ಹೆರಿಗೆ ಆಸ್ಪತ್ರೆ ಸೇರಿ 3 ಆಸ್ಪತ್ರೆಗಳ ಮೇಲೆ ವಾಯುದಾಳಿಹಲವು ಗರ್ಭಿಣಿಯರು, ಮಕ್ಕಳು ಸಾವನ್ನಪ್ಪಿದ ಶಂಕೆರಷ್ಯಾ ನಡೆ ಅಮಾನವೀಯ: ಜೆಲೆನ್‌ಸ್ಕಿಯುದ್ಧ ಆರಂಭದ ನಂತರ 18 ಆಸ್ಪತ್ರೆಗಳ ಮೇಲೆ ದಾಳಿ: ಡಬ್ಲುಎಚ್‌ಒ

ಮರಿಯುಪೋಲ್‌, ಉಕ್ರೇನ್‌ (ಮಾ.10): ಬುಧವಾರ ಕದನವಿರಾಮದ (ceasefire) ಕಾರಣ ನೀಡಿ ಸುಮ್ಮನಿದ್ದ ರಷ್ಯಾ (Russia), ಗುರುವಾರ ಉಕ್ರೇನ್‌ನ ಮರಿಯುಪೋಲ್‌ (Mariupol) ಹಾಗೂ ಇತರ ಕೆಲವು ನಗರ 3 ಆಸ್ಪತ್ರೆಗಳ ಮೇಲೆ ವಾಯುದಾಳಿ (AirStrike) ನಡೆಸಿದೆ. ಈ ದಾಳಿಯಲ್ಲಿ ಅನೇಕ ಮಕ್ಕಳು, ರೋಗಿಗಳು ಹಾಗೂ ಬಾಣಂತಿಯರು ಸಾವನ್ನಪ್ಪಿದ ಶಂಕೆ ಇದೆ.

ಮರಿಯುಪೋಲ್‌ ನಗರದ ಹೆರಿಗೆ ಆಸ್ಪತ್ರೆಯೊಂದರ (maternity hospital ) ಮೇಲೆ ರಷ್ಯಾ ವೈಮಾನಿಕ ದಾಳಿ (russian airstrike) ನಡೆಸಿದೆ. ಈ ವೇಳೆ ಇನ್ನೇನು ಹೆರಿಗೆಗೆ ಒಳಗಾಗುತ್ತಿದ್ದ ಮಹಿಳೆಗೆ ತೀವ್ರ ಗಾಯಗಳಾಗಿವೆ. ಸ್ಫೋಟ ಎಷ್ಟುತೀವ್ರವಾಗಿತ್ತು ಎಂದರೆ ಅನೇಕ ಮೈಲಿ ದೂರದವರೆಗೆ ಶಬ್ದ ಕೇಳಿಸಿದೆ. ಅಕ್ಕಪಕ್ಕದ ಕಟ್ಟಡಗಳು ಸ್ಫೋಟದ ರಭಸಕ್ಕೆ ನಡುಗಿ ಹೋಗಿವೆ. ಇನ್ನು ಕೀವ್‌ (Kyiv) ಸಮೀಪದ ಝೈತೋಮಿರ್‌ ಎಂಬ ನಗರದ 2 ಆಸ್ಪತ್ರೆಗಳ ಮೇಲೂ ರಷ್ಯಾ ಬಾಂಬ್‌ ಮಳೆಗರೆದಿದೆ. ಇದರಲ್ಲಿ ಒಂದು ಮಕ್ಕಳ ಆಸ್ಪತ್ರೆಯಾಗಿದೆ. ಸುದೈವವಶಾತ್‌ ಇಲ್ಲಿ ಸಾವು ನೋವು ಸಂಭವಿಸಿಲ್ಲ. ಮರಿಯುಪೋಲ್‌ ಆಸ್ಪತ್ರೆ ಮೇಲಿನ ದಾಳಿಯಲ್ಲಿ 17 ಮಂದಿ ಗಾಯಗೊಂಡಿದ್ದು ಮಾತ್ರ ಖಚಿತವಾಗಿದೆ.

ರಷ್ಯಾ ಈ ರೀತಿ ದಾಳಿ ನಡೆಸುತ್ತಿರುವುದಕ್ಕೆ ಉಕ್ರೇನ್‌ ತೀವ್ರ ಖಂಡನೆ ವ್ಯಕ್ತಪಡಿದೆ. ‘ಮಕ್ಕಳ ಆಸ್ಪತ್ರೆ ಮೇಲೂ ದಾಳಿ ನಡೆಸುವಷ್ಟುರಷ್ಯಾ ನಿಷ್ಕರುಣಿಯಾಗಿದೆ. ಇದೊಂದ ದೊಡ್ಡ ಅಪರಾಧ’ ಎಂದು ರಷ್ಯಾ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ (Ukrainian President Volodymyr Zelensky) ಹಾಗೂ ಉಕ್ರೇನ್‌ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಷ್ಯಾ ಮೇಲೆ ಪಾಶ್ಚಾತ್ಯ ದೇಶಗಳು ಇನ್ನಷ್ಟುಕಠಿಣ ನಿರ್ಬಂಧಗಳನ್ನು ಹೇರಬೇಕು. ಇದು ನರಮೇಧವಲ್ಲದೇ ಮತ್ತಿನ್ನೇನು ಎಂದು ಕಿಡಿಕಾರಿದ್ದಾರೆ.

