Asianet Suvarna News Asianet Suvarna News

ಮುಂದುವರೆದ ರಷ್ಯಾ ರಣೋತ್ಸಾಹ... ಸ್ಮಶಾನವಾದ ಉಕ್ರೇನ್ ನಗರಗಳು

  • ಉಕ್ರೇನ್‌ ಮೇಲೆ ದಂಡೆತ್ತಿ ಹೋದ ರಷ್ಯಾ ಅಬ್ಬರ ಮುಂದುವರೆದಿದ್ದು 12ನೇ ದಿನವೂ ರಷ್ಯಾ ಮಾರಕ ದಾಳಿ ನಡೆಸುತ್ತಿದೆ. ಉಕ್ರೇನ್‌ನ ಬಹುತೇಕ ನಗರಗಳು ಸ್ಮಶಾನ ಸ್ವರೂಪವಾಗಿವೆ.
Russia Ukraine War enters 12th day, 1.5 million people fled since Feb 24 akb
Author
Bangalore, First Published Mar 7, 2022, 11:33 AM IST | Last Updated Mar 7, 2022, 12:09 PM IST

ರಷ್ಯಾ ಆಕ್ರಮಣದಿಂದ ಉಕ್ರೇನ್‌ನ ಬಹುತೇಕ ನಗರಗಳು ಸ್ಮಶಾನ ಸ್ವರೂಪವಾಗಿವೆ. ಘೋರ ಯುದ್ಧದ ನಡುವೆಯೂ ಇಂದು ಮೂರನೇ ಸಂಧಾನ ಸಭೆ ನಡೆಯುತ್ತಿದೆ. ಮೊದಲ ಎರಡು ಸಂಧಾನ ಸಭೆಗಳು ಈಗಾಗಲೇ ವಿಫಲವಾಗಿವೆ ರಷ್ಯಾ ರಣಾರ್ಭಟಕ್ಕೆ ಉಕ್ರೇನ್‌ ನಗರಗಳು ಸಂಪೂರ್ಣ ಧ್ವಂಸವಾಗಿದೆ. ಸತತ ಬಾಂಬ್ ಸ್ಫೋಟದಿಂದಾಗಿ ವಾತಾವರಣವೂ ಸಂಪೂರ್ಣ ಮಾಲಿನ್ಯವಾಗಿದ್ದು, ಶುದ್ಧ ಗಾಳಿ ಸಿಗುವುದು ಇಲ್ಲಿ ದುಸ್ತರವಾಗಿದೆ. ಇದರ ಮಧ್ಯೆ ಆಪರೇಷನ್‌ ಗಂಗಾ ಕೊನೆ ಹಂತದಲ್ಲಿದೆ. ಇಂದು 8 ವಿಮಾನದಲ್ಲಿ ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ ಒಂದೂವರೆ ಸಾವಿರ ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ ಆಗಲಿದ್ದಾರೆ.
 

ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಜನ ಜೀವನ ಸಂಪೂರ್ಣ ನರಕವಾಗಿದೆ. ಅದಾಗ್ಯೂ ಉಕ್ರೇನಿಗರ ಜೀವನೋತ್ಸಾಹಕ್ಕೆ ಮಾತ್ರ ಯಾವುದೇ ಭಂಗವಾಗಿಲ್ಲ. ಕೊನೆ ಉಸಿರಿರುವವರೆಗೂ ಹೋರಾಡಲು ನಿರ್ಧರಿಸಿರುವ ಉಕ್ರೇನಿಗರ ಧೈರ್ಯ ಸಾಹಸದ ಹಲವು ವಿಡಿಯೋಗಳು ಈಗಾಗಲೇ ವೈರಲ್‌ ಆಗಿವೆ. ಉಕ್ರೇನ್‌ನಿಂದ ಒಂದೂವರೆ ಕೋಟಿ ಜನ ದೇಶ ತೊರೆದಿದ್ದು, ನೆರೆಯ ರಾಷ್ಟ್ರಗಳಲ್ಲಿ ನಿರಾಶ್ರಿತರಾಗಿದ್ದಾರೆ. ರಷ್ಯಾ ಫೆ.24ರಿಂದ ಯುದ್ಧ ಘೋಷಣೆ ಮಾಡಿ ನಿರಂತರವಾಗಿ ಆಕ್ರಮಣ ನಡೆಸುತ್ತಿದೆ. ಶೆಲ್, ಬಾಂಬ್ ದಾಳಿಗಳು, ಗುಂಡು ಹಾರಾಟಗಳು ಸಾಮಾನ್ಯವಾಗಿವೆ. 

