Asianet Suvarna News Asianet Suvarna News

ಅಬ್ಬಬ್ಬಾ..ಒಂದು ಸೆಕೆಂಡ್‌ಗಿಂತಲೂ ಕಡಿಮೆ ಅವಧಿಯಲ್ಲಿ ರೂಬಿಕ್ಸ್ ಕ್ಯೂಬ್ ಸರಿಪಡಿಸಿದ ರೊಬೋಟ್‌!

ಸ್ಪೀಡ್‌ಕ್ಯೂಬರ್‌ಗಳು ರೂಬಿಕ್ಸ್ ಬಾಕ್ಸ್‌ನ್ನು ಕೇವಲ ಒಂದು ನಿಮಿಷದೊಳಗೆ ಪರಿಹರಿಸಬಹುದು, ವಿಶ್ವ ಮಟ್ಟದ ಸ್ಪರ್ಧಿಗಳು ಇದನ್ನು 10 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಮಾಡುತ್ತಾರೆ. ಆದರೆ ರೋಬೋಟ್ ಎಷ್ಟು ವೇಗವಾಗಿ ರೂಬಿಕ್ಸ್ ಕ್ಯೂಬ್‌ ಸರಿ ಮಾಡಬಹುದು ಎಂಬ ಬಗ್ಗೆ ಹಲವರಿಗೆ ಕುತೂಹಲವಿತ್ತು. ಅದಕ್ಕೀಗ ಉತ್ತರ ದೊರಕಿದೆ. 

Robot Solves Rubiks Cube In Less Than A Second, Sets World Record Vin
Author
First Published May 24, 2024, 12:15 PM IST

ರೂಬಿಕ್ಸ್ ಕ್ಯೂಬ್‌ ಫಜಲ್‌ನ್ನು ಸಾಲ್ವ್ ಮಾಡುವುದು ತುಂಬಾ ಕಷ್ಟಕರ ಅನ್ನೋದು ಬಹುತೇಕ  ಎಲ್ಲರಿಗೂ ಗೊತ್ತಿರೋ ವಿಚಾರ. ಕೆಲವೊಬ್ಬರಿಗೆ ಇದು ಸಾಧ್ಯವೇ ಆಗುವುದಿಲ್ಲ. ಮತ್ತೆ ಕೆಲವರು ಗಂಟೆಗಳ ಕಾಲ ಸಮಯವನ್ನು ತೆಗೆದುಕೊಂಡು ಕ್ಯೂಬ್‌ನ್ನು ಸರಿಮಾಡಿಬಿಡುತ್ತಾರೆ. ಈ ಫಜಲ್‌ನ್ನು ಸಾಲ್ವ್ ಮಾಡಿ ಪ್ರಾಕ್ಟೀಸ್ ಇದ್ದವರು ಕೇವಲ ಹತ್ತು ನಿಮಿಷದಲ್ಲಿ ಇದನ್ನು ಸಾಲ್ವ್ ಮಾಡುವುದೂ ಇದೆ. ಆದ್ರೆ ರೂಬಿಕ್ಸ್ ಕ್ಯೂಬ್‌ನ್ನು ಕೇವಲ ಒಂದು ಸೆಕೆಂಡ್‌ಗಿಂತಲೂ ಕಡಿಮೆ ಅವಧಿಯಲ್ಲಿ ಬಗೆಹರಿಸಲು ಸಾಧ್ಯವಾಗಿದೆ. ಆದರೆ ಇದನ್ನು ಮಾಡಿದ್ದು ಮನುಷ್ಯರಲ್ಲ, ಬದಲಿಗೆ ರೊಬೋಟ್. 

ಸ್ಪೀಡ್‌ಕ್ಯೂಬರ್‌ಗಳು ರೂಬಿಕ್ಸ್ ಬಾಕ್ಸ್‌ನ್ನು ಕೇವಲ ಒಂದು ನಿಮಿಷದೊಳಗೆ ಪರಿಹರಿಸಬಹುದು, ವಿಶ್ವ ಮಟ್ಟದ ಸ್ಪರ್ಧಿಗಳು ಇದನ್ನು 10 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಮಾಡುತ್ತಾರೆ. ಆದರೆ ರೋಬೋಟ್ ಎಷ್ಟು ವೇಗವಾಗಿ ರೂಬಿಕ್ಸ್ ಕ್ಯೂಬ್‌ ಸರಿ ಮಾಡಬಹುದು ಎಂಬ ಬಗ್ಗೆ ಹಲವರಿಗೆ ಕುತೂಹಲವಿತ್ತು. ಅದಕ್ಕೀಗ ಉತ್ತರ ದೊರಕಿದೆ. 

