ಶ್ರೀಲಂಕಾದ ಸಂಸದೀಯ ಚುನಾವಣೆಯಲ್ಲಿ ಬಲಿಷ್ಠ ರಾಜಪಕ್ಷೆ ಸಹೋದರರು ಜಯ ಗಳಿಸಿದ್ದಾರೆ. ಚುನಾವಣೆಯ ಅಂತಿಮ ಫಲಿತಾಂಶದ ಪ್ರಕಾರ ರಾಜಪಕ್ಷೆ ಸಹೋದರರು ಗೆಲುವಿನ ನಗು ಬೀರಿದ್ದಾರೆ.

ಶ್ರೀಲಂಕಾ ಪ್ರಧಾನಿ ಮಹೀಂದ್ರ ರಾಜಪಕ್ಷೆ ಅವರ ಶ್ರೀಲಂಕಾ ಪೊದುಜನ ಪಾರ್ಟಿ 145 ಸ್ಥಾನಗಳನ್ನು ಗೆದ್ದಿದ್ದು, 225 ಸ್ಥಾನಗಳಲ್ಲಿ  ಕೆಲವರು ಎಸ್‌ಎಲ್‌ಪಿಪಿ ಜೊತೆ ಮೈತ್ರಿ ಮಾಡಲಿದ್ದಾರೆ ಎಂಬುದು ತಿಳಿದು ಬಂದಿದೆ.

ಗರ್ಭದಲ್ಲೇ 'ನೇಣು' ಬಿಗಿದುಕೊಂಡ ಕಂದ, ವೈದ್ಯರು ಹೀಗೆ ಹೊರಗೆಳೆದರು!

ಪಕ್ಷದ ಪ್ರಮುಖ ಎದುರಾಳಿ ಕೇವಲ 54 ಸ್ಥಾನಗಳನ್ನು ಗಳಿಸಿದ್ದು, ಶ್ರೀಲಂಕಾದ ಶೇ.75 ಜನ ಮತ ಚಲಾಯಿಸಿದ್ದಾರೆ. ಪ್ರಧಾನಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಅಧ್ಯಕ್ಷ ಗೊಟಬಯಾ ರಾಜಪಕ್ಷೆ ಹಾಗೂ ಈಗ ಸಿಕ್ಕಿರುವ ಬಹುಮತದ ಗೆಲುವಿನಿಂದ ಸಂವಿಧಾನ ಬದಲಿಸಿ, ರಾಜವಂಶದ ಆಡಳಿತ ಮುಂದುವರಿಯುವ ಸಾಧ್ಯತೆ ಇದೆ.

ಶ್ರೀಲಂಕಾ ಪೀಪಲ್ ಫ್ರಂಟ್ ಮತ್ತೊಮ್ಮೆ ಗೆಲುವು ಸಾಧಿಸಲಿದೆ ಎಂದು ಗೊಟಬಯಾ ಪಕ್ಷ ಟ್ವೀಟ್ ಮೂಲಕ ತಿಳಿಸಿದ್ದಾರೆ. ನನ್ನ 'ಸಮೃದ್ಧಿಯ ದೃಷ್ಟಿಕೋನದ ನೀತಿಯ ಅನುಷ್ಠಾನಕ್ಕೆ ಅನುವು ಮಾಡಿಕೊಡುವ ಸಂಸತ್ತನ್ನು ಹೊಂದುವ ನಿರೀಕ್ಷೆ ಇದೆ. ನಾಳೆ ಈ ನಿರೀಕ್ಷೆ ವಾಸ್ತವವಾಗಲಿದೆ ಎಂಬ ನಂಬಿಕೆಯಿದೆ ಎಂದು ಟ್ವೀಟ್ ಮಾಡಿದ್ದಾರೆ.

ಲೆಕ್ಕ ತಂದಿಟ್ಟ ಆತಂಕ; ಪ್ರತಿ 15 ಸೆಕೆಂಡಿಗೆ ಒಬ್ಬರು ಕೊರೋನಾಕ್ಕೆ ಬಲಿ!

ಇದೀಗ ರಾಜಪಕ್ಷ ಸಹೋದರರು ತಮಿಳು ಪ್ರತ್ಯೇಕತಾವಾದಿಗಳನ್ನು ಇನ್ನಷ್ಟು ಮಟ್ಟಹಾಕಲಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿವೆ. ವಿರೋಧ ಪಕ್ಷ ಆಡಳೀತ ಪಕ್ಷ ಭ್ರಷ್ಟ ಎಂದೂ ಆರೋಪಿಸಿದೆ.