Asianet Suvarna News

ಪಾಕ್‌ಗೆ ಕೋವಿಡ್‌ 4ನೇ ಅಲೆ ಭೀತಿ: ಸೋಂಕಿತರ ಸಂಖ್ಯೆ 3 ಪಟ್ಟು ಏರಿಕೆ!

* ಪಾಕಿಸ್ತಾನದಲ್ಲಿ ಈಗ ಕೊರೋನಾ ವೈರಸ್‌ನ 4ನೇ ಅಲೆ ಭೀತಿ

* ಕಳೆದ 3 ವಾರಗಳ ಅವಧಿಯಲ್ಲಿ ಪ್ರತೀ ನಿತ್ಯವೂ ಪಾಕಿಸ್ತಾನದಲ್ಲಿ ಸೋಂಕಿತರ ಸಂಖ್ಯೆ 3 ಪಟ್ಟು ಹೆಚ್ಚಳ

* ಪಾಕಿಸ್ತಾನದಲ್ಲಿ ಭಾನುವಾರ ಒಂದೇ ದಿನ 1980 ಹೊಸ ಪ್ರಕರಣಗಳು ಪತ್ತೆ

Clear signs of fourth Covid wave starting in Pakistan says minister pod
Author
Bangalore, First Published Jul 12, 2021, 11:35 AM IST
  • Facebook
  • Twitter
  • Whatsapp

ಇಸ್ಲಾಮಾಬಾದ್‌(ಜು.12): ಪಾಕಿಸ್ತಾನ ಈಗ ಕೊರೋನಾ ವೈರಸ್‌ನ 4ನೇ ಅಲೆ ಭೀತಿಯಲ್ಲಿದೆ. ಏಕೆಂದರೆ ಕಳೆದ 3 ವಾರಗಳ ಅವಧಿಯಲ್ಲಿ ಪ್ರತೀ ನಿತ್ಯವೂ ಪಾಕಿಸ್ತಾನದಲ್ಲಿ ಸೋಂಕಿತರ ಸಂಖ್ಯೆ 3 ಪಟ್ಟು ಹೆಚ್ಚಾಗಿದೆ.

ಪಾಕಿಸ್ತಾನದಲ್ಲಿ ಭಾನುವಾರ ಒಂದೇ ದಿನ 1980 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಪ್ರಮಾಣ ಶೇ.4.09ಕ್ಕೆ ಜಿಗಿದಿದೆ. ಜೂನ್‌ 21ರಂದು ಕೇವಲ 633 ಪ್ರಕರಣಗಳು ದೃಢಪಟ್ಟಿದ್ದವು. ಹೀಗಾಗಿ 3 ಪಟ್ಟು ಪ್ರಕರಣಗಳ ಸಂಖ್ಯೆ ಹೆಚ್ಚಾದಂತಾಗಿದೆ. ಇದರೊಂದಿಗೆ ಪಾಕಿಸ್ತಾನದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,73,284ಕ್ಕೆ ಮುಟ್ಟಿದೆ.

ದೇಶಾದ್ಯಂತ ವಾಣಿಜ್ಯೋದ್ಯಮಗಳು ಮತ್ತು ಪ್ರವಾಸೋದ್ಯಮ ವಲಯಗಳ ಮೇಲಿನ ನಿರ್ಬಂಧದ ಪೂರ್ತಿ ತೆರವಿನಿಂದಾಗಿ ಕೊರೋನಾ ಕೇಸ್‌ಗಳು ಹೆಚ್ಚಾಗಿದ್ದು, ಪುನಃ ಲಾಕ್‌ಡೌನ್‌ ಘೋಷಣೆ ಮಾಡುವಂತೆ ಸರ್ಕಾರಕ್ಕೆ ತಜ್ಞರು ಸಲಹೆ ನೀಡಿದ್ದಾರೆ.

Follow Us:
Download App:
  • android
  • ios