ಕ್ಯಾಮೆರಾದಲ್ಲಿ ಸೆರೆಯಾಯ್ತು ಜಗತ್ತಿನೊಂದಿಗೆ ಸಂಪರ್ಕವೇ ಇಲ್ಲದ ಅತೀ ದೊಡ್ಡ ಬುಡಕಟ್ಟು ಸಮುದಾಯ!

ಪೆರು ಅಮೆಜಾನ್‌ ಕಾಡಿನಲ್ಲಿ ನಾಗರಿಕ ಜನಸಮೂಹದೊಂದಿಗೆ ಸಂಪರ್ಕವಿಲ್ಲದ ಮ್ಯಾಶ್ಕೊ ಪಿರೋ ಎಂದು ಕರೆಯಲ್ಪಡುವ ಬುಡಕಟ್ಟು ಸಮುದಾಯ ಅಪರೂಪಕ್ಕೆ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡಿದ್ದು, ಅವರ ಫೋಟೋ ವೀಡಿಯೋಗಳನ್ನು ಸರ್ವೈವಲ್ ಇಂಟರ್‌ನ್ಯಾಷನಲ್ ಬಿಡುಗಡೆ ಮಾಡಿದೆ.

Rarely seen worlds largest isolated tribal community Mashco Piro caught on camera at first time in peru akb

ಪ್ರಪಂಚದ ಅತಿ ದೊಡ್ಡ ಪ್ರತ್ಯೇಕವಾಗಿ ವಾಸ ಮಾಡುವ ಬುಡಕಟ್ಟು ಸಮುದಾಯವೂ ಅಪರೂಪವಾಗಿ ಕಾಣಿಸಿಕೊಂಡಿದ್ದು, ಕ್ಯಾಮರಾ ಕಣ್ಣಲ್ಲಿ ಸೆರೆ ಆಗಿದ್ದಾರೆ. ಪೆರು ಅಮೆಜಾನ್‌ ಕಾಡಿನಲ್ಲಿ ನಾಗರಿಕ ಜನಸಮೂಹದೊಂದಿಗೆ ಸಂಪರ್ಕವಿಲ್ಲದ ಮ್ಯಾಶ್ಕೊ ಪಿರೋ ಎಂದು ಕರೆಯಲ್ಪಡುವ ಬುಡಕಟ್ಟು ಸಮುದಾಯ ಅಪರೂಪಕ್ಕೆ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡಿದ್ದು, ಅವರ ಫೋಟೋ ವೀಡಿಯೋಗಳನ್ನು ಸರ್ವೈವಲ್ ಇಂಟರ್‌ನ್ಯಾಷನಲ್ ಬಿಡುಗಡೆ ಮಾಡಿದೆ.

ಮಾಸ್ಕೋ ಪಿರೋ ಎಂದು ಕರೆಯಲ್ಪಡುವ ಇವರು ತಮ್ಮದೇ ಪ್ರತ್ಯೇಕವೆನಿಸಿದ ಪ್ರದೇಶದಿಂದ ಹೊರಬಂದಂತೆ ಕಾಣುತ್ತಿದ್ದು,  ನಾಗರಿಕ ಜಗತ್ತಿನೊಂದಿಗೆ ಸಂಪರ್ಕವೇ ಇಲ್ಲದ ಈ ಸಮುದಾಯ ಮೊತ್ತ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದೆ.  ಪೆರುವಿನ ಅಮೇಜಾನ್ ಕಾಡುಗಳಲ್ಲಿ ಈ ಸಮುದಾಯ ಪ್ರತ್ಯೇಕವಾಗಿ ವಾಸ ಮಾಡುತ್ತದೆ. ವೀಡಿಯೋದಲ್ಲಿ ಕಾಣಿಸುವಂತೆ ಈ ಸಮುದಾಯದ ನೂರಾರು ಜನ ನದಿ ತೀರದಲ್ಲಿ ವಿರಮಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. 

