Asianet Suvarna News Asianet Suvarna News

Viral Video: ರಷ್ಯಾದ ಸಾರಾಟೋವ್‌ ನಗರದ ಗಗನಚುಂಬಿ ಕಟ್ಟಡದ ಮೇಲೆ 9/11 ಮಾದರಿ ದಾಳಿ

ರಷ್ಯಾದ ಸರಟೋವ್‌ನಲ್ಲಿರುವ 38 ಅಂತಸ್ತಿನ ವೋಲ್ಗಾ ಸ್ಕೈ ವಸತಿ ಸಂಕೀರ್ಣಕ್ಕೆ ಡ್ರೋನ್ ದಾಳಿ ನಡೆದಿದ್ದು, ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ ಮತ್ತು ಕಟ್ಟಡಕ್ಕೆ ಹಾನಿಯಾಗಿದೆ. ಈ ಘಟನೆಯು ಭದ್ರತಾ ಕಾಳಜಿಯನ್ನು ಹೆಚ್ಚಿಸಿದೆ, ವಿಶೇಷವಾಗಿ ಸರಟೋವ್‌ನ ಆಯಕಟ್ಟಿನ ಮಿಲಿಟರಿ ತಾಣಗಳಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ.

Russia Saratov Drone crashes into 38 storey Volga Sky tallest building san
Author
First Published Aug 26, 2024, 2:00 PM IST | Last Updated Aug 26, 2024, 2:02 PM IST

ನವದೆಹಲಿ (ಆ.26): ರಷ್ಯಾದ ಸರಟೋವ್‌ನಲ್ಲಿರುವ ಅತಿ ಎತ್ತರದ ಕಟ್ಟಡವಾದ 38 ಅಂತಸ್ತಿನ ವೋಲ್ಗಾ ಸ್ಕೈ ವಸತಿ ಸಂಕೀರ್ಣಕ್ಕೆ ಡ್ರೋನ್ ದಾಳಿ ನಡೆದಿರುವ ನಾಟಕೀಯ ಘಟನೆ ಸೋಮವಾರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಡ್ರೋನ್‌ ದಾಳಿಯಿಂದಾಗಿ ಕನಿಷ್ಠ ಇಬ್ಬರು ವ್ಯಕ್ತಿಗಳಿಗೆ ಗಂಭೀರಗಾಯವಾಗಿದ್ದು,  ಗಗನಚುಂಬಿ ಕಟ್ಟಡದೊಳಗಿನ ಹಲವಾರು ಅಪಾರ್ಟ್‌ಮೆಂಟ್‌ಗಳಿಗೆ ದೊಡ್ಡ ಮಟ್ಟದ ಹಾನಿಯಾಗಿದೆ. ಈ ಘಟನೆಯು 128.6 ಮೀಟರ್ ಎತ್ತರವಿರುವ ವೋಲ್ಗಾ ಸ್ಕೈ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ, ಇದು ಸರಟೋವ್‌ನಲ್ಲಿ ಅತಿ ಎತ್ತರದ ಮಾತ್ರವಲ್ಲದೆ ವೋಲ್ಗಾ ಪ್ರದೇಶದ ಅತ್ಯಂತ ಎತ್ತರದ ಸ್ಥಳವಾಗಿದೆ. ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಯಿಂದ ಡ್ರೋನ್ ಅನ್ನು ಇಂಟರ್‌ಸೆಪ್ಟ್‌ ಮಾಡಲಾಗಿತ್ತು ಎಂದು ವರದಿಯಾಗಿದೆ. ಅದು ನೇರವಾಗಿ ಕಟ್ಟಡದ ಮೇಲೆ ಅಪ್ಪಳಿಸಿದ್ದರಿಂದ ಅದರ ಅವಶೇಷಗಳು ಅಪಾರ್ಟ್‌ಮೆಂಟ್‌ನಲ್ಲಿಯೇ ಬಿದ್ದಿದ್ದು, ವಸತಿ ಸಂಕೀರ್ಣಕ್ಕೆ ತೀವ್ರಹಾನಿಯಾಗಿದೆ.

ಉಕ್ರೇನ್‌ ಜೊತೆ ಪ್ರಸ್ತುತ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಪಟ್ಟಂತೆ ಈ ಡ್ರೋನ್‌ ಸ್ಟ್ರೈಕ್‌ ನಡೆದಿರಬಹುದು ಎಂದುಪ್ರಾದೇಶಿಕ ಗವರ್ನರ್ ರೋಮನ್ ಬಸುರ್ಗಿನ್ ತಿಳಿಸಿದ್ದಾರೆ. ಈ ದಾಳಿಯು ಈ ಪ್ರದೇಶದಲ್ಲಿ ಭದ್ರತಾ ಕಾಳಜಿಯನ್ನು ಹೆಚ್ಚಿಸಿದೆ, ನಿರ್ದಿಷ್ಟವಾಗಿ ಸರಟೋವ್‌ನ ಆಯಕಟ್ಟಿನ ಮಿಲಿಟರಿ ತಾಣಗಳಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ. ಸರಟೋವ್‌ ಪಟ್ಟಣದ ಸಮೀಪದಲ್ಲಿಯೇ ಎಂಗೆಲ್ಸ್ ವಾಯುನೆಲೆ ಇದ್ದು, ಈ ಹಿಂದೆ ವಾಯುನೆಲೆ ಕೂಡ ವಿರೋಧಿ ಪಾಳಯದ ಗುರಿಯಾಗಿತ್ತು.

ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ ಪ್ಯಾರಿಸ್‌ನಲ್ಲಿ ಬಂಧನ

ಸೋಶಿಯಲ್‌ ಮೀಡಿಯಾ  ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಲಾದ ಹಲವಾರು ವೀಡಿಯೊಗಳು ಹಾನಿಯ ಪ್ರಮಾಣವನ್ನು ತೋರಿಸುತ್ತವೆ, ಕಟ್ಟಡಕ್ಕೆ ದೊಡ್ಡ ಮಟ್ಟದ ಹಾನಿಯಾಗಿದ್ದು, ಮನೆಯ ಕಿಟಕಿಗಳು ಹಾರಿ ಹೋಗಿವೆ. ತುರ್ತು ಸೇವೆಗಳು ತಕ್ಷಣವೇ ಪ್ರತಿಕ್ರಿಯೆ ನೀಡಿವೆ. ಒಬ್ಬ ಮಹಿಳೆ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಆಕೆಯ ಚೇತರಿಕೆಗಾಗಿ ಹೋರಾಡುತ್ತಿದ್ದಾರೆ.

ಮೋದಿ 3.0 ಸಂಚಕಾರದ ಸಂಚು!; ಪಾಕಿಸ್ತಾನದಲ್ಲಿ ಆಡಿದ ಆಟ ಭಾರತದಲ್ಲೂ ಆಡುತ್ತಾ ಅಮೆರಿಕಾ?

Latest Videos
Follow Us:
Download App:
  • android
  • ios