Omicron Panic: ಹೊಸ ಕೊರೋನಾ ತಳಿಯ ವಿರುದ್ಧವೂ ಕೆಲಸ ಮಾಡುತ್ತೆ ಸ್ಫುಟ್ನಿಕ್ -ರಷ್ಯಾ
ದಿನಕ್ಕೊಂದು ವೇಷ ಧರಿಸಿ ಕೊರೊನಾ ಜಗತ್ತನ್ನು ಕಾಡುತ್ತಿದೆ. ಈಗವಿಶ್ವದೆಲ್ಲೆಡೆ ರೂಪಾಂತರಿ ಕೊರೋನಾ ಒಮಿಕ್ರಾನ್ ಹಬ್ಬುವ ಭೀತಿ ಉಂಟಾಗಿದ್ದು, ಇದು ಯಾವ ಲಸಿಕೆಗೂ ಬಗ್ಗುವುದಿಲ್ಲ ಎಂಬ ಹೇಳಿಕೆಗಳ ಹಿನ್ನೆಲೆಯಲ್ಲಿ ಜನ ಭೀತಿಗೊಳಗಾಗಿದ್ದಾರೆ. ಈ ಮಧ್ಯೆ ರಷ್ಯಾ ನಿರ್ಮಿತ ಸ್ಪುಟ್ನಿಕ್ ಒಮಿಕ್ರಾನ್ ವಿರುದ್ಧ ಕೆಲಸ ಮಾಡಲಿದೆ ಎಂದು ರಷ್ಯಾ ಹೇಳಿದೆ.
ಮಾಸ್ಕೋ(ನ.30): ಸ್ಪುಟ್ನಿಕ್ ಲಸಿಕೆ ರೂಪಾಂತರಿ ಕೊರೋನಾ ಒಮಿಕ್ರಾನ್ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಹಾಗೂ ಈ ಲಸಿಕೆ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ರಷ್ಯಾ ಹೇಳಿದೆ. ಇದು ರೂಪಾಂತರಿ ಒಮಿಕ್ರಾನ್ ವೈರಸ್‌ನಿಂದ ದೇಹವನ್ನು ರಕ್ಷಿಸಲು ದೇಹಕ್ಕೆ ಶಕ್ತಿ ತುಂಬುತ್ತದೆ. ಈ ಹೊಸ ವೈರಾಣುವಿಗೆ ಮಾರುಕಟ್ಟೆಯೂ ದುರ್ಬಲವಾದ ಪ್ರತಿಕ್ರಿಯೆ ನೀಡಿದೆ ಇದೊಂದು ಭಾವನಾತ್ಮಕ ಪ್ರತಿಕ್ರಿಯೆಯಾಗಿದ್ದು ವೈಜ್ಞಾನಿಕ ದತ್ತಾಂಶವನ್ನು ಇದು ಹೊಂದಿಲ್ಲ ಎಂದು ರಷ್ಯಾ ಸರ್ಕಾರ ಹೇಳಿದೆ.
ಕಳೆದ ಶುಕ್ರವಾರ ಬಯಲಾದ ಹಲವು ಭಾರಿ ರೂಪಾಂತರಗೊಂಡಿರುವ ಒಮಿಕ್ರಾನ್ ರೂಪಾಂತರಿಯೂ ಹೂಡಿಕೆದಾರನ್ನು ರಕ್ಷಣೆಗಾಗಿ ಅಲೆದಾಡುವಂತೆ ಮಾಡಿತ್ತು. ಅಲ್ಲದೇ ವಿಶ್ವ ಆರೋಗ್ಯ ಸಂಸ್ಥೆ(WHO) ಇದು ಜಗತ್ತಿನಾದ್ಯಂತ ಹಬ್ಬಲಿದೆ, ಇದು ತೀವ್ರವಾಗಿ ಸೋಂಕನ್ನು ಹಬ್ಬಿಸಲಿದೆ ಎಂದು ಎಚ್ಚರಿಕೆ ನೀಡಿತ್ತು. ಕಳೆದ ವರ್ಷ ರಷ್ಯಾ ಎರಡು ಡೋಸ್‌ಗಳ ಸ್ಪುಟ್ನಿಕ್ ವಿ ಲಸಿಕೆಯನ್ನು ಅತ್ಯಂತ ವೇಗವಾಗಿ ಅಭಿವೃದ್ಧಿಪಡಿಸಿತ್ತು. ಇದರೊಂದಿಗೆ ಒಂದು ಶಾಟ್‌ನ ಸ್ಪುಟ್ನಿಕ್ ಲೈಟ್ ಲಸಿಕೆಯನ್ನು ಕೂಡ ಅಭಿವೃದ್ಧಿಪಡಿಸಿದೆ. ಇವೆರಡು ಪ್ರಯೋಗಗಳಲ್ಲಿ ಅತೀ ಹೆಚ್ಚು ಪರಿಣಾಮಕಾರಿ ಎಂದು ತಿಳಿದು ಬಂದಿದೆ. ಆದರೆ ಈ ಲಸಿಕೆಗಳಿನ್ನೂ ವಿಶ್ವ ಆರೋಗ್ಯ ಸಂಸ್ಥೆಯ ಒಪ್ಪಿಗೆಗಾಗಿ ಕಾಯುತ್ತಿವೆ.
