Asianet Suvarna News Asianet Suvarna News

ಕೋವಿಶೀಲ್ಡ್‌, ಸ್ಪುಟ್ನಿಕ್‌ ಲಸಿಕೆ ಬೆರೆಸಿದರೆ ಸಮಸ್ಯೆಯಿಲ್ಲ

  • ಭಾರತದ ಕೋವಿಶೀಲ್ಡ್‌ ಹಾಗೂ ರಷ್ಯಾದ ಸ್ಪುಟ್ನಿಕ್‌ ಲಸಿಕೆಯನ್ನು ಬೆರೆಸಬಹುದು
  • ಲಸಿಕೆಯನ್ನು ಬೆರೆಸಿದರೆ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ
  • ಈ ವಿಚಾರ ಭಾರತದಲ್ಲಿ ಲಸಿಕೆ ವಿತರಣೆಗೆ ಹೊಸ ಆಶಾಕಿರಣ ಮೂಡಿಸಿದೆ
Is it safe to mix covishield And sputnik Vaccine  snr
Author
Bengaluru, First Published Jul 31, 2021, 8:56 AM IST

ನವದೆಹಲಿ (ಜು.31):  ಬ್ರಿಟನ್‌ನ ಆಸ್ಟ್ರಾಜೆನೆಕಾ (ಭಾರತದಲ್ಲಿ ಕೋವಿಶೀಲ್ಡ್‌) ಹಾಗೂ ರಷ್ಯಾದ ಸ್ಪುಟ್ನಿಕ್‌ ಲಸಿಕೆಯನ್ನು ಬೆರೆಸಿದರೆ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ ಎಂದು ಅಧ್ಯಯನವೊಂದು ಹೇಳಿದೆ. ಇದು ಭಾರತದಲ್ಲಿ ಲಸಿಕೆ ವಿತರಣೆಗೆ ಹೊಸ ಆಶಾಕಿರಣ ಮೂಡಿಸಿದೆ.

ಮೊದಲಿಗೆ ಸ್ಪುಟ್ನಿಕ್‌ ಲಸಿಕೆಯ 1 ಡೋಸ್‌ ಪಡೆದವರಿಗೆ 2ನೇ ಡೋಸ್‌ ಆಸ್ಟ್ರಾಜೆನೆಕಾ ಲಸಿಕೆ ನೀಡುವ ಜಗತ್ತಿನ ಮೊದಲ ಅಧ್ಯಯನ ಫೆಬ್ರವರಿಯಲ್ಲಿ ಅಜರ್‌ಬೈಜನ್‌ ದೇಶದಲ್ಲಿ 50 ಜನರ ಮೇಲೆ ನಡೆದಿದೆ. ಈ ಪ್ರಯೋಗದಲ್ಲಿ ಯಾರೊಬ್ಬರಿಗೂ ಯಾವುದೇ ಸಮಸ್ಯೆಯಾಗಿಲ್ಲ ಎಂದು ಸ್ಪುಟ್ನಿಕ್‌ ಲಸಿಕೆಯನ್ನು ಮಾರಾಟ ಮಾಡುತ್ತಿರುವ ಆರ್‌ಡಿಐಎಫ್‌ ಕಂಪನಿ ತಿಳಿಸಿದೆ.

ರಾಜ್ಯದಲ್ಲಿ ಇನ್ನೆರಡು ದಿನದಲ್ಲಿ ಲಸಿಕೆ ಪಡೆದವರ ಸಂಖ್ಯೆ 3 ಕೋಟಿಗೇರಿಕೆ: ಸುಧಾಕರ್‌

ಸ್ಪುಟ್ನಿಕ್‌ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸುವ ಗುತ್ತಿಗೆಯನ್ನು ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಪಡೆದುಕೊಂಡಿದೆ. ಸೀರಂನಿಂದ ಸೆಪ್ಟೆಂಬರ್‌ನಲ್ಲಿ ಮೊದಲ ಬ್ಯಾಚ್‌ನ ಸ್ಪುಟ್ನಿಕ್‌ ಲಸಿಕೆಗಳು ಹೊರಬರಲಿವೆ. ಭಾರತದಲ್ಲಿ ಲಸಿಕೆಗಳ ಕೊರತೆ ಉಂಟಾಗಿರುವುದರಿಂದ, ಮೊದಲ ಡೋಸ್‌ ಕೋವಿಶೀಲ್ಡ್‌ ಪಡೆದವರಿಗೆ 2ನೇ ಡೋಸ್‌ ಸ್ಪುಟ್ನಿಕ್‌ ನೀಡಲು ಸರ್ಕಾರ ಅನುಮತಿ ನೀಡಿದರೆ ಹೆಚ್ಚೆಚ್ಚು ಜನರಿಗೆ ಲಸಿಕೆ ನೀಡಲು ಅನುಕೂಲವಾಗಲಿದೆ.

Follow Us:
Download App:
  • android
  • ios