ಮ್ಯಾಶ್ಕೊ ಪಿರೋ ಸಮುದಾಯದ ಯೋಗಕ್ಷೇಮದ ಬಗ್ಗೆ ಹೆಚ್ಚುತ್ತಿರುವ ಕಾಳಜಿಯ ಮಧ್ಯೆ ಈ ದೃಶ್ಯವೂ ಕಾಣಿಸಿಕೊಂಡಿದೆ. ಸ್ಥಳೀಯ ಮೂಲ ನಿವಾಸಿಗಳ ಹಕ್ಕುಗಳ ಗುಂಪಾಗಿರುವ ಫೆನಾಮಡ್ ಪ್ರಕಾರ, ಈ ಪ್ರದೇಶದಲ್ಲಿ ನಡೆಯುತ್ತಿರುವ ಕೆಲವು ನಾಗರಿಕ ಚಟುವಟಿಕೆಗಳು ಈ ಬುಡಕಟ್ಟು ಸಮುದಾಯವನ್ನು ಅವರ ಸಂಪ್ರದಾಯಿಕ ನೆಲದಿಂದ ಹೊರತಳ್ಳುತ್ತಿದೆ. ಮ್ಯಾಶ್ಕೊ ಪಿರೋ ಸಮುದಾಯ ಆಹಾರ ಮತ್ತು ಸುರಕ್ಷಿತ ಆಶ್ರಯದ ಹುಡುಕಾಟದಲ್ಲಿ ನಾಗರಿಕ ಸಮುದಾಯದ ವಾಸಸ್ಥಳಕ್ಕೆ ಹತ್ತಿರವಾಗುತ್ತಿದ್ದಾರೆ.

ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಆದಿವಾಸಿಗಳ ಸಂಚಾರಕ್ಕೆ ಅಡ್ಡಿ ಆರೋಪ, ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ

ಅಂದಹಾಗೆ ಈ ಅಪರೂಪದ ಫೋಟೋವನ್ನು ಕಳೆದ ಜೂನ್ ಅಂತ್ಯದಲ್ಲಿ ಬ್ರೆಜಿಲ್‌ನ ಗಡಿಯಲ್ಲಿರುವ ಆಗ್ನೇಯ ಪೆರುವಿನ ಪ್ರಾಂತ್ಯವಾದ ಮ್ಯಾಡ್ರೆ ಡಿ ಡಿಯೋಸ್‌ನ ನದಿ ತೀರದ ಬಳಿ ತೆಗೆಯಲಾಗಿದೆ ಎಂದು ಸರ್ವೈವಲ್ ಇಂಟರ್‌ನ್ಯಾಶನಲ್ ವರದಿ ಮಾಡಿದೆ. ಈ ನಂಬಲು ಸಾಧ್ಯವಾಗದ ಫೋಟೋದಲ್ಲಿ ಕಾಣಿಸುವಂತೆ ಪ್ರತ್ಯೇಕವಾಗಿರುವ ಈ ಮ್ಯಾಶ್ಕೊ ಪಿರೋ ಬುಡಕಟ್ಟು ಸಮುದಾಯವೂ ಮರಕಟುಕರು ಕಾರ್ಯಾಚರಣೆ ಮಾಡುವ ಸ್ಥಳದಿಂದ  ಕಿಲೋ ಮೀಟರ್‌ ದೂರದಲ್ಲಿ ಇರುವಂತೆ ಕಾಣಿಸುತ್ತಿದೆ ಎಂದು ಸರ್ವೈವಸ್‌ ಇಂಟರ್‌ನ್ಯಾಷನಲ್‌ನ ನಿರ್ದೇಶಕಿ ಕ್ಯಾರೊಲಿನ್ ಪಿಯರ್ಸ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ಯಿನ್ ಜನರು ಮೊಂಟೆ ಸಲ್ವಾಡೊ ಎಂದು ಕರೆಯುವ ಹಳ್ಳಿಯ ಬಳಿ 50ಕ್ಕೂ ಹೆಚ್ಚು ಮ್ಯಾಶ್ಕೊ ಪಿರೋ ಜನರು ಕಾಣಿಸಿಕೊಂಡಿದ್ದರು, ಇದರ ಜೊತೆಗೆ 17 ಜನರ ಮತ್ತೊಂದು ಗುಂಪು ಪೋರ್ಟೊ ನ್ಯೂವೊ ಎಂಬ ಹಳ್ಳಿಯಲ್ಲಿ ಕಾಣಿಸಿಕೊಂಡಿತ್ತು ಎಂದು ಸ್ಥಳೀಯ ಹಕ್ಕುಗಳನ್ನು ರಕ್ಷಿಸುವ ಎನ್‌ಜಿಒವೊಂದು ಹೇಳಿದೆ. ಅಪರೂಪವಾಗಿ ಕಾಣಿಸಿಕೊಳ್ಳುವ ಈ ಸಮುದಾಯ ಯಾರೊಂದಿಗೂ ಹೆಚ್ಚಾಗಿ ಸಂವಹನ ನಡೆಸುವುದಿಲ್ಲ ಎಂದು ಸರ್ವೈವಲ್ ಇಂಟರ್‌ನ್ಯಾಷನಲ್ ಹೇಳಿದೆ. 

