ಲಂಡನ್‌ನಲ್ಲಿ ಕುಚಿಪುಡಿ ನೃತ್ಯಕ್ಕೆ ಹೆಜ್ಜೆ ಹಾಕಿದ ರಿಷಿ ಸುನಕ್ ಪುತ್ರಿ
ಬ್ರಿಟನ್ ಪ್ರಧಾನ ಮಂತ್ರಿಯಾಗಿರುವ ಭಾರತೀಯ ಸಂಜಾತ ರಿಷಿ ಸುನಕ್, ಅಲ್ಲಿನ ರಾಷ್ಟ್ರ ರಾಜಕಾರಣದಲ್ಲಿ ಬ್ಯುಸಿಯಾಗಿದ್ದರೆ ಇತ್ತ ಪುತ್ರಿ ಅನೌಷ್ಕಾ ಸುನಕ್ ಅವರು ಭಾರತೀಯ ನೃತ್ಯ ಪ್ರಕಾರವಾದ ಕುಚುಪುಡಿ ನೃತ್ಯದ ಪ್ರದರ್ಶನ ನೀಡಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬ್ರಿಟನ್ ಪ್ರಧಾನ ಮಂತ್ರಿಯಾಗಿರುವ ಭಾರತೀಯ ಸಂಜಾತ ರಿಷಿ ಸುನಕ್, ಅಲ್ಲಿನ ರಾಷ್ಟ್ರ ರಾಜಕಾರಣದಲ್ಲಿ ಬ್ಯುಸಿಯಾಗಿದ್ದರೆ ಇತ್ತ ಪುತ್ರಿ ಅನೌಷ್ಕಾ ಸುನಕ್ ಅವರು ಭಾರತೀಯ ನೃತ್ಯ ಪ್ರಕಾರವಾದ ಕುಚುಪುಡಿ ನೃತ್ಯದ ಪ್ರದರ್ಶನ ನೀಡಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತದ ಶಾಸ್ತ್ರೀಯ ನೃತ್ಯ ಪ್ರಕಾರವಾಗಿರುವ ಕುಚುಪುಡಿಯನ್ನು 9 ವರ್ಷದ ಅನೌಷ್ಕಾ ಪ್ರದರ್ಶಿಸುವ ಮೂಲಕ ಭಾರತದ ಪರಂಪರೆಯೊಂದಿಗೆ ಅವರಿಗಿರುವ ಸಂಬಂಧ ಆಸಕ್ತಿಯನ್ನು ಸಾಬೀತುಪಡಿಸಿದ್ದಾರೆ.
ರಂಗ್ ಇಂಟರ್‌ನ್ಯಾಷನಲ್ ಕುಚುಪುಡಿ ಡಾನ್ಸ್ ಫೆಸ್ಟಿವಲ್ 2022ರ (Rang'- International Kuchipudi Dance Festival 2022) ಭಾಗವಾಗಿ ಅನೌಷ್ಕಾ ಈ ನೃತ್ಯ ಪ್ರರ್ಶನ ನೀಡಿದ್ದು, ಈ ಕಾರ್ಯಕ್ರಮದಲ್ಲಿ ರಿಷಿ ಸುನಕ್ ಪತ್ನಿ ಹಾಗೂ ಅನೌಷ್ಕಾ ತಾಯಿ ಅಕ್ಷತಾ ಹಾಗೂ ರಿಷಿ ಪೋಷಕರು ಭಾಗವಹಿಸಿದ್ದರು. ರಂಗ್ ಬ್ರಿಟನ್‌ನ ಅತ್ಯಂತ ದೊಡ್ಡ ಮಟ್ಟದ ಅಂತರ್ ತಲೆಮಾರುಗಳ ನೃತ್ಯ ಸಂಭ್ರಮವಾಗಿದ್ದು, ಈ ನೃತ್ಯ ಪ್ರದರ್ಶನದಲ್ಲಿ ಅತ್ಯಂತ ಚಿಕ್ಕ ಮಕ್ಕಳಿಂದ ಹಿಡಿದು ಅತ್ಯಂತ ಹಿರಿಯ ವೃದ್ಧರವರೆಗೆ ವಿವಿಧ ವಿಭಾಗಗಳಲ್ಲಿ ನೃತ್ಯ ಪ್ರಕಾರಗಳ ಪ್ರದರ್ಶನ ನೀಡುತ್ತಾರೆ. ಆದರೆ ಈ ಬಾರಿ ಭಾರತಕ್ಕೆ ಸ್ವಾತಂತ್ರ ಬಂದು 75 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಈ ಥೀಮ್‌ನಡಿ ಈ ಬಾರಿ ರಂಗ್ ಇಂಟರ್‌ನ್ಯಾಷನಲ್ ಕುಚುಪುಡಿ ಡಾನ್ಸ್ ಫೆಸ್ಟಿವಲ್ 2022ರ ನೃತ್ಯ ಪ್ರದರ್ಶನಗಳನ್ನು ನಡೆಸಲಾಗಿತ್ತು.
ಅದರಂತೆ ಅನೌಷ್ಕ (Anoushka Sunak) ಅವರು ನೀಲಿ ಹಾಗೂ ಹಸಿರು ಬಣ್ಣದ ನೃತ್ಯದ ವೇಷಭೂಷಣ ಧರಿಸಿದ ಇತರ ಮಕ್ಕಳೊಂದಿಗೆ ವೇದಿಕೆಯಲ್ಲಿ ಭಾರತೀಯ ಪರಂಪರೆಯ ಕುಚುಪುಡಿ ನೃತ್ಯ ಪ್ರದರ್ಶಿಸಿದ್ದಾರೆ. ಲಂಡನ್‌ನ ದ ಭವನ್ ನಲ್ಲಿ ಈ ನೃತ್ಯ ಕಾರ್ಯಕ್ರಮ ನಡೆದಿದೆ. ಆದರೆ ಪುತ್ರಿಯ ಈ ಕಾರ್ಯಕ್ರಮದಲ್ಲಿ ರಿಷಿ ಸುನಕ್ ಅವರು ಭಾಗವಹಿಸಿಲ್ಲ. ಆದರೆ ಅವರ ಪತ್ನಿ ಅಕ್ಷತಾ ಮೂರ್ತಿ (Akshata Murthy) (ಇನ್‌ಫೋಸಿಸ್‌ನ ಸುಧಾಮೂರ್ತಿ ಹಾಗೂ ನಾರಾಯಣ ಮೂರ್ತಿ ದಂಪತಿ ಪುತ್ರಿ) ಹಾಗೂ ರಿಷಿ ಸುನಕ್ ಪೋಷಕರು (Rishi Sunak parents)ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಗಳ ಕುಚಿಪುಡಿ ನೃತ್ಯದ ವಿಡಿಯೋ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ ಮಹೇಶ್ ಬಾಬು
ಈ ನೃತ್ಯ ಕಾರ್ಯಕ್ರಮದಲ್ಲಿ 4 ವರ್ಷದಿಂದ ಶುರುವಾಗಿ 85 ವರ್ಷದವೆರೆಗೆ ಸುಮಾರು 100 ಜನ ಈ ನೃತ್ಯ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಮಕಾಲೀಮ ನೃತ್ಯ ಪ್ರಕಾರಗಳ ಹಿರಿಯ ಕಲಾವಿದರೂ ಕೂಡ ಭಾಗವಹಿಸಿದ್ದರು. ಅವರು 65 ವರ್ಷ ದಾಟಿದ ಪ್ರದರ್ಶನ ತಂಡದ ಭಾಗವಾಗಿದ್ದರು. ಇದರ ಜೊತೆಗೆ ವಿಶೇಷ ಚೇತನರು ಕೂಡ ವ್ಹೀಲ್ ಚೇರ್ (wheelchair dancers) ಮೂಲಕ ಈ ನೃತ್ಯ ಪ್ರದರ್ಶನದ ಭಾಗವಾಗಿದ್ದರು. ಇದರ ಜೊತೆಗೆ ಪೊಲ್ಯಾಂಡ್‌ನ ನಟರಂಗ ಗುಂಪಿನ (Natarang Group) ಅಂತಾರಾಷ್ಟ್ರೀಯ ಬರ್ಸರಿ ವಿದ್ಯಾರ್ಥಿಗಳು ಲೈವ್ ಮ್ಯೂಸಿಶಿಯನ್‌ಗಳು (live musicians) ಕೂಡ ಈ ತಂಡದ ಭಾಗವಾಗಿದ್ದರು. ಈ ಕಾರ್ಯಕ್ರಮದ ನಂತರ ಇಂಡಿಯಾ ಟುಡೇ(India Today) ನಡೆಸಿದ ಸಂದರ್ಶನವೊಂದರಲ್ಲಿ (interview) ಮಾತನಾಡಿದ ಅನೌಷ್ಕಾ (Anoushka), ಭಾರತವೂ ಕುಟುಂಬ ಮನೆ ಸಂಸ್ಕೃತಿ ಎಲ್ಲವೂ ಮಿಳಿತಗೊಂಡ ಸ್ಥಳವಾಗಿದ್ದು, ಅಲ್ಲಿಗೆ ಪ್ರತಿವರ್ಷವೂ ತೆರಳುವುದಕ್ಕೆ ಸಂತಸವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
T20 ವಿಶ್ವಕಪ್ ಫೈನಲ್‌ಗೆ ಮುನ್ನ ಇಂಗ್ಲೆಂಡ್ ತಂಡಕ್ಕೆ ಸಂದೇಶ ನೀಡಿದ ರಿಷಿ ಸುನಕ್
ಇತ್ತ ರಿಷಿ ಸುನಕ್ ಬ್ರಿಟನ್ (United Kingdom) 57ನೇ ಪ್ರಧಾನಿಯಾಗಿದ್ದು, ಅನೇಕ ಭಾರತೀಯರ (Indians) ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದಾರೆ. ರಿಷಿ ಸುನಕ್ ಈ ಸ್ಥಾನಮಾನವನ್ನು ಗಳಿಸಿದ ಮೊದಲ ಭಾರತೀಯ ಸಂಜಾತ ಮಾತ್ರವಲ್ಲದೇ ಕಳೆದ 200 ವರ್ಷಗಳಲ್ಲಿ ಈ ಸ್ಥಾನಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ಎಷ್ಟೇ ಉನ್ನತಸ್ಥಾನಕ್ಕೆ ಹೋದರು ತಮ್ಮತನ ತಮ್ಮ ಸಂಸ್ಕೃತಿ, ಸರಳತೆ ಸಂಸ್ಕಾರವನ್ನು ಎಲ್ಲೂ ಬಿಟ್ಟುಕೊಡದೇ ಸಾವಿರಾರು ಭಾರತೀಯರ ಪಾಲಿಗೆ ಸ್ಪೂರ್ತಿ ಹಾಗೂ ಹೆಮ್ಮೆ ಎನಿಸಿರುವ ಸುಧಾಮೂರ್ತಿಯವ ಮೊಮ್ಮಗಳು ಈ ಬಾರತೀಯ ಪರಂಪರೆಯ ನೃತ್ಯ ಪ್ರಕಾರದ ಘಮಲನ್ನು ವಿದೇಶದಲ್ಲಿಯೂ ಪಸರಿಸುತ್ತಿರುವುದು ಹೆಮ್ಮೆಯ ವಿಚಾರ.