Vladimir Putin ಬೆದರಿಕೆ ಬಳಿಕ ರಷ್ಯಾದಿಂದ ಜಾಗ ಖಾಲಿಮಾಡುತ್ತಿರುವ ಜನತೆ: Flight ಟಿಕೆಟ್‌ ಬೆಲೆ ಗಗನಕ್ಕೆ

ರಷ್ಯಾ ನಾಶಕ್ಕೆ ಪ್ರಯತ್ನಿಸುವ ದೇಶಗಳ ವಿರುದ್ಧ ಎಲ್ಲ ರೀತಿಯ ಅಸ್ತ್ರಕ್ಕೂ ಸಿದ್ಧ ಎಂದು ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಬೆದರಿಕೆ ಹಾಕಿದ ಬೆನ್ನಲ್ಲೇ, ಆ ದೇಶದಿಂದ ಹೊರಕ್ಕೆ ಹೋಗುವ ಜನರ ಸಂಖ್ಯೆ ಹೆಚ್ಚಾಗಿದೆ.

rush of one way flights out of russia after putin s ukraine threat ash

ರಷ್ಯಾವನ್ನು ಮುಗಿಸಲು ಪಾಶ್ಚಿಮಾತ್ಯ ದೇಶಗಳು (Western Nations) ಯತ್ನಿಸುತ್ತಿವೆ. ಈ ಹಿನ್ನೆಲೆ . ಉಕ್ರೇನ್‌ ಪರ ಆ ದೇಶಗಳು ಸಹಾಯಕ್ಕೆ ನಿಂತಿವೆ. ರಕ್ಷಣಾ (Defence) ಸೌಲಭ್ಯದ ಜೊತೆಗೆ ರಷ್ಯಾ ವಿರುದ್ಧ ಯುದ್ಧಕ್ಕೆ ನಿಂತಿದೆ. ರಷ್ಯಾ ಸಾರ್ವಭೌಮತ್ವಕ್ಕೆ ಧಕ್ಕೆಯಾದರೆ ಎಲ್ಲಾ ಅಸ್ತ್ರಗಳನ್ನೂ ಬಳಸಲು ನಾವು ಸಿದ್ಧರಿದ್ದೇವೆ, ನಾನು ತಮಾಷೆ ಮಾಡುತ್ತಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿನ್ನೆಯಷ್ಟೇ ಎಚ್ಚರಿಸಿದ್ದರು. ವಿಶ್ವದ ಎರಡನೇ ಮಹಾಯುದ್ಧದ (World War II) ನಂತರ ಈಗ ಮತ್ತೊಮ್ಮೆ ಅಣ್ವಸ್ತ್ರ ದಾಳಿಯಾಗಬಹುದೆಂಬ (Nuclear Attack) ಭೀತಿಯಿಂದ ರಷ್ಯಾದ ಜನರು ಅಲ್ಲಿಂದ ಬೇರೆ ದೇಶಗಳಿಗೆ ಹೋಗುತ್ತಿದ್ದಾರೆ ಎಂದು ತಿಳಿದುಬಂದಿದ್ದು, ವಿಮಾನದ ಟಿಕೆಟ್ ಬೆಲೆ ತೀವ್ರ ಏರಿಕೆಯಾಗಿದೆ.

