Russia Ukraine Crisis ರಷ್ಯಾ ಯುದ್ಧದ ಬಗ್ಗೆ ಸುಳ್ಳು ಸುದ್ದಿ ಹರಡಿದರೆ 15 ವರ್ಷ ಜೈಲು

- ಮಸೂದೆಗೆ ರಷ್ಯಾ ಸಂಸತ್ತಿನ ಒಂದು ಸದನದ ಅಂಗೀಕಾರ

- ಸೇನಾ ಕಾರ್ಯಾಚರಣೆ ವಿರುದ್ಧ ಸುಳ್ಳು ಸುದ್ದಿ ಬಿತ್ತರಿಸದಂತೆ ಕ್ರಮ

- ಸ್ವತಂತ್ರ ಮಾಧ್ಯಮಗಳಿಂದ ಟೀಕೆಯ ಬೆನ್ನಲ್ಲಿಯೇ ಕ್ರಮ

russia parliament passed a law punishing fake news regard special military operation with up to 15 years in prison san

ಮಾಸ್ಕೋ (ಮಾ. 5): ರಷ್ಯಾ (Russia) ತೆಗೆದುಕೊಂಡಿರುವ ಮಿಲಿಟರಿ ಕಾರ್ಯಾಚರಣೆಗೆ (special military operation) ಸಂಬಂಧಿಸಿದಂತೆ ಸುಳ್ಳು ವರದಿಗಳನ್ನು ಹರಡಿದರೆ 15 ವರ್ಷ ಜೈಲು (Prison) ಶಿಕ್ಷೆ ವಿಧಿಸುವಂತಹ ಮಸೂದೆಗೆ ರಷ್ಯಾ ಪಾರ್ಲಿಮೆಂಟ್‌ (russia parliament) ಶುಕ್ರವಾರ ಅನುಮೋದನೆ ನೀಡಿದೆ. ಉಕ್ರೇನ್‌ (Ukraine) ಮೇಲೆ ರಷ್ಯಾ ನಡೆಸಿದ ದಾಳಿಯ ನಂತರ ಕೆಲವು ರಷ್ಯಾದ ಸ್ವತಂತ್ರ ಮಾಧ್ಯಮಗಳು (Independent Media) ರಷ್ಯಾ ನಡೆಯನ್ನು ಟೀಕಿಸಿದ್ದವು. ಈ ಕಾರಣ ಈ ಕಾಯ್ದೆ ತರಲಾಗುತ್ತಿದೆ.

ರಷ್ಯಾ ಸಂಸತ್ತಿನ ಕೆಳಮನೆಯಲ್ಲಿ ಈ ಮಸೂದೆಗೆ ಒಪ್ಪಿಗೆ ಸಿಕ್ಕಿದೆ. ಪುಟಿನ್‌ (Vladimir Putin) ಸಹಿ ಮಾಡುವ ಮೊದಲು ಮೇಲ್ಮನೆಯಲ್ಲೂ ಒಪ್ಪಿಗೆ ಪಡೆಯಬೇಕಾಗಿರುವುದು ಅನಿವಾರ್ಯವಾದ್ದರಿಂದ ಈ ಮಸೂದೆಯನ್ನು ಮೇಲ್ಮನೆಗೆ ಕಳುಹಿಸಲಾಗಿದೆ. ಈ ಮಸೂದೆಗೆ ಶನಿವಾರವೇ ಅಂಕಿತ ಬೀಳುವ ಮೂಲಕ ಜಾರಿಗೆ ಬರಲಿದೆ ಎಂದು ಸ್ಪೀಕರ್‌ ವ್ಯಾಚೆಸ್ಲಾವ್‌ ವೋಲೋಡಿನ್‌ ಹೇಳಿದ್ದಾರೆ.

ಈ ಮಸೂದೆಯ ಪ್ರಕಾರ ರಷ್ಯಾ ಸರ್ಕಾರ ಸುಳ್ಳು ಎಂದು ಪರಿಗಣಿಸುವ ಸುದ್ದಿಗಳನ್ನು ಪ್ರಸಾರ ಮಾಡಿದವರಿಗೆ 15 ವರ್ಷಗಳವರೆಗೂ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಈ ಮಸೂದೆ ಅಂಗೀಕಾರವಾಗುತ್ತಿದ್ದಂತೆ ‘ಝಾಂಕ್‌ ನ್ಯೂಸ್‌’ (Zank News) ಎಂಬ ಮಾಧ್ಯಮ ತನ್ನ ವೆಬ್ಸೈಟ್‌ನ್ನು ಮುಚ್ಚಿದೆ.

