸಿದ ರಷ್ಯಾ ಯೋಧ
- ತನ್ನ ಸಾವಿಗೂ ಮುನ್ನ ಕೊನೆ ಸಂದೇಶ ಕಳುಹಿಸಿದ ರಷ್ಯಾ ಯೋಧ
- ಯೋಧನ ಸಂದೇಶ ಬಿಡುಗಡೆ ಮಾಡಿದ ಉಕ್ರೇನ್ ಅಧಿಕಾರಿಗಳು
- ಎಲ್ಲಿರುವೆ ಪ್ರತಿಕ್ರಿಯಿಸಲು ಏಕೆ ತಡ ಎಂದು ಕೇಳಿದ್ದ ಅಮ್ಮ
ಕೈವ್(ಮಾ.1): ಅಮ್ಮಾ ನಾನು ಭಯಗೊಂಡಿದ್ದೇನೆ. ನಾವಿಲ್ಲಿ ನಾಗರಿಕರು ಸೇರಿದಂತೆ ಎಲ್ಲರಿಗೂ ಹೊಡೆಯುತ್ತಿದ್ದೇವೆ ಎಂದು ರಷ್ಯಾದ ಸೈನಿಕ ಯುದ್ಧದಲ್ಲಿ ತನ್ನ ಸಾವಿಗೂ ಮೊದಲು ತನ್ನ ತಾಯಿಗೆ ಕೊನೆಯ ಸಂದೇಶವನ್ನು ಕಳುಹಿಸಿದ್ದು, ರಷ್ಯಾ ಸೈನಿಕ ಕಳುಹಿಸಿದ ಈ ರಷ್ಯನ್ ಭಾಷೆಯಲ್ಲಿರುವ ಹೃದಯ ಹಿಂಡುವಂತಾಹ ಸಂದೇಶವನ್ನು ಉಕ್ರೇನ್ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ಅಮ್ಮಾ, ನಾನು ಉಕ್ರೇನ್‌ನಲ್ಲಿದ್ದೇನೆ. ಇಲ್ಲಿ ನಿಜವಾದ ಯುದ್ಧ ನಡೆಯುತ್ತಿದೆ. ನನಗೆ ಭಯವಾಗುತ್ತಿದೆ. ನಾವು ಎಲ್ಲಾ ನಗರಗಳನ್ನು ಒಟ್ಟಾಗಿ ಬಾಂಬ್ ದಾಳಿ ಮಾಡುತ್ತಿದ್ದೇವೆ, ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದೇವೆ. ಅವರು ನಮ್ಮ ಶಸ್ತ್ರಸಜ್ಜಿತ ವಾಹನಗಳ ಕೆಳಗೆ ಬೀಳುತ್ತಿದ್ದಾರೆ, ಚಕ್ರಗಳ ಕೆಳಗೆ ತಮ್ಮನ್ನು ಎಸೆಯುತ್ತಿದ್ದಾರೆ ಮತ್ತು ನಮಗೆ ಹಾದು ಹೋಗಲು ಬಿಡುತ್ತಿಲ್ಲ ಎಂದು ಹೇಳಿದರು.
ಪ್ರತಿಕ್ರಿಯಿಸುವುದಕ್ಕೆ ಏಕಿಷ್ಟು ತಡ. ನಿಜವಾಗಿಯೂ ನೀನು ತರಬೇತಿಯಲ್ಲಿ ಇದ್ದಿಯೇ ಎಂದು ತಾಯಿ ಮಗನನ್ನು ಕೇಳಿದ್ದಾಳೆ. ವಾಸ್ತವವಾಗಿ ಅವಳು ತನ್ನ ಮಗನಿಗೆ ಪ್ಯಾಕೇಜೊಂದನ್ನು ಕಳುಹಿಸುವ ಸಲುವಾಗಿ ಆತನನ್ನು ಪ್ರಶ್ನಿಸಿದ್ದಳು. ಇದಕ್ಕೆ ಸೈನಿಕನು ತನ್ನ ತಾಯಿಗೆ ರಷ್ಯನ್ ಭಾಷೆಯಲ್ಲಿ ಹೇಳುತ್ತಾನೆ, ತಾನು ಇನ್ನು ಮುಂದೆ ಕ್ರೈಮಿಯಾದಲ್ಲಿ ತರಬೇತಿ ಶಾಲೆಯಲ್ಲಿ ಇಲ್ಲ. ತಾನು ಪ್ರಸ್ತುತ ಉಕ್ರೇನ್‌ನಲ್ಲಿದ್ದು ಅಲ್ಲಿ ನಿಜವಾದ ಯುದ್ಧ ನಡೆಯುತ್ತಿದೆ ಎಂದು ಆತ ತನ್ನ ಅಮ್ಮನಲ್ಲಿ ಹೇಳುತ್ತಾನೆ.