ಕ್ಯಾನ್ಸರ್‌ ರೋಗಿಗೆ ರೊಬೋಟ್‌ನಿಂದ ಸರ್ಜರಿ, ಅಂಗಾಂಗ ಸುಟ್ಟು ಹೋಗಿ ಮಹಿಳೆ ಸಾವು

ಮಿತ್ಸುಬಿಷಿ ಎಲೆಕ್ಟ್ರಿಕ್ ಕಾರ್ಪೊರೇಶನ್‌ನಲ್ಲಿರುವ ಕಾಂಪೊನೆಂಟ್ ಪ್ರೊಡಕ್ಷನ್ ಇಂಜಿನಿಯರಿಂಗ್ ಸೆಂಟರ್, ರೊಬೋಟ್‌ನಿಂದ ಪಜಲ್ ಕ್ಯೂಬ್ ಅನ್ನು ಪರಿಹರಿಸಿ ವಿಶ್ವ ದಾಖಲೆಯನ್ನು ಮಾಡಿದೆ. ಜಪಾನಿನ ಕಂಪನಿಯು ವಿನ್ಯಾಸಗೊಳಿಸಿದ ರೋಬೋಟ್ ಒಂದು ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಕಾರ್ಯವನ್ನು ಪೂರ್ಣಗೊಳಿಸಿತು. 

ಮೇ 21 ರಂದು ಟೋಕಿಯೊದಲ್ಲಿ ದಾಖಲೆ ನಿರ್ಮಿಸುವ ಇವೆಂಟ್ ನಡೆಯಿತು. ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಹಂಚಿಕೊಂಡಿರುವ ಬ್ಲಿಂಕ್ ಮತ್ತು ಯು-ಮಿಸ್-ಇಟ್ ವೀಡಿಯೊದಲ್ಲಿ ರೋಬೋಟ್‌ನ ಕಾರ್ಯಕ್ಷಮತೆಯನ್ನು ಸೆರೆಹಿಡಿಯಲಾಗಿದೆ. ಕ್ಲಿಪ್ ರೋಬೋಟ್ ಸ್ಟ್ಯಾಂಡರ್ಡ್ 3x3x3 ಪಜಲ್ ಕ್ಯೂಬ್ ಅನ್ನು ಕೇವಲ 0.305 ಸೆಕೆಂಡುಗಳಲ್ಲಿ ಪರಿಹರಿಸುವುದನ್ನು ತೋರಿಸಿದೆ. ಇದು ಮಾನವ ಕಣ್ಣು ಮಿಟುಕಿಸುವುದಕ್ಕಿಂತಲೂ ವೇಗವಾಗಿದೆ. ವೀಡಿಯೊ ಎಲ್ಲೆಡೆ ವೈರಲ್ ಆಗಿದ್ದು, ಸಾವಿರಾರು ಮಂದಿ ಇದನ್ನು ವೀಕ್ಷಿಸಿದ್ದಾರೆ. 

ರೋಬೋಟ್ ಕೆಲಸ ಕಿತ್ಕೊಂಡು, ಹಾಗೆಯೇ ಕೆಲಸ ಮಾಡೋ ಈ ಹೆಣ್ಣಿನ ಜಾಣ್ಮೆಗೆ ಏನನ್ನೋದು?

ಈ ದಾಖಲೆಯ ಪ್ರಯತ್ನದ ಹಿಂದಿರುವ ಪ್ರಮುಖ ವ್ಯಕ್ತಿ,ತೌಕಿ, ಮಿತ್ಸುಬಿಷಿ ಎಲೆಕ್ಟ್ರಿಕ್‌ನ ಕಾಂಪೊನೆಂಟ್ ಪ್ರೊಡಕ್ಷನ್ ಇಂಜಿನಿಯರಿಂಗ್ ಸೆಂಟರ್‌ನಿಂದ ಬಂದವರು. ಈ ಹಿಂದೆಯೂ ಅವರು ಅತಿ ವೇಗದಲ್ಲಿ ಪಝಲ್ ಬಿಡಿಸುವ ರೊಬೋಟ್ ನಿರ್ಮಿಸಿದ್ದರು. ಆದರೆ ಆ ರೊಬೋಟ್‌ ದಾಖಲೆ ಮಾಡುವಲ್ಲಿ ಫೈಲ್ಯೂರ್ ಆಗಿತ್ತು. ಆದರೆ ಸತತ ಪ್ರಯತ್ನಗಳ ನಂತರ ತೌಕಿ ನಿರ್ಮಿಸಿದ ರೊಬೋಟ್ ಈ ಸಾಧನೆಯನ್ನು ಮಾಡಿದೆ.

3x3x3 ಪಜಲ್ ಕ್ಯೂಬ್ ಅನ್ನು ಬಿಡಿಸಲು ಮನುಷ್ಯನಿಗೆ ಅತ್ಯಂತ ವೇಗವಾದ ಸರಾಸರಿ ಸಮಯ 4.48 ಸೆಕೆಂಡುಗಳು ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಹೇಳುತ್ತದೆ. ಇದನ್ನು ಚೀನಾದ ಯಿಹೆಂಗ್ ವಾಂಗ್ ಸಾಧಿಸಿದ್ದಾರೆ.

Latest Videos
Follow Us:
Download App:
  • android
  • ios