- ಅಲ್ಲೇನಾಗುತ್ತಿದೆ ತಿಳಿಯುತ್ತಿಲ್ಲ: ಅಂ.ರಾ. ಅಣುಶಕ್ತಿ ಸಂಸ್ಥೆ ಆತಂಕ-ದುರಸ್ಥಿ ಮಾಡುತ್ತೇವೆ, ಕದನ ವಿರಾಮ ನೀಡಿ ಉಕ್ರೇನ್ ಬೇಡಿಕೆ- ಅಣುಸ್ಥಾವರಕ್ಕೆ ವಿದ್ಯುತ್ ಸಂಪರ್ಕ ಕಡಿತ
ವಿಯೆನ್ನಾ (ಮಾ.10): ಮೂವತ್ತೈದು ವರ್ಷಗಳ ಹಿಂದೆ ಜಗತ್ತಿನ ಅತಿದೊಡ್ಡ ಪರಮಾಣು (Worlds Biggest nuclear disaster) ದುರಂತ ಸಂಭವಿಸಿದ ಉಕ್ರೇನ್‌ನ (Ukraine) ಚೆರ್ನೋಬಿಲ್ ಅಣುಸ್ಥಾವರವನ್ನು (Chernobyl nuclear plant,) ಇತ್ತೀಚೆಗೆ ರಷ್ಯಾ ವಶಪಡಿಸಿಕೊಂಡ ನಂತರ ಈಗ ಅಣುಸ್ಥಾವರವು ಹೊರಜಗತ್ತಿನ ಸಂಪರ್ಕವನ್ನೇ ಸಂಪೂರ್ಣ ಕಡಿತಗೊಳಿಸಿಕೊಂಡಿದ್ದು (stopped transmitting data ), ತೀವ್ರ ಆತಂಕಕ್ಕೆ ಕಾರಣವಾಗಿದೆ.
ಜಗತ್ತಿನಲ್ಲಿರುವ ಎಲ್ಲಾ ಅಣುಶಕ್ತಿ ಉತ್ಪಾದನಾ ಕೇಂದ್ರಗಳ ಮೇಲೆ ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (ಐಎಇಎ) (IAEA) ನಿಗಾ ಇರಿಸುತ್ತದೆ. 1986ರ ದುರಂತದ ನಂತರ ಚೆರ್ನೋಬಿಲ್ ಸ್ಥಾವರ ನಿಷ್ಕಿ್ರಯಗೊಂಡಿದ್ದರೂ, ಅದರಲ್ಲಿನ ರಿಯಾಕ್ಟರ್‌ಗಳು (reactor) ಹಾಗೂ ಪರಮಾಣು ತ್ಯಾಜ್ಯವನ್ನು (nuclear waste) ನೋಡಿಕೊಳ್ಳಲು ನೌಕರರು ಕೆಲಸ ಮಾಡುತ್ತಿದ್ದಾರೆ. ಅವರಿಂದ ಐಎಇಎಗೆ ನಿರಂತರವಾಗಿ ಮಾಹಿತಿ ರವಾನೆಯಾಗುತ್ತಿರುತ್ತದೆ. ಆದರೆ, ಈ ಸ್ಥಾವರವನ್ನು ರಷ್ಯಾ (Russia Taken Over) ವಶಪಡಿಸಿಕೊಂಡ ನಂತರ 13 ದಿನಗಳಿಂದ ಐಎಇಎಗೆ ಯಾವುದೇ ಮಾಹಿತಿ ರವಾನೆಯಾಗಿಲ್ಲ. ಹೀಗಾಗಿ ಸ್ಥಾವರದ ಸುರಕ್ಷತೆ ಬಗ್ಗೆ ಹಾಗೂ ಅಲ್ಲಿ ಸತತ 13 ದಿನಗಳಿಂದ ಒಂದೇ ಪಾಳಿಯಲ್ಲಿ ಕೆಲಸ ಮಾಡುತ್ತಿರುವ 210 ಸಿಬ್ಬಂದಿಯ ಸುರಕ್ಷತೆ ಬಗ್ಗೆ ಐಎಇಎ ತೀವ್ರ ಆತಂಕ ವ್ಯಕ್ತಪಡಿಸಿದೆ. ಅಲ್ಲದೆ ಚೆರ್ನೋಬಿಲ್ ಸ್ಥಾವರದ ಜೊತೆ ಸಂಪರ್ಕ ಸಾಧಿಸಲು ಸತತ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದೆ.
ಚೆರ್ನೋಬಿಲ್ ಸ್ಥಾವರದಲ್ಲಿ 210 ಸಿಬ್ಬಂದಿ 13 ದಿನಗಳಿಂದ ಮನೆಗೂ ಹೋಗದೆ ಕೆಲಸ ಮಾಡುತ್ತಿದ್ದಾರೆ. ಅವರ ಜಾಗಕ್ಕೆ ಬರಬೇಕಾದ ಇನ್ನೊಂದು ಪಾಳಿಯ ನೌಕರರು ಸ್ಥಾವರದ ಒಳಗೆ ಹೋಗಲು ಎರಡು ವಾರದಿಂದ ರಷ್ಯಾ ಅವಕಾಶ ನೀಡಿಲ್ಲ. ಹೀಗಾಗಿ ಒಳಗಿರುವ ನೌಕರರು ಅತಿಯಾದ ವಿಕಿರಣಶೀಲತೆ, ಆಹಾರ, ಆರೋಗ್ಯ, ಒತ್ತಡ ಇತ್ಯಾದಿ ಸಮಸ್ಯೆಗಳಿಂದ ಬಳಲುವ ಬಗ್ಗೆ ಐಎಇಎ ಆತಂಕ ವ್ಯಕ್ತಪಡಿಸಿದೆ.
ವಿದ್ಯುತ್ ಸಂಪರ್ಕ ಕಡಿತ: ಈ ನಡುವೆ ಸಂಜೆ ಚೆರ್ನೋಬಿಲ್ ಸ್ಥಾವರಕ್ಕೆ ವಿದ್ಯುತ್ ಸಂಪರ್ಕ (Power Cut) ಕಡಿತವಾಗಿದೆ. ಜನರೇಟರ್ ಮೂಲಕ ಕಾರಾರಯಚರಣೆ ನಡೆದಿದೆ ಎಂದು ಸರ್ಕಾರ ಹೇಳಿದೆ. ವಿದ್ಯುತ್ ಸ್ಥಗಿತಕ್ಕೆ ಕಾರಣ ತಿಳಿದುಬಂದಿಲ್ಲ.
ಉಕ್ರೇನ್ ತೊರೆಯುವಾಗ ಬಾಲಕ ಅಳುತ್ತಿರುವ ದೃಶ್ಯ ವೈರಲ್
ಕೀವ್ : ರಷ್ಯಾ ಮತ್ತು ಉಕ್ರೇನ್ ನಡುವೆ 14ನೇ ದಿನವೂ ಯುದ್ದ ಮುಂದುವರೆದ್ದೂ ಯುದ್ದದ ನಡುವೆ ಹಲವು ಹೃದಯ ವಿದ್ರಾವಕ ಘಟನೆಗಳು ನಡೆಯುತ್ತಿವೆ. ಮೆಡಿಸ್ಕಾ ( Medisca ) ಗಡಿ ಮೂಲಕ ಬಾಲಕನೊಬ್ಬ( Boy ) ತನ್ನ ಲೆಗೇಜ್‌ಗಳ ( Luggage ) ಮೂಲಕ ಉಕ್ರೇನ್‌ನಿಂದ ಪೊಲೇಂಡ್‌ಗೆ ( Poland) ಅಳುತ್ತಾ ಸಾಗುತ್ತಿರುವ ವಿಡಿಯೋ ವೈರಲ್ ( Viral Video ) ಆಗಿದ್ದು, ಈ ವಿಡಿಯೋಗೆ ಹಲವು ನೆಟಿಜಿನ್‌ಗಳು (Netzens ) ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಉಕ್ರೇನ್ ಸರ್ಕಾರ ಕೆಡವಲ್ಲ, ದೇಶ ವಶಕ್ಕೆ ಪಡೆಯಲ್ಲ ಎಂದ Russia
‘ಈ ಬಾಲಕನನ್ನು ನೋಡಿದರೆ ಎಕಾಂಗಿಯಾಗಿದ್ದಾನೆ ಎಂದೆನಿಸುತ್ತಿದೆ. ಸುತ್ತಲಿನ ಜನರು ಅವನನ್ನು ನಿರ್ಲಕ್ಷಿಸಿರುವುದರಿಂದಲೇ ಆತ ಅಳುತ್ತಿದ್ದಾನೆ. ಅವನ್ನು ಹುಡುಕುವುದು ಮತ್ತು ಮನೆಗೆ ಕರೆತರುವುದು ಹೇಗೆ?‘ ಎಂಬಿತ್ಯಾದಿ ಟ್ವಿಟ್‌ಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿದೆ. ಇದಕ್ಕೂ ಮುನ್ನ 11 ವರ್ಷದ ಬಾಲಕನೊಬ್ಬ ಏಕಾಂಗಿಯಾಗಿ 14 ಸಾವಿರ ಕಿ.ಮೀ ನಡೆದು ಸ್ಲೊವೊಕಿಯಾ ( slovakia ) ದೇಶವನ್ನು ತಲುಪಿದ್ದ.
Ukraine-Russia War: ಭಾರತಕ್ಕೆ ಬರಲು ಧ್ವಜವೇ ಕಾರಣ ಎಂದ ವಿದ್ಯಾರ್ಥಿ
ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದಿಂದಾಗಿ ಸಾಕಷ್ಟುಜನರು ಉಕ್ರೇನ್‌ನಿಂದ ಅಕ್ಕ ಪಕ್ಕದ ದೇಶಗಳಿಗೆ ವಲಸೆ ( Flee ) ಹೋಗುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಜೀವನ್ನು ಕಳೆದುಕೊಂಡಿದ್ದರೆ, ಕೆಲವರು ಗಾಯಾಳುಗಳಾಗಿದ್ದಾರೆ.