ರಷ್ಯಾ ಅಧ್ಯಕ್ಷರ ಭಾಷಣದ ಬಳಿಕ ಮಾರ್ಷಿಯಲ್‌ ಕಾನೂನು (Martial Law) ಜಾರಿಯಾಗಬಹುದೆಂದು ಜನರಿಗೆ ಭೀತಿ ಎದುರಾಗಿದ್ದು, ಹಾಗೂ ಯುದ್ಧದಲ್ಲಿ ಹೋರಾಡುವ ವಯಸ್ಸುಳ್ಳ ಪುರುಷರನ್ನು ರಷ್ಯಾದಿಂದ ಹೊರಗೆ ಹೋಗದಂತೆ ಮಾಡಬಹುದು ಎಂದು ಕೆಲ ಮಾಧ್ಯಮ ವರದಿಗಳು ಹೇಳಿದ್ದು, ಈ ಹಿನ್ನೆಲೆ ರಷ್ಯಾದಿಂದ ಒನ್‌ವೇ ವಿಮಾನ ಟಿಕೆಟ್‌ಗೆ (One Way Flight Ticket) ಸಿಕ್ಕಾಪಟ್ಟೆ ಡಿಮ್ಯಾಂಡ್‌ ಬಂದಿದೆ. ಇನ್ನು, ಜಾಗತಿಕ ಟ್ರ್ಯಾಕಿಂಗ್ ಸೇವೆ FlightRadar24 ಪ್ರಕಾರ ರಷ್ಯಾದಿಂದ ಬೇರೆ ದೇಶಗಳಿಗೆ ಹೋಗುವ ಒನ್‌ ವೇ ಫ್ಲೈಟ್‌ ಟಿಕೆಟ್‌ಗಳ ಮಾರಾಟ ಹೆಚ್ಚಾಗಿದೆ. 

ಈ ಹಿನ್ನೆಲೆ ಈ ವಾರದ ವಿಮಾನದ ಟಿಕೆಟ್‌ಗಳು ಫುಲ್‌ ಬುಕ್‌ ಆಗಿದೆ ಎಂದು ಏರ್‌ಲೈನ್ ಹಾಗೂ ಟ್ರಾವೆಲ್‌ ಏಜೆಂಟರು ಬುಧವಾರ ಅಂತಾರಾಷ್ಟೀಯ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದೆ. ಈ ನಡುವೆ ಉಕ್ರೇನ್‌ ವಿರುದ್ಧ ವಿಶೇಷ ಮಿಲಿಟರಿ ಕಾರ್ಯಾಚರಣೆ ಘೋಷಿಸಿದಾಗಿನಿಂದ ಯುರೋಪ್‌ ಒಕ್ಕೂಟಕ್ಕೆ ವಿಮಾನಗಳು ಬಂದ್‌ ಆಗಿವೆ. 

ಇದನ್ನು ಓದಿ: Russia ತಂಟೆಗೆ ಬಂದರೆ ಅಣುಬಾಂಬ್‌ ಹಾಕಲೂ ಸಿದ್ಧ ಎಂದ Putin: Ukraine ಬೆಂಬಲಕ್ಕೆ ನಿಂತ ದೇಶಗಳಿಗೆ ಬೆದರಿಕೆ 

"ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ಬಂದಾಗ, ರಷ್ಯಾ ಮತ್ತು ನಮ್ಮ ಜನರನ್ನು ರಕ್ಷಿಸಲು ನಾವು ಖಂಡಿತವಾಗಿಯೂ ಎಲ್ಲಾ ವಿಧಾನಗಳನ್ನು ಬಳಸುತ್ತೇವೆ" ಎಂದು ಪುಟಿನ್ ಬುಧವಾರ ದೂರದರ್ಶನದ ರಾಷ್ಟ್ರೀಯ ಭಾಷಣದಲ್ಲಿ ಹೇಳಿದ್ದರು. ಇದು ತಮಾಷೆಯಲ್ಲ ಎಂದು ಅವರು ಹೇಳಿದ್ದರು. 
 