India Russia Summit:ಶೃಂಗಸಭೆಗಾಗಿ ರಷ್ಯಾ ಅಧ್ಯಕ್ಷ ಪುಟಿನ್ ಭಾರತ ಭೇಟಿ, ಪ್ರಧಾನಿ ಮೋದಿ ಜೊತೆ ಮಹತ್ವದ ಸಭೆ!
ಇದರೊಂದಿಗೆ, ಎರಡನೇ ಡೋಸ್‌ನ ಉತ್ಪಾದನೆಗೆ ನಮಗೆ ತುಂಬಾ ಕಷ್ಟವಾಗಿದೆ. ಯಾಕೆಂದರೆ ಮನೆಯಲ್ಲಿ ಈ ಲಸಿಕೆಯನ್ನು ಉತ್ಪಾದಿಸುವ ಪ್ರಯತ್ನಕ್ಕೆ ಸಾಕಷ್ಟು ಅಡ್ಡಿಯುಂಟಾಗಿತ್ತು ಎಂದು ಲಸಿಕೆ ಉತ್ಪಾದಕ ಸಂಸ್ಥೆ ಸುದ್ದಿ ಮೂಲಗಳಿಗೆ ಹೇಳಿದೆ. ಆದರೆ ರಷ್ಯಾದ ಗಮಲೆಯಾ ಇನ್ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ ಲಸಿಕೆಯೂ ಒಮಿಕ್ರಾನ್ ರೂಪಾಂತರಿ ವಿರುದ್ಧ ಕೆಲಸ ಮಾಡಲಿದೆ ಹಾಗೂ ನೂರಾರು ಮಿಲಿಯನ್ ಬೂಸ್ಟರ್ ಶಾಟ್‌ಗಳನ್ನು ಉತ್ಪಾದಿಸಲು ಸಿದ್ಧವಾಗಿದೆ ಎಂದು ರಷ್ಯಾ ಸರ್ಕಾರ ತಿಳಿಸಿದೆ.
ಲಸಿಕೆ ಕಂಡು ಹಿಡಿದ ಗಮಲೆಯಾ ಸಂಸ್ಥೆ(Gamaleya Institute)ಯ ಪ್ರಕಾರ, ಸ್ಪುಟ್ನಿಕ್ ವಿ ಒಮಿಕ್ರಾನ್ ವೈರಾಣುವನ್ನು ತಟಸ್ಥಗೊಳಿಸುವುದು. ಏಕೆಂದರೆ ಈ ಲಸಿಕೆ ರೂಪಾಂತರಿ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ರಷ್ಯಾದ ನೇರ ಹೂಡಿಕೆ ನಿಧಿ( Russian Direct Investment Fund) ಯ ಮುಖ್ಯಸ್ಥ ಕಿರಿಲ್ಲ್ ಡ್ಮಿಟ್ರಿವ್ ಅವರು ಸ್ಪುಟ್ನಿಕ್ ವಿ ಗೆ ಸಂಬಂಧಿಸಿದ ಟ್ವಿಟ್ಟರ್ ಪೇಜ್‌ನಲ್ಲಿ ಹೇಳಿದ್ದಾರೆ. ಈ ಸಂಸ್ಥೆ ಸ್ಪುಟ್ನಿಕ್ ಲಸಿಕೆಗೆ ವಿದೇಶಗಳಲ್ಲಿ ಮಾರುಕಟ್ಟೆಯೊದಗಿಸುತ್ತಿದೆ.
