Russia Ukraine Crisis: 198 ಜನರ ಸಾವು, 1,115 ಮಂದಿಗೆ ಗಾಯ!

ಉಕ್ರೇನ್ ನ ಮೇಲೆ ರಷ್ಯಾದ ಆಕ್ರಮಣ

ಈವರೆಗೂ 198 ಉಕ್ರೇನ್ ಪ್ರಜೆಗಳ ಸಾವು

ಉಕ್ರೇನ್ ನ ಆರೋಗ್ಯ ಸಚಿವರಿಂದ ಅಧಿಕೃತ ಮಾಹಿತಿ

Russia Ukraine Crisis 198 civilians killed 1115 wounded in Russian invasion san

ಕೈವ್ (ಫೆ.26): ಸಾರ್ವಭೌಮ ರಾಷ್ಟ್ರ ಉಕ್ರೇನ್ ನ (Ukraine) ಮೇಲೆ ರಷ್ಯಾ (Russia) ಆಕ್ರಮಣ ಮಾಡಿದ ಪರಿಣಾಮದಿಂದ ಇಲ್ಲಿಯವರೆಗೂ 198 ಜನರು ಸಾವು ಕಂಡಿದ್ದು, ಇದರಲ್ಲಿ ಮೂವರು ಮಕ್ಕಳು ಕೂಡ ಸೇರಿದ್ದಾರೆ. 1,115 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ನ ಆರೋಗ್ಯ ಸಚಿವ ಶನಿವಾರ ಮಾಹಿತಿ ನೀಡಿದ್ದಾರೆ.

"ದುರದೃಷ್ಟವಶಾತ್, ಆಪರೇಟಿವ್ ಡೇಟಾದ ಪ್ರಕಾರ, ರಷ್ಯಾ ಆಕ್ರಮಣದ ಕಾರಣದಿಂದಾಗಿ 198 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ ಮೂವರು ಮಕ್ಕಳು ಕೂಡ ಸೇರಿದ್ದು, 1,115 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ 33 ಮಕ್ಕಳು ಸೇರಿದ್ದಾರೆ" ಎಂದು ಆರೋಗ್ಯ ಸಚಿವ ವಿಕ್ಟರ್ ಲಿಯಾಶ್ಕೊ (Health Minister Viktor Lyashko) ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಅದಲ್ಲದೆ, ಪೋಲೆಂಡ್ ನ  ಉಪ ಆಂತರಿಕ ಸಚಿವ ಪಾವೆಲ್ ಸ್ಜೆಫರ್ನೇಕರ್ ಅವರು ಈ ವಾರ ರಷ್ಯಾದ ಆಕ್ರಮಣದಿಂದ ಉಕ್ರೇನ್‌ನಿಂದ 100,000 ಜನರು ಪೋಲೆಂಡ್‌ಗೆ ಗಡಿ ದಾಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

"ಉಕ್ರೇನ್‌ನಲ್ಲಿ ಯುದ್ಧದ ಪ್ರಾರಂಭದಿಂದ ಇಂದಿನವರೆಗೆ, ಉಕ್ರೇನ್‌ನ ಸಂಪೂರ್ಣ ಗಡಿಯುದ್ದಕ್ಕೂ, 100,000 ಜನರು ಉಕ್ರೇನ್‌ನಿಂದ ಪೋಲೆಂಡ್‌ಗೆ ಗಡಿ ದಾಟಿದ್ದಾರೆ" ಎಂದು ಆಗ್ನೇಯ ಪೋಲೆಂಡ್‌ನ ಗಡಿ ಗ್ರಾಮವಾದ ಮೆಡಿಕಾದಲ್ಲಿ ಶೆಫರ್ನೇಕರ್ ಸುದ್ದಿಗಾರರಿಗೆ ತಿಳಿಸಿದರು.

ಶನಿವಾರ ಕೈವ್ ನ ಬೀದಿಗಳಲ್ಲಿ ಉಕ್ರೇನ್ ಹಾಗೂ ರಷ್ಯಾ ಸೈನಿಕರ ನಡುವೆ ಹೋರಾಟ ಮುಂದುವರಿದೆ ಎಂದೂ ಅವರು ತಿಳಿಸಿದ್ದಾರೆ. ಶನಿವಾರ ಬಹುತೇಕವಾಗಿ ರಷ್ಯಾದ ಆಕ್ರಮಣಕಾರಿ ಪಡೆಗಳನ್ನು ತಡೆಯಲು ಉಕ್ರೇನ್ ಯಶಸ್ವಿಯಾಗಿದೆ. ಶುಕ್ರವಾರ ತೆಗೆದ ಉಪಗ್ರಹ ಚಿತ್ರಗಳ ಪ್ರಕಾರ, ಉಕ್ರೇನ್ ನ ಗಡಿಯಿಂದ ಸುಮಾರು 32 ಕಿಲೋಮೀಟರ್ ದೂರದಲ್ಲಿರುವ ದಕ್ಷಿಣ ಬೆಲಾರಸ್ ನಲ್ಲಿ ರಷ್ಯಾದ ಭೂಸೇನೆಗಳ ದೊಡ್ಡ ನಿಯೋಜನೆಗಳನ್ನು ಮತ್ತೆ ಮಾಡಲಾಗಿದ್ದು, ಸುಮಾರು 150 ಸಾರಿಗೆ ಹೆಲಿಕಾಪ್ಟರ್ ಗಳು ಇದೆ ಎಂದು ಅಂದಾಜು ಮಾಡಲಾಗಿದೆ.