Russia-Ukraine War: ಬಾಂಬ್ ಶೆಲ್ಟರ್‌ನಲ್ಲಿ ಮಗು ಜನನ, ಉಕ್ರೇನಿಯನ್ ಅಧ್ಯಕ್ಷರ ಪತ್ನಿಯ ಭಾವನಾತ್ಮಕ ಮಾತು
ಡೈಲಿ ಮೇಲ್ ಪ್ರಕಾರ, ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ ತುರ್ತು ವಿಶೇಷ ಅಧಿವೇಶನದಲ್ಲಿ ರಾಜತಾಂತ್ರಿಕ ಸೆರ್ಗಿ ಕಿಸ್ಲಿಟ್ಯಾ ಅವರು ಪಠ್ಯಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ ಮತ್ತು ಓದಿದ್ದಾರೆ. ಯೋಧನ ತಾಯಿಯು ತನ್ನ ಮಗ ಎಲ್ಲಿದ್ದಾನೆ ಎಂದು ತಿಳಿದುಕೊಳ್ಳಲು ಕೇಳಿದಾಗ ಅವನು ತರಬೇತಿಯಲ್ಲಿಲ್ಲ ಉಕ್ರೇನ್ ಆಕ್ರಮಣದಲ್ಲಿ ಭಾಗಿಯಾಗಿದ್ದು, ಭಯವಾಗುತ್ತಿರುವುದಾಗಿ ತಾಯಿಯೊಂದಿಗೆ ಹೇಳಿಕೊಂಡಿದ್ದಾನೆ. ಅಮ್ಮ ನಾನು ಉಕ್ರೇನ್‌ನಲ್ಲಿದ್ದೇನೆ. ಇಲ್ಲಿ ನಿಜವಾದ ಯುದ್ಧ ನಡೆಯುತ್ತಿದೆ. ನನಗೆ ಭಯವಾಗುತ್ತಿದೆ. ನಾವು ಉಕ್ರೇನ್‌ನ ಎಲ್ಲಾ ನಗರಗಳ ಮೇಲೆ ಒಟ್ಟಾಗಿ ಬಾಂಬ್ ದಾಳಿ ಮಾಡುತ್ತಿದ್ದೇವೆ, ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದೇವೆ ಎಂದು ಹೇಳುತ್ತಾನೆ.
ಕಳೆದ ವಾರ ರಷ್ಯಾ ಆಕ್ರಮಣವು ಪ್ರಾರಂಭವಾದಾಗಿನಿಂದ ಉಕ್ರೇನ್ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿರುವ ಬಾಂಬ್ ಸ್ಫೋಟಗಳು ಮತ್ತು ಗುಂಡಿನ ಚಕಮಕಿಗಳು ರಾತ್ರಿ ಸ್ವಲ್ಪ ಕಡಿಮೆಯಾಗಿದ್ದವು. ಉಕ್ರೇನಿಯನ್ ಮತ್ತು ರಷ್ಯಾದ ನಿಯೋಗಗಳು ನಿನ್ನೆ ಸೋಮವಾರ ಬೆಲಾರಸ್ ಗಡಿಯಲ್ಲಿ ಸಂಧಾನ ಸಭೆ ನಡೆಸಿದ್ದವು.
ಉಕ್ರೇನ್ ವಿಚಾರದಲ್ಲಿ ಅಳೆದು ತೂಗಿ ಏಕೆ ಹೆಜ್ಜೆ ಇಡುತ್ತಿದೆ ಭಾರತ? ಇಲ್ಲಿದೆ 5 ಕಾರಣ
ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಎಲ್ಲವೂ ಅಯೋಮಯವಾಗಿದೆ. ಉಕ್ರೇನ್‌ನಲ್ಲಿರುವ ರಾಜ್ಯದ ವಿದ್ಯಾರ್ಥಿಗಳಿಗೆ ರೋಗದ ಭೀತಿ ಎದುರಾಗಿದೆ. ಸರಿಯಾಗಿ ನೀರು, ಆಹಾರ ಸಿಗದೆ ಮೆಟ್ರೋ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಇದರ ಜೊತೆಗೆ ನೆಗಡಿ, ಜ್ವರದ ಭೀತಿ ಕಾಡುತ್ತಿದೆ. ಬಂಕರ್‌ಗಳಲ್ಲಿರುವ ಹಲವು ವಿದ್ಯಾರ್ಥಿಗಳಿಗೆ ಜ್ವರ ಸೇರಿ ಅನೇಕ ಅನಾರೋಗ್ಯದ ಸಮಸ್ಯೆಗಳು ಕಾಡುತ್ತಿವೆ. ಸದ್ಯ ಉಕ್ರೇನ್‌ನಲ್ಲಿ ಕ್ಲೀನಿಕ್, ಮೆಡಿಕಲ್ ಸ್ಟೋರ್‌ಗಳು ಬಂದ್ ಆಗಿವೆ. 350 ಕ್ಕೂ ಹೆಚ್ಚು ಕನ್ನಡಿಗರು ಬಂಕರ್‌ಗಳಲ್ಲಿ ಆಶ್ರಯ ಪಡೆದಿದ್ದಾರೆ. ಬಂಕರ್‌ವೊಳಗೆ ಬಾಂಬ್, ಶೆಲ್ ದಾಳಿಯ ಸದ್ದು ಕೇಳಿಸುತ್ತಿದೆ. ಇದರಿಂದ ವಿದ್ಯಾರ್ಥಿಗಳು ಮತ್ತಷ್ಟು ಭಯಭೀತರಾಗಿದ್ದಾರೆ.