ಕಡ್ಡಾಯವಾಗಿ ಸೈನ್ಯಕ್ಕೆ ಸೇರಬೇಕು..!
"ಸೇನಾ ಮೀಸಲು ಕೆಟೆಗರಿಯಲ್ಲಿರುವ ನಾಗರಿಕರು ಮತ್ತು ಸೇನೆಯಲ್ಲಿ ಸೇವೆ ಸಲ್ಲಿಸಿರುವ ಮತ್ತು ತರಬೇತಿ ಪಡೆದಿರುವ ರಷ್ಯನ್ನರು ಕಡ್ಡಾಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕು," ಎಂದು ರಷ್ಯಾ ಅಧ್ಯಕ್ಷ ಪುಟಿನ್‌ ಅಧಿಕೃತ ಆದೇಶ ಹೊರಡಿಸಿದ್ದಾರೆ. ಇಷ್ಟವಿಲ್ಲದಿದ್ದರೂ ಸೇನೆ ಸೇವೆ ಸಲ್ಲಿಸಲೇಬೇಕಾದ ಪರಿಸ್ಥಿತಿ ರಷ್ಯಾದಲ್ಲಿ ನಿರ್ಮಾಣವಾಗಿದೆ. ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ಅಂದಾಜಿಸದಷ್ಟು ಸಂಖ್ಯೆಯಲ್ಲಿ ರಷ್ಯಾ ಸೈನಿಕರು ಮೃತಪಟ್ಟಿದ್ದಾರೆ. ಇದೇ ಕಾರಣಕ್ಕೆ ನಾಗರಿಕರಿಗೆ ಸೇನಾ ಸೇವೆ ಕಡ್ಡಾಯಗೊಳಿಸಲಾಗಿದೆ. 3 ಲಕ್ಷ ಜನರು ಯುದ್ಧ ಮಾಡಲು ಸಿದ್ಧವಾಗಿರಬೇಕು ಎಂದೂ ಆದೇಶ ಹೊರಡಿಸಲಾಗಿದೆ.
 
ರಷ್ಯಾ ಬಳಿ ಸಾಕಷ್ಟು ಅಣು ಅಸ್ತ್ರವಿದೆ. ಪುಟಿನ್‌ ರಷ್ಯಾದ ಸರ್ವಾಧಿಕಾರಿಯಾಗಿದ್ದಾರೆ. ನೆಪ ಮಾತ್ರಕ್ಕೆ ಸಂವಿಧಾನವಿದೆ ಎಂಬ ಅರಿವು ಎಲ್ಲಾ ದೇಶಗಳಿಗೂ ಗೊತ್ತಿರುವಂತದ್ದೇ. ಕ್ರೆಮ್ಲಿನ್‌ನಲ್ಲೇ ಕುಳಿತು ಪಾಶ್ಚಿಮಾತ್ಯ ದೇಶಗಳ ಮೇಲೂ ದಾಳಿ ಮಾಡಬಲ್ಲ ಶಕ್ತಿ ರಷ್ಯಾಕ್ಕಿದೆ. ಇದೇ ಕಾರಣಕ್ಕೆ ಉಕ್ರೇನ್‌ ಬೆಂಬಲಿಸುತ್ತಿರುವ ದೇಶಗಳು ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದೆ. 

 

ಇದನ್ನೂ ಓದಿ: ಉಕ್ರೇನ್ - ರಷ್ಯಾ ಯುದ್ಧಕ್ಕೆ Narendra Modi ವಿರೋಧಿಸಿದ್ದು ಸರಿ: ವಿಶ್ವದ ನಾಯಕರಿಂದ ಶ್ಲಾಘನೆ
 
ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಸಹ ಉಕ್ರೇನ್‌ ವಿರುದ್ಧದ ಯುದ್ಧ ನಿಲ್ಲಿಸಲು ಪುಟಿನ್‌ ಜತೆ ಮಾತುಕತೆ ನಡೆಸಿದ್ದರು. ಹಾಗೂ, ಇದು ಯುದ್ಧದ ಸಮಯವಲ್ಲ ಎಂದೂ ಹೇಳಿದ್ದರು. ಇದಕ್ಕೆ ಫ್ರಾನ್ಸ್ ಅಧ್ಯಕ್ಷ, ಅಮೆರಿಕದಿಂದಲೂ ಶ್ಲಾಘನೆ ವ್ಯಕ್ತವಾಗಿದೆ. 

Latest Videos
Follow Us:
Download App:
  • android
  • ios