ಆರ್‌ಎಸ್‌ಎಸ್‌ ರೀತಿಯ ಸಿದ್ಧಾಂತಗಳು ಭಾರತದ ಜೊತೆಗಿನ ಶಾಂತಿ-ಸಹಬಾಳ್ವೆಗೆ ಅಡ್ಡಿಯಾಗಿವೆ ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಆರೋಪಿಸಿದ್ದಾರೆ ‘ಭಾರತ ಮತ್ತು ನಾವು ಶಾಂತಿ ಮತ್ತು ಸಹಬಾಳ್ವೆ ಜೀವನ ನಡೆಸಲು ದೀರ್ಘಕಾಲದಿಂದ ಕಾಯುತ್ತಿದ್ದೇವೆ

ಇಸ್ಲಾಮಾಬಾದ್‌ (ಜು.17): ಆರ್‌ಎಸ್‌ಎಸ್‌ ರೀತಿಯ ಸಿದ್ಧಾಂತಗಳು ಭಾರತದ ಜೊತೆಗಿನ ಶಾಂತಿ-ಸಹಬಾಳ್ವೆಗೆ ಅಡ್ಡಿಯಾಗಿವೆ ಎಂದು ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಆರೋಪಿಸಿದ್ದಾರೆ. 

ಭಯೋತ್ಪಾದನೆ ಮತ್ತು ಶಾಂತಿ ಮಾತುಕತೆ ಒಟ್ಟಿಗೆ ನಡೆಯಲು ಸಾಧ್ಯವೇ ಎಂಬ ಪ್ರಶ್ನೆಗೆ ಶುಕ್ರವಾರ ಉತ್ತರಿಸಿದ ಖಾನ್‌, ‘ಭಾರತ ಮತ್ತು ನಾವು ಶಾಂತಿ ಮತ್ತು ಸಹಬಾಳ್ವೆ ಜೀವನ ನಡೆಸಲು ದೀರ್ಘಕಾಲದಿಂದ ಕಾಯುತ್ತಿದ್ದೇವೆ. ಆದರೆ ಮಾತುಕತೆಗೆ ಆರ್‌ಎಸ್‌ಎಸ್‌ ಇದಕ್ಕೆ ಅಡ್ಡಿಯಾಗಿದೆ’ ಎಂದರು. 

ಪಾಕ್‌ಗೆ ಕೋವಿಡ್‌ 4ನೇ ಅಲೆ ಭೀತಿ: ಸೋಂಕಿತರ ಸಂಖ್ಯೆ 3 ಪಟ್ಟು ಏರಿಕೆ!

ಆದರೆ ಇದೇ ವೇಳೆ ಆಷ್ಘಾನಿಸ್ತಾನದ ಬಹುತೇಕ ಭಾಗಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತಿರುವ ತಾಲಿಬಾನ್‌ ಉಗ್ರರ ಮೇಲೆ ಪಾಕಿಸ್ತಾನದ ನಿಯಂತ್ರಣವಿಲ್ಲ ಎಂಬ ಪ್ರಶ್ನೆಗೆ ಖಾನ್‌ ಅವರು ಉತ್ತರಿಸಲಿಲ್ಲ.