ಕೊಡಗು: ಬಿದಿರಿನ ತಡಿಕೆ ಪ್ಲಾಸ್ಟಿಕ್ ಹೊದಿಕೆಯ ಜೋಡಿಯಲ್ಲಿ ನಡೆಯುತ್ತಿದೆ ಆದಿವಾಸಿ ಬುಡಕಟ್ಟು ಜನರ ಬದುಕು!

ಮ್ಯಾಶ್ಕೊ ಪಿರೋ ಜನರು ವಾಸ ಮಾಡುವ ಈ ಸ್ಥಳದಲ್ಲಿ ಹಲವು ಮರ ಕಡಿಯುವ ಕಂಪನಿಗಳು ಮರ ಕಡಿಯುವ ವಿಚಾರದಲ್ಲಿ ರಿಯಾಯಿತಿಗಳನ್ನು ಹೊಂದಿವೆ. ಕ್ಯಾನಲ್ಸ್ ತಹುಮನು ಎಂಬ ಟಿಂಬರ್ ಸಂಸ್ಥೆಯೊಂದು ಈ ಪ್ರದೇಶದಲ್ಲಿ ಮರ ಕಡಿದು ಮರಗಳನ್ನು ಟ್ರಕ್ ಮೂಲಕ ಸಾಗಿಸಲು 200 ಕಿಲೋ ಮೀಟರ್‌ಗೂ ಅಧಿಕ ದೂರ ರಸ್ತೆಗಳನ್ನು ನಿರ್ಮಿಸಿತ್ತು. ಈ ಮರ ಕಡಿಯುವ ಕಂಪನಿಯು ಫಾರೆಸ್ಟ್ ಸ್ಟೀವರ್ಡ್‌ಶಿಪ್ ಕೌನ್ಸಿಲ್‌ನಿಂದ ಅನುಮತಿಯನ್ನು ಹೊಂದಿದ್ದು, ಅದರ ಪ್ರಕಾರ ಈ ಸಂಸ್ಥೆ ಮ್ಯಾಡ್ರೆ ಡಿ ಡಿಯೋಸ್‌ನಲ್ಲಿ 53,000 ಹೆಕ್ಟೇರ್ ಕಾಡನ್ನು ಹೊಂದಿದ್ದು, ಸೀಡರ್ ಹಾಗೂ ಮಹೋಗನಿ ಮರಗಳನ್ನು ಕಡಿಯುವುದಕ್ಕೆ ಅನುಮತಿ ಹೊಂದಿದೆ. 

ಜೂನ್ 28ರಂದು ಈ ಮ್ಯಾಶೋ ಪಿರೋ ಸಮುದಾಯವು  ಲ್ಯಾಸ್ ಪೈಡ್ರಸ್‌ನಲ್ಲಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ನಿವಾಸಿಗಳು ವರದಿ ಮಾಡಿದ್ದಾರೆ ಎಂದು ಪೆರು ಸರ್ಕಾರ ಹೇಳಿದೆ. ಈ ಸಮುದಾಯವೂ ಬ್ರೆಜಿಲ್ ಗಡಿಯುದ್ದಕ್ಕೂ ಕಾಣಿಸುತ್ತವೆ. ಪೆರುವಿಯನ್‌ ಸ್ಥಳಗಳಲ್ಲಿ ಮರ ಕಡಿಯುವವರ ಹಾವಳಿಯಿಂದಾಗಿ ಅವರು ತಮ್ಮ ಮೂಲ ನಿವಾಸಗಳನ್ನು ಬಿಟ್ಟು ಓಡುತ್ತಿದ್ದಾರೆ. ವರ್ಷದ ಈ ಸಮಯದಲ್ಲಿ ಅವರು ಅಮೆಜಾನ್ ಆಮೆಗಳ ಮೊಟ್ಟೆಯನ್ನು ತೆಗೆದುಕೊಳ್ಳುವುದಕ್ಕಾಗಿ ಅವರು ಬೀಚ್‌ ಬದಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಹೆಜ್ಜೆ ಗುರುತುಗಳನ್ನು ಬೀಚ್‌ನ ಮರಳುಗಳ ಮೇಲೆ ನಾವು ಕಾಣಬಹುದು. ಪ್ರಸ್ತುತ ಅವರು ನೆಮ್ಮದಿ ವಿಶ್ರಾಂತಿ ಇಲ್ಲದ ಜನರಾಗಿದ್ದು, ಯಾವಾಗಲೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತಲೇ ಇರುತ್ತಾರೆ ಎಂದು ರೋಸಾ ಪಡಿಲ್ಹಾ ಎಂಬುವವರು ಹೇಳಿದ್ದಾರೆ. 
 

 

Latest Videos
Follow Us:
Download App:
  • android
  • ios