ಕಳೆದ ಮೇ 10ರಂದು ನಡೆದ ಆಪರೇಷನ್ ಸಿಂದೂರದ ವೇಳೆ ಭಾರತೀಯ ವಾಯುಪಡೆಯ ನಿಖರ ದಾಳಿಗೆ ತುತ್ತಾಗಿ ಧ್ವಂಸವಾಗಿದ್ದ ಮುರೀದ್ ವಾಯುನೆಲೆಯ ರಿಪೇರಿಗೆ ಮುಂದಾಗಿದ್ದ ಪಾಕಿಸ್ತಾನದ ಸೇನೆ, ಆ ಯತ್ನದಲ್ಲಿ ವಿಫಲವಾಗಿದೆ. ಹೀಗಾಗಿ ಈವರೆಗೆ ಪುನರ್‌ರ್ಮಿಸಿದ್ದನ್ನೂ ಕೆಡವಿಹಾಕಿರುವುದು ಉಪಗ್ರಹ ಚಿತ್ರಗಳಿಂದ ತಿಳಿದುಬಂದಿದೆ.
ನವದೆಹಲಿ: ಕಳೆದ ಮೇ 10ರಂದು ನಡೆದ ಆಪರೇಷನ್ ಸಿಂದೂರದ ವೇಳೆ ಭಾರತೀಯ ವಾಯುಪಡೆಯ ನಿಖರ ದಾಳಿಗೆ ತುತ್ತಾಗಿ ಧ್ವಂಸವಾಗಿದ್ದ ಮುರೀದ್ ವಾಯುನೆಲೆಯ ರಿಪೇರಿಗೆ ಮುಂದಾಗಿದ್ದ ಪಾಕಿಸ್ತಾನದ ಸೇನೆ, ಆ ಯತ್ನದಲ್ಲಿ ವಿಫಲವಾಗಿದೆ.
ಪುನರ್‌ರ್ಮಿಸಿದ್ದನ್ನೂ ಕೆಡವಿಹಾಕಿರುವುದು ಉಪಗ್ರಹ ಚಿತ್ರ
ಹೀಗಾಗಿ ಈವರೆಗೆ ಪುನರ್‌ರ್ಮಿಸಿದ್ದನ್ನೂ ಕೆಡವಿಹಾಕಿರುವುದು ಉಪಗ್ರಹ ಚಿತ್ರಗಳಿಂದ ತಿಳಿದುಬಂದಿದೆ. ಮಾನವರಹಿತ ವೈಮಾನಿಕ ವಾಹನಗಳನ್ನು(ಯುಎವಿ) ನಿಯಂತ್ರಿಸುವ ಕೇಂದ್ರವಾಗಿದ್ದ ಈ ಕಟ್ಟಡ ಛಾವಣಿ ಛಿದ್ರವಾಗಿ 3 ಮೀ. ಕುಳಿ ನಿರ್ಮಾಣವಾಗಿತ್ತು.
ಸ್ಫೋಟಕವು ಒಳನುಗ್ಗಿ ಸ್ಫೋಟಿಸಿ ಎಲ್ಲವನ್ನೂ ನಾಶ
ಸ್ಫೋಟಕವು ಒಳನುಗ್ಗಿ ಸ್ಫೋಟಿಸಿ ಎಲ್ಲವನ್ನೂ ನಾಶ ಮಾಡಿದ್ದ ಶಂಕೆಯೂ ಇತ್ತು. ಈ ಘಟನೆಯ 3 ವಾರಗಳ ಬಳಿಕ ಪಾಕ್ ಸೇನೆ ಆ ಕಟ್ಟಡವನ್ನು ಸಂಪೂರ್ಣವಾಗಿ ಟಾರ್ಪಲಿನ್‌ನಿಂದ ಮುಚ್ಚಿ ಪುನರ್‌ನಿರ್ಮಾಣ ಆರಂಭಿಸಿತ್ತು ಎಂಬುದು ಸ್ಯಾಟಲೈಟ್ ಚಿತ್ರಗಳಲ್ಲಿ ಕಂಡಿತ್ತು. ಆದರೆ ಫೆ.28ರ ಚಿತ್ರದಲ್ಲಿ ಆ ಪರದೆಯನ್ನು ಸರಿಸಲಾಗಿದ್ದು, ನಿರ್ಮಾಣ ಕಾರ್ಯಗಳನ್ನು ನಿಲ್ಲಿಸಲಾಗಿದೆ. ಅಂತೆಯೇ, ಇಷ್ಟು ತಿಂಗಳುಗಳ ಕಾಲ ಕಟ್ಟಿದ್ದನ್ನು ಕೂಡ ನೆಲಸಮಗೊಳಿಸಿರುವುದನ್ನು ಕಾಣಬಹುದು.
ಇದರೊಂದಿಗೆ, ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಹಾಳಾದ ನೆಲೆಗಳ ಮರುನಿರ್ಮಾಣಕ್ಕೆ ಮುಂದಾಗಿದ್ದ ಪಾಕ್ ಕೊನೆಗೂ ಸೋಲೊಪ್ಪಿಕೊಂಡಂತಾಗಿದೆ.