Russia Ukraine War: ಉಕ್ರೇನ್‌ನ ಕರಾವಳಿ ಪ್ರದೇಶಕ್ಕೆ ನುಗ್ಗಿದ ರಷ್ಯಾ ಸೇನೆ: ಮರಿಯಾಪೌಲ್‌ ವಶಕ್ಕೆ
ದಾಳಿ ತರಬೇತಿ ಕೇಂದ್ರದ ಮೇಲೆ, ರಿಯಾಕ್ಟರ್‌ ಮೇಲಲ್ಲ: ಐಎಇಎ
ಕೀವ್‌:
ಎನರ್‌ಹೊಡಾರ್‌ (Enerhodar) ನಗರದ ಮೇಲೆ ಗುರುವಾರ ರಷ್ಯಾ ನಡೆಸಿದ ದಾಳಿಯಲ್ಲಿ ಝೆಪೋರ್‌ಝಿಯಾ (zaporizhzhia) ಪರಮಾಣು ಘಟಕದ (nuclear plant) 6ರ ಪೈಕಿ ಯಾವುದೇ ರಿಯಾಕ್ಟರ್‌ಗಳಿಗೂ ಬೆಂಕಿ ಬಿದ್ದಿಲ್ಲ. ಬೆಂಕಿ ಬಿದ್ದಿದ್ದು ಸಮೀಪದಲ್ಲೇ ಇರುವ ತರಬೇತಿ ಕೇಂದ್ರಕ್ಕೆ ಎಂದು ವಿಶ್ವಸಂಸ್ಥೆಯ ಅಣು ಇಂಧನ ಸಂಸ್ಥೆಯ (International atomic energy agency) ಪ್ರಧಾನ ನಿರ್ದೇಶಕ ರಫೇಲ್‌ ಮಾರಿಯಾನೋ (Rafael Mariano Grossi) ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಹಾಲಿ ಬೆಂಕಿಯನ್ನು ನಂದಿಸಲಾಗಿದೆ. ಅಲ್ಲಿ ಯಾವುದೇ ವಿಕಿರಣ ಸೋರಿಕೆ ಪತ್ತೆಯಾಗಿಲ್ಲ. ಈಗಲೂ ಘಟಕ ಉಕ್ರೇನ್‌ ಸರ್ಕಾರದ ವಶದಲ್ಲೇ ಇದೆ ಎಂದು ಹೇಳಿದ್ದಾರೆ. ಆರಂಭಿಕ ವರದಿಗಳು, ರಷ್ಯಾ ನಡೆಸಿದ ಶೆಲ್‌ ದಾಳಿಯಲ್ಲಿ ಘಟಕದ ಒಂದು ರಿಯಾಕ್ಟರ್‌ಗೆ ಬೆಂಕಿ ಬಿದ್ದಿದೆ ಎಂದು ಹೇಳಿದ್ದವು. ಹೀಗಾಗಿ ಪರಮಾಣು ಸೋರಿಕೆಯ ಭೀತಿ ಎದುರಾಗಿತ್ತು.

Ukraine crisis ಉಕ್ರೇನ್‌ಗೆ ಶಾಕ್‌ ಕೊಟ್ಟ ರಷ್ಯಾಗೆ ಕಾರ್ಪೋರೇಟ್ ಹೊಡೆತ, ಮುಂದೈತೆ ಮಾರಿಹಬ್ಬ!
ಮತ್ತೊಂದು ಬಂದರು ನಗರಿಗೆ ರಷ್ಯಾ ಲಗ್ಗೆ
ಕೀವ್‌:
ಉಕ್ರೇನ್‌ನ ದಕ್ಷಿಣ ಕರಾವಳಿಯ (Ukraine South Coast) ಎಲ್ಲಾ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಮೂಲಕ ಅದಕ್ಕೆ ಜಲಮಾರ್ಗ (Sea Route) ಮುಚ್ಚುವ ಯೋಜನೆಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ರಷ್ಯಾ ಪಡೆಗಳು, ಶುಕ್ರವಾರ ಮತ್ತೊಂದು ಕರಾವಳಿ ನಗರವಾದ ಮೈಕೋಲೇವ್‌ ಅನ್ನು ಪ್ರವೇಶಿಸುವಲ್ಲಿ ಯಶಸ್ವಿಯಾಗಿವೆ. ಹಲವು ದಿನಗಳಿಂದ ನಗರದ ಹೊರಭಾಗದಲ್ಲಿ ರಷ್ಯಾ ಸೇನೆ (Russia Army) ಬೀಡು ಬಿಟ್ಟತ್ತಾದರೂ, ಇದೇ ಮೊದಲ ಬಾರಿಗೆ ನಗರದ ಒಳಭಾಗ ಪ್ರವೇಶಿಸುವಲ್ಲಿ ಸೇನೆ ಯಶಸ್ವಿಯಾಗಿದೆ.

ಈ ನಡುವೆ ರಷ್ಯಾ ದಾಳಿಯ  ಕುರಿತು ಪ್ರತಿಕ್ರಿಯಿಸಿರುವ ನಗರದ ಗವರ್ನರ ವಿಟಾಲಿ ಕಿಮ್‌, ರಷ್ಯಾ ಪಡೆಗಳ ಜೊತೆ ಹೋರಾಟ ಮುಂದುವರೆದಿದೆ. ಯಾರೂ ಆತಂಕಪಡಬೇಕಾದ ಅವಶ್ಯಕತೆ ಇಲ್ಲ ಎಂದಿದ್ದಾರೆ. ರಷ್ಯಾ ಸೇನೆ ಈಗಾಗಲೇ ಕರಾವಳಿ ನಗರ ಖೇರ್ಸನ್‌ ಅನ್ನು (Kherson) ವಶಪಡಿಸಿಕೊಂಡಿದೆ. ಜೊತೆಗೆ ಕರಾವಳಿ ನಗರಿಗಳಾದ ಮರಿಯುಪೋಲ್‌ (Mariupol), ಒಡೆಸ್ಸಾ (Odessa)ವಶಕ್ಕೆ ನೌಕಾಪಡೆ (Navy) ದೊಡ್ಡ ದಂಡು ಬೀಡುಬಿಟ್ಟಿದೆ. ಈ ನಡುವೆ, 2 ರಷ್ಯಾ ವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಉಕ್ರೇನ್‌ ಸೇನೆ (Ukraine Army) ಹೇಳಿದೆ.

Latest Videos
Follow Us:
Download App:
  • android
  • ios