Asianet Suvarna News Asianet Suvarna News

T20 ವಿಶ್ವಕಪ್ ಫೈನಲ್‌ಗೆ ಮುನ್ನ ಇಂಗ್ಲೆಂಡ್ ತಂಡಕ್ಕೆ ಸಂದೇಶ ನೀಡಿದ ರಿಷಿ ಸುನಕ್

ಟಿ 20 ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಎದುರಿಸುತ್ತಿರುವ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಹುರಿದುಂಬಿಸುವುದಾಗಿ ಯುಕೆ ಪ್ರಧಾನಿ ರಿಷಿ ಸುನಕ್ ಟ್ವೀಟ್‌ ಮಾಡಿದ್ದಾರೆ.

icc t20 world cup rishi sunak message to england team ahead of t20 world cup finale ash
Author
First Published Nov 13, 2022, 10:48 AM IST

ಇಂದು ಪಾಕಿಸ್ತಾನ (Pakistan) ಹಾಗೂ ಇಂಗ್ಲೆಂಡ್‌ (England) ನಡುವೆ ಐಸಿಸಿ ಟಿ 20 ವಿಶ್ವಕಪ್‌ ಫೈನಲ್‌ ಪಂದ್ಯ (ICC T20 World Cup Final Match) ನಡೆಯಲಿದೆ. ಭಾರತ (India) ತಂಡವನ್ನು ನಿರಾಯಾಸವಾಗಿ ಸೋಲಿಸಿದ ಇಂಗ್ಲೆಂಡ್‌ ತಂಡ ಒಂದು ಕಡೆ ಬಲಶಾಲಿಯಾಗಿ ತೋರುತ್ತಿದ್ದು, ಇನ್ನೊಂದೆಡೆ ಜಿಂಬಾಬ್ವೆ (Zimbabwe) ಎದುರು ಸೋತರೂ, ಫೀನಿಕ್ಸ್‌ನಂತೆ ಮತ್ತೆ ಎದ್ದು ಬಂದ ಪಾಕಿಸ್ತಾನ ಫೈನಲ್‌ ಪ್ರವೇಶಿಸಿದೆ. ಈ ಹಿನ್ನೆಲೆ ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುವ ಸಾಧ್ಯತೆ ಇದೆ. ಬಾಬರ್‌ ಆಜಂ (Babar Azam) ನೇತೃತ್ವದ ಪಾಕ್‌ ತಂಡ ಹಾಗೂ ಜಾಸ್‌ ಬಟ್ಲರ್‌ (Jos Butler) ನೇತೃತ್ವದ ಇಂಗ್ಲೆಂಡ್‌ ತಂಡ ಹೋರಾಡಲಿದೆ. 

ಇನ್ನು, ಭಾರತೀಯ ಕಾಲಮಾನದಲ್ಲಿ ಇಂದು ಮಧ್ಯಾಹ್ನ ನಡೆಯಲಿರುವ ಟಿ 20 ವಿಶ್ವಕಪ್ ಫೈನಲ್‌ಗೆ ಮುಂಚಿತವಾಗಿ ಇಂಗ್ಲೆಂಡ್ ತಂಡಕ್ಕೆ ಭಾರತೀಯ ಮೂಲದ ಹಾಗೂ ನೂತನ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ (Rishi Sunak) ಸಂದೇಶ ನೀಡಿದ್ದಾರೆ. ಟಿ 20 ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಎದುರಿಸುತ್ತಿರುವ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಹುರಿದುಂಬಿಸುವುದಾಗಿ ಯುಕೆ ಪ್ರಧಾನಿ ರಿಷಿ ಸುನಕ್ ಶನಿವಾರ ಟ್ವೀಟ್‌ ಮಾಡಿದ್ದಾರೆ.

"ನಾಳೆ ಪಾಕಿಸ್ತಾನದ ವಿರುದ್ಧ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್‌ ಕ್ರಿಕೆಟ್‌ಗೆ ಶುಭವಾಗಲಿ. ಯುಕೆಯಾದ್ಯಂತ ಇರುವ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳೊಂದಿಗೆ ನಾನು ನಿಮ್ಮನ್ನು ಹುರಿದುಂಬಿಸುತ್ತೇನೆ. ನಾವು ಎಲ್ಲಾ ರೀತಿಯಲ್ಲಿ ನಿಮ್ಮ ಹಿಂದೆ (ಬೆಂಬಲಕ್ಕೆ) ಇದ್ದೇವೆ," ಎಂದು ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಟ್ವೀಟ್‌ ಮೂಲಕ ಶುಭ ಕೋರಿದ್ದಾರೆ.

ಇದನ್ನು ಓದಿ: ENG VS PAK: ಟಿ20 ಕ್ರಿಕೆಟ್‌ಗೆ ಹೊಸ ಬಾಸ್ ಯಾರು..?

ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಇಂದು ಮಧ್ಯಾಹ್ನ 1:30 ಕ್ಕೆ (IST) ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಪ್ರಾರಂಭವಾಗಲಿದೆ. ಪಂದ್ಯ ಆರಂಭವಾಗುವ ಅರ್ಧ ಗಂಟೆ ಮೊದಲು ಸಾಮಾನ್ಯದಂತೆ ಟಾಸ್‌ ನಿಗದಿಯಾಗಿದೆ. 

ಭಾರತವನ್ನು ಇಂಗ್ಲೆಂಡ್ 10 ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆದರೆ, ಪಾಕಿಸ್ತಾನವು ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿತು. ಪಾಕಿಸ್ತಾನ (2009) ಮತ್ತು ಇಂಗ್ಲೆಂಡ್ (2010) ತಲಾ ಒಂದು ಬಾರಿ ಟಿ20 ವಿಶ್ವಕಪ್ ಗೆದ್ದಿವೆ. 2007 ರಲ್ಲಿ ಟಿ - 20 ವಿಶ್ವಕಪ್‌ ಆರಂಭವಾಗಿತ್ತು. ಮೊದಲ ಐಸಿಸಿ ಪಂದ್ಯಾವಳಿಯಲ್ಲೇ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಭಾರತ ವಿಶ್ವಕಪ್‌ ಗೆದ್ದುಕೊಂಡಿತ್ತು. ಆ ವೇಳೆಯೂ ಪಾಕಿಸ್ತಾನ ಫೈನಲ್‌ನಲ್ಲಿ ಭಾರತ ತಂಡವನ್ನು ಎದುರಿಸಿತ್ತು. 

ಇದನ್ನೂ ಓದಿ: T20 World Cup ಇಂಗ್ಲೆಂಡ್‌-ಪಾಕಿಸ್ತಾನ ಫೈನಲ್‌ಗೆ ಮಳೆ ಭೀತಿ! ಪಂದ್ಯ ರದ್ದಾದ್ರೆ ಟ್ರೋಫಿ ಯಾರಿಗೆ..?

ಇನ್ನು, ಇಂದು ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಗೆಲ್ಲುವ ತಂಡ ಟ್ರೋಫಿ ಮಾತ್ರವಲ್ಲದೆ ಕೋಟ್ಯಂತರ ರೂ. ಬಹುಮಾನವನ್ನೂ ಗೆಲ್ಲಲಿದೆ. ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಗೆಲ್ಲುವ ತಂಡ 13.03 ಕೋಟಿ ರೂ. ಹಣ ಗೆಲ್ಲಲಿದ್ದರೆ, ರನ್ನರ್‌ ಅಪ್‌ ತಂಡ ಸುಮಾರು 6.5 ಕೋಟಿ ರೂ. ಹಣ ಬಾಚಿಕೊಳ್ಳಲಿದೆ. 

ಇದನ್ನೂ ಓದಿ: T20 World Cup: 1992ರ ವಿಶ್ವಕಪ್‌ ಕ್ಷಣ ಮರುಸೃಷ್ಟಿಸುತ್ತಾ ಪಾಕಿಸ್ತಾನ?

Follow Us:
Download App:
  • android
  • ios