Ukraine Crisis: ರಷ್ಯಾ ಸೋಲುತ್ತಿದೆ, ನಾವೀಗ ದುಸ್ವಪ್ನವಾಗಿದ್ದೇವೆ: ಜೆಲೆನ್‌ಸ್ಕಿ

ಕರಾವಳಿಯ  ನಗರ ಮತ್ತು ಪಶ್ಚಿಮ ಗಡಿಯ ಸಮುದ್ರ ಭಾಗ ರಷ್ಯಾದ ಹಿಡಿತದಲ್ಲಿದೆ. ಅಲ್ಲಿಂದ ಯುದ್ಧ ಸಲಕರಣೆಗಳನ್ನು ಮರಿಯಪೋಲು ಸೇರಿದಂತೆ ಇತರ ನಗರಗಳಿಗೆ ಸರಬರಾಜು ಮಾಡಿಕೊಂಡು ದಾಳಿ ಮುಂದುವರೆಸಿದೆ. ರಾಷ್ಟ್ರದ ರಾಜಧಾನಿ ಕ್ಯಿವ್‍ನಲ್ಲಿ ಸಾವುನೋವುಗಳು ಹೆಚ್ಚಾಗಿವೆ. ಖಾರ್ಕೀವ್ ಸೇರಿದಂತೆ ಬಹಳಷ್ಟು ನಗರಗಳು ಸಂಕಷ್ಟಕ್ಕೆ ಸಿಲುಕಿವೆ. ಖಾರ್ಕೀವ್ (Kharkiv), ಒಡೆಸ್ಸಾ(Odessa), ಡೊಂಟೆಸ್ಕ್(Donetsk), ಎಲ್ವಿವ್(Lviv) , ಮೈಕೋಲೈವ್ (Mykolaiv), ಚರ್ನೀವ್ (Churniv), ಸುಮಿ (Sumy) ಸೇರಿದಂತೆ ಹಲವು ನಗರಗಳು ಸಂಪೂರ್ಣ ಸರ್ವನಾಶವಾಗಿವೆ. 12 ದಿನಗಳ ಯುದ್ಧದಲ್ಲಿ ಎರಡು ಬಾರಿ ಲಘು ಕದನ ವಿರಾಮ ನೀಡಲಾಗಿತ್ತು. ಉಳಿದಂತೆ ನಿರಂತರವಾಗಿ ದಾಳಿ ನಡೆಯುತ್ತಿದೆ. ಇದರಿಂದ ಭಯಭೀತರಾದ ಜನ ಪ್ರಾಣ ರಕ್ಷಣೆಗಾಗಿ ಬಂಕರ್‌ಗಳಲ್ಲಿ ಅಡಗಿ ಕುಳಿತಿದ್ದಾರೆ. ಅಪಾರ್ಟ್‍ಮೆಂಟ್‍ಗಳು, ಮನೆಗಳು ಶೆಲ್ ದಾಳಿಯಿಂದ ಧ್ವಂಸಗೊಂಡಿವೆ. ನೀರು, ವಿದ್ಯುತ್ ಸೌಲಭ್ಯಗಳು ಸಂಪೂರ್ಣ ಕಡಿತ ಗೊಂಡಿವೆ. ಬಹುತೇಕ ನಗರೀಕರಣ ಮತ್ತು ಆಧುನೀಕರಣದಿಂದ ಸುಭಿಕ್ಷವಾಗಿದ್ದ ಉಕ್ರೇನ್ ಯುದ್ಧದಿಂದಾಗಿ ಭೂಮಿ ಮೇಲಿನ ನರಕದಂತಾಗಿದೆ. 

Operation Ganga: ಕೊನೆಯ ಹಂತದಲ್ಲಿ, ಇಂದು 8 ವಿಮಾನದಲ್ಲಿ 1500 ಮಂದಿ ತವರಿಗೆ
 

ಅನ್ನ ಆಹಾರ ಔಷಧಿ ನೀರು ಯಾವುದು ಇಲ್ಲದೇ ಜನ ಕಂಗೆಟ್ಟಿದ್ದು ಪ್ರಾಣ ಉಳಿಸಿಕೊಳ್ಳಲು ಸ್ಥಳೀಯ ದೇಶಗಳಿಗೆ ಜನ ವಲಸೆ ಹೋಗುತ್ತಿದ್ದಾರೆ. ಕೋಟ್ಯಾಂತರ ಜನ ದೇಶ ತೊರೆದಿದ್ದು, ಈ ಪೈಕಿ ಪೋಲೆಂಡ್‍ಗೆ 7.87 ಮಿಲಿಯನ್, ಬೋಲ್ಡಾವಾಕ್ಕೆ(Boldawa,), 2.28 ಮಿಲಿಯನ್ ಹಂಗೇರಿಗೆ (Hungary), 1.44 ಮಿಲಿಯನ್ ರೊಮೇನಿಯಾಗೆ (Romania) 1.32 ಮಿಲಿಯನ್ ಸ್ಲೊವಾಕಿಯಾಗದೆ (Slovakia) ಒಂದು ಮಿಲಿಯನ್ ಜನ ವಲಸೆ ಹೋಗಿದ್ದಾರೆ.  4.41 ಕೋಟಿ ಜನಸಂಖ್ಯೆ ಹೊಂದಿದ್ದ ಉಕ್ರೇನ್‌ನ ಬಹುತೇಕ ಜನ ವಲಸೆ ಹೋಗುವ ನಿರೀಕ್ಷೆಯಿದೆ.

ಇನ್ನೊಂದೆಡೆ ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ 16000 ಕ್ಕೂ ಹೆಚ್ಚು ಭಾರತೀಯರನ್ನು ರಕ್ಷಿಸುವ ‘ಆಪರೇಷನ್‌ ಗಂಗಾ’ ಬೃಹತ್‌ ಏರ್‌ಲಿಫ್ಟ್‌ ಕಾರ್ಯಾಚರಣೆ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ. ಉಕ್ರೇನ್‌ನ ಅಕ್ಕಪಕ್ಕದ ದೇಶಗಳಾದ ರೊಮೇನಿಯಾ, ಹಂಗೇರಿ, ಸ್ಲೋವಾಕಿಯಾ ಹಾಗೂ ಪೋಲೆಂಡ್‌ನಿಂದ 2135 ಭಾರತೀಯರು ಭಾನುವಾರ 11 ವಿಮಾನಗಳಲ್ಲಿ ತವರಿಗೆ ಆಗಮಿಸಿದ್ದು, ಇಂದು 8 ವಿಮಾನಗಳಲ್ಲಿ ಇನ್ನೂ 1500 ಜನರು ತಾಯ್ನಾಡಿಗೆ ವಾಪಸಾಗಲಿದ್ದಾರೆ. ಅಲ್ಲಿಗೆ ಕಳೆದೊಂದು ವಾರದಲ್ಲಿ 82 ವಿಮಾನಗಳಲ್ಲಿ 16500ಕ್ಕೂ ಹೆಚ್ಚು ಜನರನ್ನು ತವರಿಗೆ ಕರೆತಂದಂತೆ ಆಗಲಿದೆ.

Latest Videos
Follow Us:
Download App:
  • android
  • ios