ಈವರೆಗೆ 18 ಆಸ್ಪತ್ರೆಗಳ ಮೇಲೆ ದಾಳಿ: ಫೆ.25ರಂದು ಉಕ್ರೇನ್‌ ಮೇಲೆ ರಷ್ಯಾ ದಾಳಿ ಆರಂಭಿಸಿದ ನಂತರ 18 ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದೆ. ಈವರೆಗೆ ಆಸ್ಪತ್ರೆಗಳ ಮೇಲಿನ ದಾಳಿಯಲ್ಲಿ 10 ಮಂದಿ ಬಲಿಯಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (world health organization) ಹೇಳಿದೆ. ಆದರೆ ಈ ಸಾವಿನಲ್ಲಿ ಗುರುವಾರ ನಡೆದ ಆಸ್ಪತ್ರೆ ಮೇಲಿನ ದಾಳಿಯ ಸಾವು-ನೋವು ಕೂಡ ಸೇರಿದೆಯೇ ಎಂಬುದು ಖಚಿತವಾಗಿಲ್ಲ.

ಝೆಲೆನ್ಸ್ಕಿ ಈ ದಾಳಿಯನ್ನು "ದೌರ್ಜನ್ಯ" ಎಂದು ಖಂಡಿಸಿದ್ದು ಮಾತ್ರವಲ್ಲದೆ ದೇಶದ ಮೇಲೆ ಹಾರಾಟ-ನಿಷೇಧ ವಲಯವನ್ನು ಹೇರಲು ಮತ್ತೊಮ್ಮೆ ಕರೆ ನೀಡಿದರು. ಆದರೆ, ನ್ಯಾಟೋ ಈ ಘೋಷಣೆ ಮಾಡಲು ನಿರಾಕರಿಸಿದೆ. ಬ್ರಿಟಿಷ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ( England Prime Minister Boris Jhonson ) ಕೂಡ ದಾಳಿಯನ್ನು ಖಂಡಿಸಿದರು: "ದುರ್ಬಲ ಮತ್ತು ರಕ್ಷಣೆಯಿಲ್ಲದವರನ್ನು ಗುರಿಯಾಗಿಸಿಕೊಳ್ಳುವುದಕ್ಕಿಂತ ಕೆಟ್ಟ ವಿಷಯಗಳು ಇದ್ದಂತಿಲ್ಲ' ಎಂದು ಹೇಳಿದ್ದಾರೆ.

Russia- Ukraine War: ತಲೆಕೆಳಗಾಯ್ತು ಬೈಡೆನ್ ಲೆಕ್ಕಾಚಾರ, ಪುಟಿನ್ ಆಟಕ್ಕೆ ಅಮೆರಿಕಾ ಗಪ್‌ಚುಪ್.!
ಸಾಮೂಹಿಕ ಶವ ಹೂಳುವಿಕೆ:
ಮರಿಯುಪೋಲ್‌ನಲ್ಲಿ ಕಳೆದ ಕೆಲವು ದಿನಗಳಲ್ಲಿ ರಷ್ಯಾ ದಾಳಿಗೆ ನೂರಾರು ಜನ ಸಾವನ್ನಪ್ಪಿದ್ದಾರೆ. ನಗರದಲ್ಲಿ ಸಾಮೂಹಿಕವಾಗಿ ಇವರನ್ನು ಹೂಳಲಾಗುತ್ತಿದೆ. ಮಂಗಳವಾರ ಹೊಸ ಸ್ಮಶಾನ ಸ್ಥಾಪಿಸಲಾಗಿದ್ದು, ಒಂದೇ ಕಡೆ 70 ಶವ ಹೂಳಲಾಗಿದೆ.

Russia- Ukraine War: 200 ರ ಗಡಿಯತ್ತ ಅಡುಗೆ ಎಣ್ಣೆ, ಖರೀದಿಗೆ ಮಿತಿ ನಿಗದಿ
ಉಕ್ರೇನ್‌-ರಷ್ಯಾ ಸಚಿವರ ಶಾಂತಿ ಮಾತುಕತೆ ವಿಫಲ 
ಕೀವ್‌:
ಮಾನವೀಯ ನೆಲೆಯಲ್ಲಿ ಜನರ ಸುರಕ್ಷಿತ ಸ್ಥಳಾಂತರಕ್ಕೆ ಕದನವಿರಾಮ ವಿಸ್ತರಿಸುವ ಬಗ್ಗೆ ರಷ್ಯಾ ವಿದೇಶಾಂಗ ಸಚಿವ ಸರ್ಗೈ ಲಾವ್ರೋವ್‌ ಅವರ ಜತೆ ಉಕ್ರೇನ್‌ ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಬಾ ನಡೆಸಿದ ಮಾತುಕತೆ ವಿಫಲವಾಗಿದೆ. ‘ಉಕ್ರೇಣ್‌ ಶರಣಾಗಬೇಕು ಎಂದು ರಷ್ಯಾ ಷರತ್ತು ವಿಧಿಸಿದೆ. ಕದನವಿರಾಮಕ್ಕೆ ಒಪ್ಪುತ್ತಿಲ್ಲ’ ಎಂದು ಡಿಮಿಟ್ರೋ ಆರೋಪಿಸಿದ್ದಾರೆ.