ಕಳೆದ ವಾರ ಮರಿಯುಪೋಲ್ ಮೇಲೆ ದಾಳಿ ಮಾಡಿದ್ದ ರಷ್ಯಾ ಚಿತ್ರ ಮಂದಿರದ ಮೇಲೆ ಬಾಂಬ್ ದಾಳಿ ಮಾಡಿದ್ದ ರಷ್ಯಾ ಆಶ್ರಯ ಪಡೆದಿದ್ದ 300 ನಾಗರೀಕರ ಸಾವು  

ಮರಿಯುಪೊಲ್(ಮಾ.25): ಉಕ್ರೇನ್ ಮೇಲಿನ ದಾಳಿ ತೀವ್ರಗೊಳಿಸಿರುವ ರಷ್ಯಾ ಇದೀಗ ನಾಗರೀಕರ ಗುರಿಯಾಗಿಸಿ ದಾಳಿ ಮಾಡುತ್ತಿದೆ. ಕಳೆದವಾರ ಮರಿಯುಪೋಲ್‌ ನಗರದಲ್ಲಿ ರ್ಭಿಣಿಯರು, ಮಕ್ಕಳು, ಮಹಿಳೆಯರ ಆಶ್ರಯ ಪಡೆದಿದ್ದ ಚಿತ್ರಮಂದಿರದ ಮೇಲೆ ರಷ್ಯಾ ಬಾಂಬ್ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 300ಕ್ಕೂ ಹೆಚ್ಚು ಮಂದಿ ಸಾವೀಗಿಡಾಗಿದ್ದಾರೆ ಎಂದು ಸುದ್ಧಿ ಸಂಸ್ಧ ಎಎಫ್‌ಪಿ ವರದಿ ಮಾಡಿದೆ.

ಸಾವಿರಾರು ಮಂದಿ ಆಶ್ರಯ ಪಡೆದ್ದ ಕಟ್ಟದ ಮೇಲೆ ಬಾಂಬ್ ದಾಳಿ ಮಾಡಿತ್ತು. ಬಂಕರ್‌ ಮೇಲಿನ ಥಿಯೇಟರ್‌ ಮತ್ತು ಈಜುಕೊಳದ ಮೇಲೆ ನಡೆಸಿದ ದಾಳಿಯಲ್ಲಿ ಸಾವೀಗೀಡಾದವರ ಸಂಖ್ಯೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹಲವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೆ ಕೆಲವರನ್ನು ಆಸ್ಪತ್ರೆ ಸಾಗಿಸುವಲ್ಲಿ ವಿಳಂಬವಾಗಿದೆ. ಹೀಗಾಗಿ ಸ್ಛಳದಲ್ಲೇ ಪ್ರಾಣಬಿಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ರಷ್ಯಾ ಉಕ್ರೇನ್‌ ಭೀಕರ ಯುದ್ಧಕ್ಕೀಗ ತಿಂಗಳು: ಸಂಧಾನ ಸಭೆಗಳ ಬಳಿಕವೂ ನಿಲ್ಲದ ಕದನ

ಮರಿಯಪೋಲ್‌ನಲ್ಲಿ ರಷ್ಯಾ ನಡೆಸಿದ ದಾಳಿಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಮಕ್ಕಳು, ಗರ್ಭಿಣಿಯರು, ಮಹಿಳೆಯರ ಆಶ್ರಯ ಪಡೆದಿದ್ದ ಕಟ್ಟದ ಮೇಲೆ ದಾಳಿ ನಡೆಸಿರುವುದಕ್ಕೆ ಅಮೆರಿಕ ಸೇರಿದಂತೆ ಹಲವು ದೇಶಗಳು ಬಹಿರಂಗವಾಗಿ ರಷ್ಯಾ ಮೇಲೆ ಅಸಮಾಧಾನ ವ್ಯಕ್ತಪಡಿಸಿದೆ. ಆದರೆ ಯಾರ ಮಾತಿಗೂ ರಷ್ಯ ಕೇರ್ ಅಂದಿಲ್ಲ. 

ಶರಣಾಗತಿಗೆ ನಿರಾಕರಿಸಿದ ಉಕ್ರೇನ್‌ ಮೇಲೆ ರಷ್ಯಾಗೆ ಮತ್ತಷ್ಟು ಸಿಟ್ಟು
ಉಕ್ರೇನ್‌ ರಷ್ಯಾ ಯುದ್ಧ ಒಂದು ತಿಂಗಳು ಕಳೆದರೂ ಉಕ್ರೇನ್‌ ನಗರಗಳ ಮೇಲೆ ರಷ್ಯಾ ಭೀಕರ ವಾಯುದಾಳಿಯನ್ನು ಮುಂದುವರೆಸಿದೆ. ಮರಿಯುಪೋಲ್‌ನಲ್ಲಿ ಶರಣಾಗುವಂತೆ ರಷ್ಯಾ ನೀಡಿದ್ದ ಸೂಚನೆಯನ್ನು ಉಕ್ರೇನ್‌ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಕರಾವಳಿ ನಗರ ಮರಿಯುಪೋಲ್‌ ಮೇಲೆ ರಾತ್ರಿ ರಷ್ಯಾ 2 ಸೂಪರ್‌ಬಾಂಬ್‌ ಬಾಂಬ್‌ಗಳಿಂದ ದಾಳಿ ಮಾಡಿತ್ತು.

Russia Ukraine War: ಉಕ್ರೇನ್‌ ಮೇಲೆ ಫಾಸ್ಫರಸ್‌ ಬಾಂಬ್‌ ದಾಳಿ

ಈ ಬಾಂಬ್‌ಗಳ ದಾಳಿಯಿಂದಾಗಿ ನಗರದಲ್ಲಿ 1 ಲಕ್ಷ ಜನರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಉಕ್ರೇನ್‌ ಸರ್ಕಾರ ತಿಳಿಸಿದೆ. ರಷ್ಯಾ ಬಾಂಬ್‌ ದಾಳಿಯ ನಂತರ ನಾಶವಾದ ಅವಶೇಷಗಳು ಬಿಟ್ಟರೆ ಮಾರಿಯುಪೋಲ್‌ನಲ್ಲಿ ಮತ್ತೇನು ಉಳಿದಿಲ್ಲ. ಸುರಕ್ಷಿತ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದ್ದ ಸಮಯದಲ್ಲೇ ಶಕ್ತಿಶಾಲಿ ಬಾಂಬ್‌ ದಾಳಿ ನಡೆದಿದೆ ಎಂದು ಜೆಲೆನ್‌ಸ್ಕಿ ಹೇಳಿದ್ದಾರೆ. ಉಕ್ರೇನ್‌ ಸರ್ಕಾರ ಮರಿಯುಪೋಲ್‌ನಿಂದ ಜನರ ತೆರವಿಗೆ ಯತ್ನ ನಡೆಸುತ್ತಿರುವ ಹೊತ್ತಿನಲ್ಲೇ, ರಷ್ಯಾ ನಗರದ ಮೇಲಿನ ತನ್ನ ದಾಳಿ ತೀವ್ರಗೊಳಿಸಿದೆ.

ಉಕ್ರೇನ್‌ನ ಪಶ್ಚಿಮ ಭಾಗದ ತುದಿಯಲ್ಲಿರುವ ಲಿವಿವ್‌ನ ಯಾರೊವಿವ್‌ ಮಿಲಿಟರಿ ನೆಲೆ ಮೇಲೆ 30ಕ್ಕೂ ಹೆಚ್ಚು ಕ್ರೂಸ್‌ ಕ್ಷಿಪಣಿಗಳ ಮೂಲಕ ರಷ್ಯಾ ದಾಳಿ ನಡೆಸಿದೆ. ಈ ದಾಳಿಯಲ್ಲಿ ಉಕ್ರೇನ್‌ ಸೇನೆಯ ಭಾಗವಾಗಿದ್ದ 180ಕ್ಕೂ ಹೆಚ್ಚು ವಿದೇಶಿ ಮೂಲದ ಯೋಧರು ಸಾವನ್ನಪ್ಪಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಧ್ವಂಸಗೊಳಿಸಿರುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ. ಈ ಸೇನಾ ನೆಲೆ ಲಿವಿವ್‌ನಿಂದ 30 ಕಿ.ಮೀ. ದೂರದಲ್ಲಿದೆ. ನ್ಯಾಟೋ ರಾಷ್ಟ್ರವಾದ ಪೋಲೆಂಡ್‌ ಗಡಿಗೆ 35 ಕಿ.ಮೀ. ಸನಿಹದಲ್ಲಿದೆ. 

ರಷ್ಯಾದ ಅಪ್ರಚೋದಿತ ದಾಳಿಗೆ ಖಂಡನೆ ವ್ಯಕ್ತಪಡಿಸಿರುವ ಅಮೆರಿಕ, ಬ್ರಿಟನ್‌ ಸೇರಿದಂತೆ ಹಲವು ಪಾಶ್ಚಿಮಾತ್ಯ ದೇಶಗಳು ರಷ್ಯಾ ವಿರುದ್ಧ ಆರ್ಥಿಕ ನಿರ್ಬಂಧ ವಿಧಿಸಿವೆ. ಸ್ವಿಫ್ಟ್‌ನಿಂದ ರಷ್ಯಾ ಬ್ಯಾಂಕುಗಳನ್ನು ಹೊರದಬ್ಬಲಾಗಿದೆ. ಪ್ರಮುಖ ಅಂತಾರಾಷ್ಟ್ರೀಯ ಕಂಪನಿಗಳು ರಷ್ಯಾದ ಮಾರುಕಟ್ಟೆಯನ್ನು ತೊರೆದು ಸ್ಥಳಾಂತರಗೊಂಡಿವೆ.

ಉಕ್ರೇನ್‌ ಮೇಲೆ ಸತತ 28 ದಿನಗಳಿಂದ ದಾಳಿ ನಡೆಸುತ್ತಿರುವ ರಷ್ಯಾ, ಅಗತ್ಯ ಬಿದ್ದರೆ ಅಣ್ವಸ್ತ್ರ ದಾಳಿಯ ಸಾಧ್ಯತೆ ಮುಕ್ತವಾಗಿರಿಸಿಕೊಂಡಿರುವುದಾಗಿ ಹೇಳಿದೆ. ಈ ಮೂಲಕ ಮತ್ತೊಮ್ಮೆ ನ್ಯಾಟೋ ದೇಶಗಳಿಗೆ ಬಹಿರಂಗ ಎಚ್ಚರಿಕೆ ಸಂದೇಶ ರವಾನಿಸಿದೆ.