ರೋಲಿಂಗ್ ಮೆಷಿನ್ ಒಂದು ಮಹಿಳೆಯನ್ನು ಎಳೆದುಕೊಂಡು ಹಲವು ಸುತ್ತು ತಿರುಗಿಸಿದಂತಹ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರೋಲಿಂಗ್ ಮೆಷಿನ್ ಒಂದು ಮಹಿಳೆಯನ್ನು ಎಳೆದುಕೊಂಡು ಹಲವು ಸುತ್ತು ತಿರುಗಿಸಿದಂತಹ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Ghpage TV ಎಂಬ ಇನ್ಸ್ಟಾಗ್ರಾಮ್‌ನಿಂದ ಈ ವೀಡಿಯೋ ವೈರಲ್ ಆಗಿದ್ದು, ಚೀನಾದಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಈ ಬಗ್ಗೆ ಸ್ಪಷ್ಟತೆ ಇಲ್ಲ.

ವೀಡಿಯೋದಲ್ಲಿ ಕಾಣಿಸುವಂತೆ ಮಹಿಳೆ ಕಾರ್ಯನಿರತವಾಗಿರುವ ರೋಲಿಂಗ್ ಮೆಷಿನ್‌ಗೆ ಕೈಹಾಕಿದ್ದು, ಸೆಕೆಂಡ್‌ಗಳಲ್ಲಿ ಮೆಷಿನ್‌ ಆಕೆಯನ್ನು ಒಳಗೆಳೆದುಕೊಂಡು ಮೂರಕ್ಕೂ ಹೆಚ್ಚು ಬಾರಿ ಸುತ್ತುಸುತ್ತಿದೆ. ಅಷ್ಟರಲ್ಲಿ ಮೆಷಿನ್ ತನ್ನಷ್ಟಕ್ಕೆ ನಿಂತಿದ್ದೋ ಅಥವಾ ಬೇರೆ ಯಾರೋ ನಿಲ್ಲಿಸಿದ್ದೋ ಗೊತ್ತಿಲ್ಲ ಮೆಷಿನ್ ಒಟ್ಟಿನಲ್ಲಿ ನಿಂತಿದ್ದು, ಆಕೆ ಮೆಷಿನ್‌ನಲ್ಲಿ ನೇತಾಡುತ್ತಿರುವುದನ್ನು ಕಾಣಬಹುದಾಗಿದೆ. ವೀಡಿಯೋ ನೋಡಿದ ಅನೇಕರು ಮಹಿಳೆಯ ಕ್ಷೇಮವನ್ನು ಪ್ರಶ್ನಿಸಿದ್ದು, ಮಹಿಳೆ ಬದುಕುಳಿದಿದ್ದಾಳೆಯೇ ಆಕೆ ಹೇಗಿದ್ದಾಳೆ ಎಂದು ಅನೇಕರು ಪ್ರಶ್ನಿಸಿದ್ದಾರೆ.

ಇದು ಮೀನುಗಳ ಸೀಮೋಲ್ಲಂಘನ... ಪೋರ್ಟ್ ಕೊಚ್ಚಿಯಲ್ಲಿ ಸೆರೆಯಾದ ಅಪರೂಪದ ವೀಡಿಯೋ

ಆದರೆ ಕೆಲ ವಿವರಗಳಿಂದ ತಿಳಿದ ಮಾಹಿತಿ ಪ್ರಕಾರ, ಮಹಿಳೆಗೇನು ಹಾನಿಯಾಗದೇ ಕೆಲ ಸಣ್ಣಪುಟ್ಟ ಗಾಯಗಳೊಂದಿಗೆ ಆಕೆ ಕ್ಷೇಮವಾಗಿ ಇದ್ದಾಳೆ ಎಂದು ತಿಳಿದು ಬಂದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಚೀನಾದಲ್ಲಿ ನಡೆದಿದೆ ಎನ್ನಲಾಗಿದೆ. ಟ್ವಿಟ್ಟರ್‌ನಲ್ಲಿ ಕೂಡ ಇದರ ವೀಡಿಯೋ ವೈರಲ್ ಆಗಿದ್ದು, ಬಟ್ಟೆ ಇಂಡಸ್ಟ್ರಿಯೊಂದರಲ್ಲಿ ಬಳಸಲಾಗುವಂತಹ ಅಥವಾ ಮೆಟಲ್ ಶೀಟ್ ಉತ್ಪಾದನೆಗೆ ಬಳಸಲಾಗುವಂತಹ ಮೆಷಿನ್‌ನಂತೆ ಇದು ಕಾಣುತ್ತಿದೆ. ವೀಡಿಯೋ ನೋಡಿದ ಅನೇಕರು ದಿಗ್ಭ್ರಮೆ ವ್ಯಕ್ತಪಡಿಸಿದ್ದು, ನೋಡಲು ಭಯವಾಗುತ್ತಿದೆ ಎಂದಿದ್ದಾರೆ. ಮಹಿಳೆ ಪಾರಾಗಿರುವುದೇ ದೊಡ್ಡ ಅದ್ಭುತ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಅದೃಷ್ಟವಶಾತ್ ಮೆಷಿನ್ ತನ್ನಷ್ಟಕ್ಕೆ ನಿಂತಿದ್ದರಿಂದ ಮಹಿಳೆ ಬದುಕುಳಿದಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಕೃಷಿ ಭೂಮಿಲ್ಲಿ ಹೊಸ ಚಿಗುರು ಹಳೇ ಬೇರಿನ ಸಮ್ಮಿಲನ: ತಾತ ಮೊಮ್ಮಗನ ಅಪರೂಪದ ವೀಡಿಯೋ ವೈರಲ್

View post on Instagram