- ಉಕ್ರೇನನ್ನು ‘ನಾಜಿಮುಕ್ತ’ಗೊಳಿಸುವುದಷ್ಟೇ ನಮ್ಮ ಗುರಿ- ರಷ್ಯಾದ ಪುಟಿನ್ ಸರ್ಕಾರದಿಂದ ಮಹತ್ವದ ಹೇಳಿಕೆ- ರಷ್ಯಾ-ಉಕ್ರೇನ್ ನಡುವಿನ ಯುದ್ಧ ಅಂತ್ಯ ಸನ್ನಿಹಿತ?
ಮಾಸ್ಕೋ (ಮಾ.10): ‘ನ್ಯಾಟೋ ಪಡೆಗೆ ನಾವು ಸೇರುವುದಿಲ್ಲ’ ಎಂದು ಉಕ್ರೇನ್ (Ukraine) ಹೇಳಿಕೆ ನೀಡಿದ ಬೆನ್ನಲ್ಲೇ ರಷ್ಯಾ ಕೂಡ ಮೆತ್ತಗಾಗುವ ಸುಳಿವು ನೀಡಿದ್ದು, ನಾವು ಉಕ್ರೇನ್ ಸರ್ಕಾರವನ್ನು ಕೆಡವುವುದಕ್ಕಾಗಲೀ (overthrow ) ಅಥವಾ ಆ ದೇಶವನ್ನು ವಶಪಡಿಸಿಕೊಳ್ಳುವುದಕ್ಕಾಗಲೀ ಯುದ್ಧ (war) ಮಾಡುತ್ತಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದೆ. ಇದರೊಂದಿಗೆ 14 ದಿನಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದ ಅಂತ್ಯ (Russia Ukraine war) ಸಮೀಪಿಸುತ್ತಿದೆಯೇ ಎಂಬ ಕುತೂಹಲ ಮೂಡಿದೆ.
‘ಉಕ್ರೇನನ್ನು ವಶಪಡಿಸಿಕೊಳ್ಳುವ ಅಥವಾ ಅಲ್ಲಿನ ಸರ್ಕಾರವನ್ನು ಬೀಳಿಸುವ ಉದ್ದೇಶ ರಷ್ಯಾಕ್ಕೆ ಇಲ್ಲ. ನಮ್ಮ ಸೇನೆಯ ಉದ್ದೇಶ ಉಕ್ರೇನನ್ನು ವಶಪಡಿಸಿಕೊಳ್ಳುವುದಲ್ಲ. ಆ ದೇಶವನ್ನು ನಾಶಪಡಿಸುವ ಇರಾದೆಯೂ ಮಾಸ್ಕೋಗೆ ಇಲ್ಲ. ನಮ್ಮ ಸಮರ ಅಲ್ಲಿನ ನಾಗರಿಕರನ್ನು ಗುರಿಯಾಗಿಸಿಕೊಂಡಿಲ್ಲ. ಉಕ್ರೇನನ್ನು ‘ನಾಜಿಮುಕ್ತಗೊಳಿಸಲು’ ಅಧ್ಯಕ್ಷ ಪುಟಿನ್ ತಮ್ಮ ಸೇನೆ ಕಳಿಸಿದ್ದಾರೆ’ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಖರೋವಾ (Maria Zakharova) ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ‘ಉಕ್ರೇನ್ ದೇಶವಾಗಿ ಉಳಿಯುವುದು ಅನುಮಾನ’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುಡುಗಿದ ಬೆನ್ನಲ್ಲೇ ಅಲ್ಲಿನ ವಿದೇಶಾಂಗ ಸಚಿವಾಲಯದಿಂದ ಈ ಹೇಳಿಕೆ ಹೊರಬಿದ್ದಿರುವುದು ಅಚ್ಚರಿ ಮೂಡಿಸಿದೆ.
4ನೇ ಸುತ್ತಿನ ಮಾತುಕತೆಗೆ ರಷ್ಯಾ ಸಿದ್ಧ: ‘ಈಗಾಗಲೇ ಉಭಯ ದೇಶಗಳ ಮಧ್ಯೆ ಮೂರು ಸುತ್ತಿನ ಮಾತುಕತೆ ಮುಗಿದಿದೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲು ಮಾನವೀಯ ನೆರವಿನ ಉದ್ದೇಶದ ಇನ್ನೊಂದು ಸುತ್ತಿನ ಮಾತುಕತೆ ನಡೆಯಲಿದೆ. ಉಭಯ ದೇಶಗಳ ಸಂಧಾನದ ಯತ್ನಕ್ಕೆ ಫಲ ದೊರೆಯುತ್ತಿದೆ. ಆದರೆ, ಉಕ್ರೇನ್‌ನಿಂದ ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲು ಉಕ್ರೇನ್ ಆಡಳಿತವೇ ಅಡ್ಡಿಯಾಗಿದೆ. ಸುರಕ್ಷಿತ ಸ್ಥಳಗಳಿಗೆ ತೆರಳಲು ಮಾನವೀಯ ಕಾರಿಡಾರ್‌ಗಳನ್ನು ನಿರ್ಮಿಸಿರುವ ಕುರಿತು ಬೇಕಂತಲೇ ಜನರಿಗೆ ಉಕ್ರೇನ್ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ. ರಷ್ಯಾಕ್ಕೆ ತೆರಳಬೇಕು ಎಂದು ಬಯಸುವ ಉಕ್ರೇನಿಗರನ್ನು ಪಶ್ಚಿಮ ದಿಕ್ಕಿಗೆ ಬಲವಂತವಾಗಿ ಕಳಿಸಲಾಗುತ್ತಿದೆ. ಸುಮಾರು 20 ಲಕ್ಷ ಜನರು ರಷ್ಯಾಕ್ಕೆ ಬರಲು ಬಯಸುತ್ತಿದ್ದಾರೆ’ ಎಂದೂ ಜಖರೋವಾ ಹೇಳಿದ್ದಾರೆ.
ಉಕ್ರೇನ್‌ನಿಂದ ಸ್ಥಳಾಂತರ: ಭಾರತ ಸರ್ಕಾರಕ್ಕೆ ಪಾಕ್ ವಿದ್ಯಾರ್ಥಿನಿ ಧನ್ಯವಾದ
ಕೀವ್: ರಷ್ಯಾ-ಉಕ್ರೇನ್ ಸಮರದ ತೀವ್ರತೆ ಹೆಚ್ಚುತ್ತಲೇ ಇದೆ. ಈ ಮಧ್ಯೆ ಭಾರತದ ರಾಯಭಾರ (Indian Embasy) ಕಚೇರಿ ಸಹಾಯದಿಂದ ಉಕ್ರೇನ್‌ನಿಂದ ಸುರಕ್ಷಿತವಾಗಿ ಸ್ಥಳಾಂತರಗೊಂಡ ಪಾಕಿಸ್ತಾನಿ ವಿದ್ಯಾರ್ಥಿನಿಯೋರ್ವಳು (Pakistan Studen), ಭಾರತ ದೂತವಾಸ ಕಚೇರಿಗೆ ಹಾಗೂ ಪ್ರಧಾನಿ ಮೋದಿಗೆ (PM Modi) ಧನ್ಯವಾದ ಅರ್ಪಿಸಿದ್ದಾಳೆ.
Russia Ukraine War ಇದು ರಷ್ಯಾದ ಯುದ್ಧವಲ್ಲ, ಪುಟಿನ್ ಅವರ ಯುದ್ಧ, ಪೋಲೆಂಡ್ ಎನ್ಆರ್ ಐ ಮಾತು
ಪಾಕಿಸ್ತಾನದ ಅಸ್ಮಾ ಶಫೀಕ್ ಎಂಬ ವಿದ್ಯಾರ್ಥಿಯನ್ನು ಪಶ್ಚಿಮ ಉಕ್ರೇನ್‌ನಿಂದ ಅಧಿಕಾರಿಗಳು ಸುರಕ್ಷಿತವಾಗಿ ಕರೆತಂದಿದ್ದರು ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಸಂಕಷ್ಟದ ಸಮಯದಲ್ಲಿ ನೆರವಿಗೆ ಬಂದ ಕೀವ್‌ನಲ್ಲಿನ ಭಾರತ ರಾಯಭಾರ ಕಚೇರಿ ಹಾಗೂ ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿರುವ ಅಸ್ಮಾ, ಭಾರತೀಯ ರಾಯಭಾರ ಕಚೇರಿಯಿಂದಾಗಿ ಉಕ್ರೇನ್‌ನಿಂದ ಬಂದ ನಾವು ಸುರಕ್ಷಿತವಾಗಿ ಮನೆ ತಲುಪುತ್ತೇವೆಂಬ ಭರವಸೆ ಮೂಡಿದೆ ಎಂದಿದ್ದಾಳೆ.
ಹೊರಜಗತ್ತಿನ ಸಂಪರ್ಕ ಕಡಿದುಕೊಂಡ ಚೆರ್ನೋಬಿಲ್ ಅಣುಸ್ಥಾವರ
ಯುದ್ಧಪೀಡಿತ ಪ್ರದೇಶದಿಂದ ಕೇವಲ ತನ್ನ ಪ್ರಜೆಗಳನ್ನಷ್ಟೇ ಅಲ್ಲ, ತನ್ನ ನೆರೆ ರಾಷ್ಟ್ರಗಳ ಪ್ರಜೆಗಳ ರಕ್ಷಣೆಗೂ ಭಾರತ ಮುಂದಾಗಿದ್ದು, ಈ ಮೊದಲು ಉಕ್ರೇನ್‌ನಿಂದ ಬಾಂಗ್ಲಾದೇಶಿ, ನೇಪಾಳ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತಂದಿತ್ತು.
