ನವದೆಹಲಿ(ಆ.21): ಕೊರೋನಾ ವೈರಸ್‌ ತಡೆಗೆ ತಾನು ಅಭಿವೃದ್ಧಿಪಡಿಸಿರುವ ವಿಶ್ವದ ಮೊದಲ ಲಸಿಕೆ ‘ಸ್ಪುಟ್ನಿಕ್‌-ವಿ’ ಉತ್ಪಾದನೆಗೆ ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲು ರಷ್ಯಾ ಉತ್ಸಾಹ ತೋರಿದೆ. ಲಸಿಕೆ ಉತ್ಪಾದನೆಗೆ ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ ಎಂದು ರಷ್ಯಾದ ನೇರ ಹೂಡಿಕೆ ನಿಧಿಯ ಸಿಇಒ ಕಿರಿಲ್‌ ಡಿಮಿಟ್ರೀವ್‌ ಗುರುವಾರ ಹೇಳಿದ್ದಾರೆ.

ಗುಡ್‌ ನ್ಯೂಸ್: ದೇಶಿ ಕೋವಿಡ್ ಲಸಿಕೆ ಬಳಕೆಗೆ ಶೀಘ್ರ ಸಮ್ಮುತಿ..?

ಈ ಬಗ್ಗೆ ಆನ್‌ಲೈನ್‌ ಪತ್ರಿಕಾಗೋಷ್ಠಿ ಮೂಲಕ ಮಾತನಾಡಿದ ಅವರು, ಲ್ಯಾಟಿನ್‌ ಅಮೆರಿಕ, ಏಷ್ಯಾ ಹಾಗೂ ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳು ಲಸಿಕೆ ಉತ್ಪಾದನೆಗೆ ಉತ್ಸಾಹ ತೋರಿವೆ. ಲಸಿಕೆ ಉತ್ಪಾದನೆ ಬಹುಮುಖ್ಯ ಅಂಗವಾಗಿರುವುದರಿಂದ ನಾವು ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಎದುರು ನೋಡುತ್ತಿದ್ದೇವೆ. ಭಾರತ ಈ ಲಸಿಕೆಯನ್ನು ಉತ್ಪಾದಿಸಲು ಶಕ್ತವಾಗಿದೆ ಎನ್ನುವ ನಂಬಿಕೆ ಇದೆ ಎಂದು ಹೇಳಿದ್ದಾರೆ.

ರಾಜ್ಯದ ಆಕ್ಸಿಜನ್ ಬೇಡಿಕೆ ನೀಗಿಸಲು ಪ್ರಧಾನಿಗೆ ಮನವಿ

ಅಲ್ಲದೇ ಇದೇ ವೇಳೆ ಕೇವಲ ರಷ್ಯಾದಲ್ಲಿ ಮಾತ್ರವಲ್ಲ ಯುಎಇ, ಸೌದಿ ಅರೇಬಿಯಾ, ಬ್ರೆಜಿಲ್‌ ಹಾಗೂ ಭಾರತದಲ್ಲಿ ಲಸಿಕೆಯನ್ನು ಪರೀಕ್ಷೆಯನ್ನು ಮಾಡಲು ಉದ್ದೇಶಿಸಿದ್ದೇವೆ. ಲಸಿಕೆಗೆ ಭಾರೀ ಬೇಡಿಕೆ ಬಂದಿದ್ದು, ಭಾರತ ಸೇರಿ 5 ರಾಷ್ಟ್ರಗಳ ಜತೆ ಸೇರಿ ಉತ್ಪಾದಿಸಲು ಮುಂದಾಗಿದ್ದೇವೆ ಎಂದು ಡಿಮಿಟ್ರಿವ್‌ ಹೇಳಿದ್ದಾರೆ.