Mangaluru Students Stranded Ukraine: ಉಕ್ರೇನ್ ನಲ್ಲಿ ಸಿಲುಕಿರುವ ಮಂಗಳೂರು ವಿದ್ಯಾರ್ಥಿಗಳು
ರಷ್ಯಾದ ಪಡೆಗಳ ಮೇಲೆ ಸಶಸ್ತ್ರ ಪಡೆಗಳು ಸುಮಾರು 800 ಸಾವುನೋವುಗಳನ್ನು ಉಂಟುಮಾಡಿವೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ, ಅವರ 30 ಕ್ಕೂ ಹೆಚ್ಚು ಟ್ಯಾಂಕ್‌ಗಳು, ಏಳು ವಿಮಾನಗಳು ಮತ್ತು ಆರು ಹೆಲಿಕಾಪ್ಟರ್‌ಗಳನ್ನು ನಾಶಪಡಿಸಲಾಗಿದೆ. ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣವನ್ನು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದಲ್ಲಿ ಭಾರತ ಮತದಾನದಿಂದ ದೂರ ಉಳಿದಿದೆ. ರಷ್ಯಾದ ಪಡೆಗಳ ಮೇಲೆ ಸಶಸ್ತ್ರ ಪಡೆಗಳು ಸುಮಾರು 800 ಸಾವುನೋವುಗಳನ್ನು ಉಂಟುಮಾಡಿವೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ. ರಷ್ಯಾ ಸೇನಾಪಡೆಯ 30 ಕ್ಕೂ ಹೆಚ್ಚು ಟ್ಯಾಂಕ್‌ಗಳು, ಏಳು ವಿಮಾನಗಳು ಮತ್ತು ಆರು ಹೆಲಿಕಾಪ್ಟರ್‌ಗಳನ್ನು ನಾಶಪಡಿಸಲಾಗಿದೆ. ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣವನ್ನು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದಲ್ಲಿ ಭಾರತ ಮತದಾನದಿಂದ ದೂರ ಉಳಿದಿದೆ. ಇನ್ನೊಂದೆಡೆ ವಿಶ್ವಸಂಸ್ಥೆ ಕೂಡ ಈ ಕುರಿತಾಗಿ ಮಾಹಿತಿ ನೀಡಿದ್ದು, ಕಳೆದ 48 ಗಂಟೆಗಳಲ್ಲಿ 50 ಸಾವಿರಕ್ಕೂ ಅಧಿಕ ಉಕ್ರೇನಿಯನ್ನರು ದೇಶವನ್ನು ತೊರೆದಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ವಿಭಾಗದ ಮುಖ್ಯಸ್ಥ ತಿಳಿಸಿದ್ದಾರೆ. 

ರಷ್ಯಾದ ಮಿಸೈಲ್ ದಾಳಿಗೆ ಉಕ್ರೇನ್ ಜೀಪ್ ಉಡೀಸ್, ಭೀಕರ ದೃಶ್ಯ ಸೆರೆ
ಉಕ್ರೇನ್ (Ukraine) ಮೇಲೆ ರಷ್ಯಾ (Russia)  ಕೈಗೊಂಡಿರುವ ಸೇನಾ ಕಾರ್ಯಾಚರಣೆ (military operations) ಯ ವಿರುದ್ಧ ಅಂತಾರಾಷ್ಟ್ರೀಯವಾಗಿ ತೀವ್ರ ಖಂಡನೆ ವ್ಯಕ್ತವಾಗಿದೆ. ಇದರ ಮಧ್ಯೆಯೇ, ಸೋಷಿಯಲ್ ಮೀಡಿಯಾ (Social Media) ದೈತ್ಯ ಫೇಸ್‌ಬುಕ್ (Facebook) ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಏನೆದಂರೆ,  ಫೇಸ್‌ಬುಕ್ ವ್ಯಾಪಾರ ಕಾರ್ಯನಿರ್ವಾಹಕರ ಪ್ರಕಾರ, ಫೇಸ್‌ಬುಕ್ ತನ್ನ ಸೈಟ್‌ನಲ್ಲಿ  ರಷ್ಯಾದ ಎಲ್ಲ ಮಾಧ್ಯಮಗಳನ್ನು ಜಾಹೀರಾತು ಮಾಡುವುದನ್ನು ನಿಷೇಧಿಸಿದೆ. ಫೇಸ್‌ಬುಕ್‌ನ ಭದ್ರತಾ ನೀತಿಯ ಮುಖ್ಯಸ್ಥ ನಥಾನಿಯಲ್ ಗ್ಲೀಚರ್ (Nathaniel Gleicher) ಅವರ ಪ್ರಕಾರ, ರಷ್ಯಾದ ರಾಷ್ಟ್ರ ಮಾಧ್ಯಮ (State Media)ವು ಅದರ ವೇದಿಕೆಯಲ್ಲಿ ಜಾಹೀರಾತುಗಳನ್ನು ಅಥವಾ ವಿಷಯವನ್ನು ಹಣಗಳಿಸುವುದನ್ನು ಈಗ ನಿಷೇಧಿಸಲಾಗಿದೆ ಮತ್ತು ಹೊಸ ಮಿತಿಗಳು ಜಾಗತಿಕವಾಗಿ ಅನ್ವಯಿಸುತ್ತವೆ. ಫೇಸ್‌ಬುಕ್ ರಷ್ಯಾದ ಸ್ಟೇಟ್ ಮೀಡಿಯಾವನ್ನು ಗುರುತಿಸುವುದನ್ನು ಮುಂದುವರಿಸುತ್ತದೆ ಎಂದು ಗ್ಲೀಚರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios