'ಈಗಲೇ ನಮ್ಮ ಜಾಗ ಬಿಟ್ಟು ಹೊರಡಿ' ಕುತಂತ್ರಿ ಪಾಕ್‌ಗೆ ಭಾರತ ಕೊನೆ ಸಂದೇಶ

ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ರವಾನಿಸಿದ ಭಾರತ/ ಆಕ್ರಮಣ ಮಾಡಿಕೊಂಡ ಜಾಗ ಮೊದಲು ಖಾಲಿ ಮಾಡಿ/ ನಮ್ಮ ಜಾಗದಲ್ಲಿ ಚುನಾವಣೆ ನಡೆಸಲು ಹೇಗೆ ಸಾಧ್ಯ? 

Pak Must Immediately Vacate All Illegally Occupied Areas Says MEA

ನವದೆಹಲಿ(ಮೇ 04)  ಕೊರೋನಾ ಲಾಕ್ ಡೌನ್, ಹೋರಾಟದ ನಡುವೆ ಭಾರತ ಪಾಕಿಸ್ತಾನಕ್ಕೆ ಸರಿಯಾದ ಏಟು ನೀಡಿದೆ. ಇಮ್ರಾನ್ ಖಾನ್ ಸರ್ಕಾರಕ್ಕೆ ತಿರುಗೇಟು ನೀಡಿದೆ.  ಆಕ್ರಮಿಸಿಕೊಂಡಿರುವ ಭಾರತದ ಜಾಗ ಖಾಲಿ ಮಾಡಲು ಪಾಕಿಸ್ತಾನಕ್ಕೆ ಸೂಚನೆ ರವಾನಿಸಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯ ಗಿಲ್ಗಿಟ್-ಬಾಲ್ಟಿಸ್ತಾನ್ ಸೇರಿದಂತೆ ಸಂಪೂರ್ಣ ಜಮ್ಮು -ಕಾಶ್ಮೀರ ಹಾಗೂ ಲದ್ದಾಕ್ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಪಾಕಿಸ್ತಾನಕ್ಕೆ ಸೂಚಿಸಲಾಗಿದೆ ಎಂದು ಹೇಳಿದೆ.  ಪಾಕಿಸ್ತಾನ ಈ ಕೂಡಲೆ ಜಾಗ ತೊರೆಯಬೇಕು ಎಂದು ಹೇಳಿದೆ.

ಜಾಧವ್ ರಕ್ಷಣೆಗೆ ಪಾಕಿಸ್ತಾನದೊಂದಿಗೆ ಹಿಂಬಾಗಿಲ ಮಾತುಕತೆ

ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ಪಾಕಿಸ್ತಾನ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ವಿರುದ್ಧ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಗಿಲ್ಗಿಟ್-ಬಾಲ್ಟಿಸ್ತಾನ್ ಸೇರಿದಂತೆ ಇಡೀ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಪಾಕಿಸ್ತಾನವು ಈ ಪ್ರದೇಶಗಳನ್ನು ಬಿಟ್ಟು ಹೊರನಡೆಯಬೇಕು ಎಂದು ಖಾರವಾದ ಉತ್ತರ ನೀಡಲಾಗಿದೆ.

ಪಾಕಿಸ್ತಾನದ ಸುಪ್ರೀಂ ಕೋರ್ಟ್ ತನ್ನ ಇತ್ತೀಚಿನ ಆದೇಶದಲ್ಲಿ, ಈ ಪ್ರದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ಜತೆಗೆ  2018 ರ 'ಗಿಲ್ಗಿಟ್ ಬಾಲ್ಟಿಸ್ತಾನ್ ಸರ್ಕಾರದ ಆದೇಶಕ್ಕೆ ತಿದ್ದುಪಡಿ ತರಲು ಅನುಮತಿ ನೀಡಿತ್ತು. ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿರುವ ಭಾರತ ಭಾರತದ ಜಾಗದ ಮೇಲೆ  ತೀರ್ಮಾನ ನೀಡಲು ಯಾರು ಎಂದು ಪ್ರಶ್ನೆ ಮಾಡಿದೆ

ಈ ಪ್ರದೇಶದಲ್ಲಿ ಪಾಕಿಸ್ತಾನದ ಯಾವ ಹಕ್ಕು ಇರುವುದಿಲ್ಲ, ಸಾರ್ವಭೌಮ ಭಾರತಕ್ಕೆ ಸೇರಿದ ಜಾಗದಲ್ಲಿ ಪಾಕಿಸ್ತಾನ ಕಿತಾಪತಿ ತೋರುವ ಅಗತ್ಯ ಇಲ್ಲ ಎಂದುನ ಖಡಕ್ ಎಚ್ಚರಿಕೆ ರವಾನಿಸಲಾಗಿದೆ. ಚೀನಾ-ಪಾಕಿಸ್ತಾನ್ ಎಕಾನಿಮಿಕ್ ಕಾರಿಡಾರ್ ಹೆಸರಿನಲ್ಲಿ ಚೀನಾ ಸಹ ಕ್ಯಾತೆ ತೆಗೆದಿತ್ತು. ಈಗ ಪಾಕಿಸ್ತಾನ ಚುನಾವಣೆಗೆ ಮುಂದಾಗಲು ಸಿದ್ಧತೆ ಮಾಡಿಕೊಂಡಿದ್ದು ಭಾರತದ ವಿರೋಧಕ್ಕೆ ಕಾರಣ ಆಗಿದೆ. 

Latest Videos
Follow Us:
Download App:
  • android
  • ios