ಕೋವಿಶೀಲ್ಡ್, ಸ್ಪುಟ್ನಿಕ್ ಲಸಿಕೆ ಬೆರೆಸಿದರೆ ಸಮಸ್ಯೆಯಿಲ್ಲ
2022ರ ಫೆಬ್ರವರಿ 20ರ ಒಳಗಾಗಿ ನಾವು ನೂರಾರು ಮಿಲಿಯನ್ ಸ್ಪುಟ್ನಿಕ್ ಬೂಸ್ಟರ್‌ಗಳನ್ನು ನೀಡಲಿದ್ದೇವೆ ಎಂದು ಡ್ಮಿಟ್ರಿವ್ ಹೇಳಿದರು. ಇದಕ್ಕೂ ಮೊದಲು ರಷ್ಯಾ, ಸರ್ಕಾರ ಹೊಸ ರೂಪಾಂತರಿಯ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರುವುದಕ್ಕೂ ಮೊದಲು ಇನ್ನು ಹೆಚ್ಚಿನ ಮಾಹಿತಿ ಅದರ ಬಗ್ಗೆ ಬೇಕಾಗಿದೆ ಎಂದು ಹೇಳಿತ್ತು. ರೂಪಾಂತರಿ ಕೊರೊನಾ ಬಗ್ಗೆ ಮಾರುಕಟ್ಟೆಯ ಪ್ರತಿಕ್ರಿಯೆ ಭಾವನಾತ್ಮಕವಾಗಿದೆ. ವೈಜ್ಞಾನಿಕ ಸಾಕ್ಷ್ಯಗಳನ್ನು ಇದು ಹೊಂದಿಲ್ಲ ಒಟ್ಟಿನಲ್ಲಿ ಕೊರೊನಾ ರೂಪಾಂತರಿ ಎಷ್ಟು ಅಪಾಯಕಾರಿ ಎಂಬುದನ್ನು ತಿಳಿಯಲು ಇಡೀ ಜಗತ್ತೇ ಪ್ರಯತ್ನಿಸುತ್ತಿದೆ ಎಂದು ರಷ್ಯಾ ಸರ್ಕಾರದ ವಕ್ತಾರರೊಬ್ಬರು ಹೇಳಿದ್ದಾರೆ.
ಇತ್ತ ರಾಜ್ಯದಲ್ಲಿ ಕೊರೋನಾ(Coronavirus) ಹೊಸ ತಳಿಯ ಭಯದಿಂದಾಗಿ ಕೊರೋನಾ ಲಸಿಕೆ(Vaccine) ನೀಡಿಕೆ ಅಭಿಯಾನ ಮತ್ತೆ ಚುರುಕು ಕಂಡಿದೆ. ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯವಿದ್ದರೂ ಜನರು ಲಸಿಕೆ ಪಡೆಯಲು ಮುಂದೆ ಬಾರದ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಅಭಿಯಾನದ ವೇಗ ಕುಸಿದಿತ್ತು. ಈವರೆಗೆ ಮೊದಲ ಲಸಿಕೆ ಪಡೆಯದವರು ಲಕ್ಷಾಂತರ ಜನರಿದ್ದಾರೆ. ಮೊದಲ ಲಸಿಕೆ ಪಡೆದು ನಿಗದಿತ ಅವಧಿಯಲ್ಲಿ ಎರಡನೇ ಲಸಿಕೆ ಪಡೆಯದವರ ಸಂಖ್ಯೆ ಕೂಡಾ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಕಂಡುಬಂದಿತ್ತು. ಆದರೆ ದಕ್ಷಿಣ ಆಫ್ರಿಕಾದಲ್ಲಿ(South africa) ಕಂಡುಬಂದ ಕೊರೋನಾ ಒಮಿಕ್ರಾನ್(Omicron) ತಳಿ, ಕ್ಲಸ್ಟರ್ ಮಾದರಿಯಲ್ಲಿ ಸೋಂಕು ಪ್ರಕರಣ ಹೆಚ್ಚು ಕಂಡುಬರುತ್ತಿರುವುದರಿಂದ ಆತಂಕಗೊಂಡ ಜನರು ಈಗ ಲಸಿಕಾ ಕೇಂದ್ರಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದ್ದಾರೆ.
ನವೆಂಬರ್ 20ರಿಂದ ನ.27ರವರೆಗೆ 27.64 ಲಕ್ಷ ಮಂದಿ ಕೋವಿಡ್(Covid19) ಲಸಿಕೆ ಪಡೆದಿದ್ದು, ಪ್ರತಿದಿನ ಸರಾಸರಿ 4 ಲಕ್ಷ ಲಸಿಕೆ ನೀಡಲಾಗಿದೆ. ಹಿಂದಿನ ವಾರಗಳಿಗೆ ಹೋಲಿಸಿದಾಗ ಹೆಚ್ಚಿನ ಪ್ರಮಾಣದಲ್ಲಿ ಜನರು ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ನ.13ರಿಂದ ನ.20ರವರೆಗೆ 20.90 ಲಕ್ಷ ಮಂದಿ, ನ.6ರಿಂದ 13ರ ಮಧ್ಯೆ ಕೇವಲ 17.54 ಲಕ್ಷ ಮಂದಿ ಲಸಿಕೆ ಪಡೆದಿದ್ದರು.
"