Asianet Suvarna News Asianet Suvarna News

ಸೋಂಕಿನ ಭೀತಿ : ಪ್ರಾಣಿ​ಗ​ಳಿಗೂ ಕೋವಿಡ್‌ ಲಸಿ​ಕೆ

  • ಪ್ರಾಣಿ​ಗ​ಳಿಗೂ ಕೊರೋನಾ ಸೋಂಕು ವ್ಯಾಪಿ​ಸುವ ಭೀತಿ
  • ಪ್ರಾಣಿ​ಗ​ಳನ್ನು ಕೋವಿ​ಡ್‌​ನಿಂದ ಪಾರು ಮಾಡ​ಬ​ಹು​ದಾದ ಲಸಿ​ಕೆ​
  • ಕಾರ್ನಿ​ವ್ಯಾ​ಕ್‌-ಕೋವ್‌ ಹೆಸ​ರಿನ ರಷ್ಯಾದ ಈ ಲಸಿ​ಕೆ​ಯು ಪ್ರಾಣಿ​ಗ​ಳಿ​ಗಾಗಿ ಅಭಿ​ವೃ​ದ್ಧಿ​
Russia Registers  World s First' Covid-19 Vaccine for Animals snr
Author
Bengaluru, First Published May 28, 2021, 9:12 AM IST

ಮಾಸ್ಕೋ (ಮೇ.28): ಮಾನ​ವ​ನಿಂದ ಪ್ರಾಣಿ​ಗ​ಳಿಗೂ ಕೊರೋನಾ ಸೋಂಕು ವ್ಯಾಪಿ​ಸುವ ಭೀತಿ ಮಧ್ಯೆಯೇ, ಪ್ರಾಣಿ​ಗ​ಳನ್ನು ಕೋವಿ​ಡ್‌​ನಿಂದ ಪಾರು ಮಾಡ​ಬ​ಹು​ದಾದ ಲಸಿ​ಕೆ​ಯೊಂದನ್ನು ರಷ್ಯಾ ಅಭಿ​ವೃ​ದ್ಧಿ​ಪ​ಡಿ​ಸಿದೆ.

 ಈ ಮೂಲ​ಕ ಕಾರ್ನಿ​ವ್ಯಾ​ಕ್‌-ಕೋವ್‌ ಹೆಸ​ರಿನ ರಷ್ಯಾದ ಈ ಲಸಿ​ಕೆ​ಯು ಪ್ರಾಣಿ​ಗ​ಳಿ​ಗಾಗಿ ಅಭಿ​ವೃ​ದ್ಧಿ​ಪ​ಡಿ​ಸ​ಲಾದ ವಿಶ್ವದ ಮೊದಲ ಲಸಿಕೆ ಎಂಬ ಕೀರ್ತಿಗೆ ಭಾಜ​ನ​ವಾ​ಗಿದೆ. ಅಲ್ಲದೆ ರಷ್ಯಾದ ಕೃಷಿ ಸುರ​ಕ್ಷ​ತೆಯ ವಿಚ​ಕ್ಷಣ ನೇತೃ​ತ್ವ​ದಲ್ಲಿ ದೇಶದ ಹಲವು ಭಾಗ​ಗ​ಳಲ್ಲಿ ಪ್ರಾಣಿ​ಗ​ಳಿಗೂ ಕಾರ್ನಿ​ವ್ಯಾಕ್‌ ಕೋವ್‌ ಲಸಿ​ಕೆ​ಗ​ಳನ್ನು ನೀಡ​ಲಾ​ಗು​ತ್ತಿದೆ.

ನಿರ್ಲಕ್ಷ್ಯದ ಪರಮಾವಧಿ: ಕೊರತೆ ಇದ್ದರೂ ಲಸಿಕೆ ಹಾಳು ಮಾಡುತ್ತಿವೆ ರಾಜ್ಯಗಳು! .

ಕಾರ್ನಿ​ವ್ಯಾ​ಕ್‌-ಕೋವ್‌ ಲಸಿ​ಕೆ​ಯಿಂದ ಸಾಕು ಪ್ರಾಣಿ​ಗ​ಳಾದ ಶ್ವಾನ​ಗಳು, ಬೆಕ್ಕು​ಗಳು, ಹಂದಿ​ಗಳು ಸೇರಿ​ದಂತೆ ಇನ್ನಿ​ತರ ಪ್ರಾಣಿ​ಗ​ಳಲ್ಲಿ ಕೋವಿಡ್‌ ಪ್ರತಿ​ರೋ​ಧಕ ಶಕ್ತಿ ವೃದ್ಧಿ​ಯಾ​ಗಿ​ರು​ವುದು ಪ್ರಾಣಿ​ಗಳ ಮೇಲೆ ನಡೆ​ಸಿದ ಪ್ರಯೋ​ಗ​ಗ​ಳಿಂದ ದೃಢ​ವಾ​ಗಿದೆ ಎಂದು ರಷ್ಯಾ ಏಪ್ರಿಲ್‌ ತಿಂಗ​ಳಿ​ನಲ್ಲೇ ತಿಳಿ​ಸಿತ್ತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios