Asianet Suvarna News

ಪಾಕ್‌ನಲ್ಲಿ ಹಿಂದೂ, ಕ್ರಿಶ್ಚಿಯನ್ನರ ಮನೆ ಹೆಣ್ಮಕ್ಕಳನ್ನು ಹೊತ್ತೊಯ್ಯುತ್ತಿದ್ದಾರೆ!

ಪಾಕಿಸ್ತಾನದಲ್ಲಿ ಸುರಕ್ಷಿತರಲ್ಲಿ ಹಿಂದೂ ಹಾಗೂ ಕ್ರಿಶ್ಚಿಯನ್ ಹೆಣಗ್ಮಕ್ಕಳು|  ಹಾಡ ಹಗಲೇ ಯುವತಿಯರ ಹೊತ್ತೊಯ್ದು ಮತಾಂತರ| ಮಾಧ್ಯಮಗಳ ಧ್ವನಿ ಹತ್ತಿಕ್ಕಲು ವ್ಯವಸ್ಥಿತ ಸಂಚು

Report of PHRC reveals pakistan failing grade on human rights hindus are not safe
Author
Bangalore, First Published May 4, 2020, 5:21 PM IST
  • Facebook
  • Twitter
  • Whatsapp

ಇಸ್ಲಮಾಬಾದ್(ಮೇ.04): ಪಾಕಿಸ್ತಾನ ಸಾಮಾನ್ಯವಾಗಿ ಬಹುತೇಕ ಎಲ್ಲಾ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ತನ್ನ ರಾಷ್ಟ್ರದಲ್ಲಿ ಅಲ್ಪಸಂಖ್ಯಾತರ ಮೇಲಾಗುವ ಅದರಲ್ಲೂ ವಿಶೇಷವಾಗಿ ಹಿಂದೂ ಹಾಗೂ ಕ್ರಿಶ್ಚಿಯನ್ನರ ಮೇಲೆ ನಡೆಯುತ್ತಿರುವ ಹಿಂಸೆ ಹಾಗೂ ಬೇಧ ಬಾವದ ಕುರಿತು ತುಟಿ ಬಿಚ್ಚಿವುದಿಲ್ಲ. ಆದರೀಗ ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗದ ವರದಿ ಇಮ್ರಾನ್ ಖಾನ್‌ರವರ ಈ ಎಲ್ಲಾ ಸುಳ್ಳುಗಳನ್ನು ಬಯಲಿಗೆಳೆದಿದೆ. ಈ ವರದಿಯಲ್ಲಿ 2019ರಲ್ಲಿ ಇಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿತ್ತು ಹಾಗೂ ಅಲ್ಪಸಂಖ್ಯಾತರ ಮೇಲೆ ಬಹಳಷ್ಟು ದೌರ್ಜನ್ಯ ಕೂಡಾ ನಡೆದಿದೆ ಎಂದಿದೆ.

'ಈಗಲೇ ನಮ್ಮ ಜಾಗ ಬಿಟ್ಟು ಹೊರಡಿ' ಕುತಂತ್ರಿ ಪಾಕ್‌ಗೆ ಭಾರತ ಕೊನೆ ಸಂದೇಶ

ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ತನ್ನ ವಾರ್ಷಿಕ ವರದಿಯಲ್ಲಿ 2019ರಲ್ಲಿ ಕೊರೋನಾ ವೈರಸ್‌ ಮಹಾಮಾರಿಯಿಂದ ಬಡವರ ಹಾಗೂ ವಿಶೇಷವಾಗಿ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಸಂವಿಧಾನದಲ್ಲಿ ನೀಡಲಾದ ಹಕ್ಕು, ಇಲ್ಲಿ ಹಿಂದೂ ಹಾಗೂ ಕ್ರಿಶ್ಚಿಯನ್ನರಿಗೆ ತಮ್ಮ ಧಾರ್ಮಿಕ ಸ್ವಾತತ್ರ್ಯ ಅನುಭವಿಸಲಾಗುತ್ತಿಲ್ಲ ಎಂದೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಲ್ಪಸಂಖ್ಯಾತ ಸಮುದಾಯದ ಯುವತಿಯರ ಅಪಹರಣ

ಇಷ್ಟೇ ಅಲ್ಲದೇ ಈ ವರದಿಯಲ್ಲಿ ಅನೇಕ ಸಮುದಾಯಗಳಿಗೆ ಅವರ ಧರ್ಮಕ್ಕನುಸಾರವಾಗಿ ಬೇದ ಭಾವ ಮಾಡಲಾಗುತ್ತಿದೆ. ಯುವತಿಯರನ್ನು ಒತ್ತಾಯಪೂರ್ವಕವಾಗಿ ಮತಾಂತರ ಮಾಡಲಾಗುತ್ತದೆ ಹಾಗೂ ಉದ್ಯೋಗದ ವಿಚಾರದಲ್ಲೂ ಬೇದ ಭಾವ ಮಾಡಲಾಗುತ್ತಿದೆ. ಅದರಲ್ಲೂ ವ್ಯಾಪಕವಾಗಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಸದೃಢರಾಗಿರುವವರಿಗೆ ಅವರ ನೋವು ಕೇಳಿಸುತ್ತಿಲ್ಲ ಎಂದಿದೆ.

'ಈಗಲೇ ನಮ್ಮ ಜಾಗ ಬಿಟ್ಟು ಹೊರಡಿ' ಕುತಂತ್ರಿ ಪಾಕ್‌ಗೆ ಭಾರತ ಕೊನೆ ಸಂದೇಶ

ಮಾಧ್ಯಮಗಳಿಗೂ ಕಡಿವಾಣ

ಮಾಧ್ಯಮಗಳ ಧ್ವನಿ ಅಡಗಿಸಲು ವ್ಯವಸ್ಥಿತವಾಗಿ ಕ್ರಮ ಕೈಗೊಳ್ಳಲಾಗಿದ್ದು, ಇವುಗಳ ಸ್ವಾತಂತ್ರ್ಯವನ್ನು ಕಡಿಮೆ ಮಾಡಲಾಘಿದೆ ಎಂದೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

Follow Us:
Download App:
  • android
  • ios