Asianet Suvarna News Asianet Suvarna News

ಪುರಿ ಜಗನ್ನಾಥನಿಗೆ ಸೇರಿದ್ದು ಕೊಹಿನೂರ್‌ ವಜ್ರ, ಮರಳಿಸುವಂತೆ ಒಡಿಶಾ ಸಂಸ್ಥೆ ಆಗ್ರಹ!

12ನೇ ಶತಮಾನದ ದೇಗುಲಕ್ಕೆ ಕೊಹಿನೂರ್ ವಜ್ರವನ್ನು ಮರಳಿ ತರುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಪುರಿ ಮೂಲದ ಶ್ರೀ ಜಗನ್ನಾಥ ಸೇನೆಯು ರಾಷ್ಟ್ರಪತಿಗಳಿಗೆ ಪತ್ರದ ಮೂಲಕ ಮನವಿ ಮಾಡಿದೆ.

Kohinoor Diamond Belongs To Lord Jagannath Shree Jagannath Sena Claims Seeks Its Return san
Author
First Published Sep 13, 2022, 6:10 PM IST

ಭುವನೇಶ್ವರ (ಸೆ.13): ಬ್ರಿಟನ್‌ನ ರಾಜಮನತೆನದ ಮುಖ್ಯಸ್ಥರು ಧರಿಸುವ ದಿ ಕ್ರೌನ್‌ ಕಿರೀಟದಲ್ಲಿರುವ ಕೊಹಿನೂರ್‌ ವಜ್ರವು, ಒಡಿಶಾದ ಪುರಿ ಜಗನ್ನಾಥನಿಗೆ ಸೇರಿದ್ದು ಎಂದು ಒಡಿಶಾ ಮೂಲಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ಹೇಳಿದೆ. ಈ ವಜ್ರವನ್ನು ಯುನೈಟೆಡ್‌ ಕಿಂಗ್‌ಡಮ್‌ನಿಂದ ಪುರಿ ದೇವಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಮುಖೇನ ಮನವಿಯನ್ನೂ ಸಲ್ಲಿಸಲಾಗಿದೆ. ರಾಣಿ ಎಲಿಜಬೆತ್ II ರ ಮರಣದ ನಂತರ, ಆಕೆಯ ಮಗ ಪ್ರಿನ್ಸ್ ಚಾರ್ಲ್ಸ್ ಬ್ರಿಟನ್‌ ದೇಶದ ರಾಜರಾಗಿದ್ದಾರೆ. ಈಗ ನಿಯಮಗಳ ಪ್ರಕಾರ, 105 ಕ್ಯಾರೆಟ್ ವಜ್ರವು ಅವರ ಪತ್ನಿಯಾದ ಡಚಸ್‌ ಆಫ್‌ ಕಾರ್ನ್‌ವಾಲ್ ಕ್ಯಾಮಿಲ್ಲಾ ಅವರಿಗೆ ಹೋಗುತ್ತದೆ. 12ನೇ ಶತಮಾನದ ದೇಗುಲಕ್ಕೆ ಕೊಹಿನೂರ್ ವಜ್ರವನ್ನು ಮರಳಿ ತರುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಪುರಿ ಮೂಲದ ಜಗನ್ನಾಥ ಸೇನೆಯು ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದೆ."ಕೊಹಿನೂರ್ ವಜ್ರವು ಜಗನ್ನಾಥ ಭಗವಾನ್‌ ಅವರದ್ದು. ಅದು ಈಗ ಇಂಗ್ಲೆಂಡ್ ರಾಣಿ ಬಳಿ ಇದೆ. ಮಹಾರಾಜ ರಂಜಿತ್ ಸಿಂಗ್ ಅವರು ತಮ್ಮ ಇಚ್ಛೆಯ ಮೇರೆಗೆ ಅದನ್ನು ಜಗನ್ನಾಥ ದೇವರಿಗೆ ದಾನ ಮಾಡಿದ್ದರು. ಅದನ್ನು ಭಾರತಕ್ಕೆ ತರಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಮ್ಮ ಪ್ರಧಾನಿಯನ್ನು ದಯವಿಟ್ಟು ವಿನಂತಿಸಿ, ಸೇನೆ ಸಂಚಾಲಕಿ ಪ್ರಿಯಾ ದರ್ಶನ್ ಪಟ್ನಾಯಕ್ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಿಯಾ ದರ್ಶನ್ ಪಟ್ನಾಯಕ್ ಅವರು ಪಂಜಾಬ್‌ನ ಮಹಾರಾಜ ರಂಜಿತ್ ಸಿಂಗ್ ಅವರು ಅಫ್ಘಾನಿಸ್ತಾನದ ನಾದಿರ್ ಶಾ ವಿರುದ್ಧದ ಯುದ್ಧದಲ್ಲಿ ಗೆದ್ದ ನಂತರ ಪುರಿ ಭಗವಂತನಿಗೆ ವಜ್ರವನ್ನು ದಾನ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಇದನ್ನು ತಕ್ಷಣವೇ ಹಸ್ತಾಂತರ ಮಾಡಿಲ್ಲ. ರಣಜಿತ್ ಸಿಂಗ್ 1839 ರಲ್ಲಿ ನಿಧನರಾದರು ಮತ್ತು 10 ವರ್ಷಗಳ ನಂತರ, ಬ್ರಿಟಿಷರು ಕೊಹಿನೂರ್ ಅನ್ನು ಅವರ ಮಗ ದುಲೀಪ್ ಸಿಂಗ್‌ನಿಂದ ಕಿತ್ತುಕೊಂಡರು. ಆದರೆ ಅದು ಪುರಿಯಲ್ಲಿ ಜಗನ್ನಾಥ ದೇವರಿಗೆ ನೀಡಿದ ವಜ್ರವಾಗಿತ್ತು ಎನ್ನುವುದು ಇಂಗ್ಲೀಷರಿಗೆ ಮೊದಲೇ ತಿಳಿದಿತ್ತು ಎಂದು ಇತಿಹಾಸಕಾರ ಮತ್ತು ಸಂಶೋಧಕ ಅನಿಲ್ ಧೀರ್ ಪಿಟಿಐಗೆ ತಿಳಿಸಿದರು.

ಪ್ರಿಯಾ ದರ್ಶನ್ ಪಟ್ನಾಯಕ್ ಅವರು ಈ ಬಗ್ಗೆ ರಾಣಿಗೆ ಪತ್ರವನ್ನು ಕಳುಹಿಸಿದ ನಂತರ, 2016 ಅಕ್ಟೋಬರ್ 19 ರಂದು ಬಂಕಿಂಗ್‌ಹ್ಯಾಮ್ ಅರಮನೆಯಿಂದ ಈ ಕುರಿತಾಗಿ ಸಂವಹನವನ್ನು ಸ್ವೀಕರಿಸಿದ್ದೇವೆ ಎಂದು ತಿಳಿಸಿದ್ದಾರೆ. ಯುನೈಟೆಡ್ ಕಿಂಗ್‌ಡಮ್ ಸರ್ಕಾರಕ್ಕೆ ನೇರವಾಗಿ ಮನವಿ ಮಾಡುವಂತೆ ಅದರಲ್ಲಿ ಅರಮನೆ ತಿಳಿಸಿತ್ತು "ರಾಣಿ, ಸರ್ಕಾರದ ಸಲಹೆಯ ಮೇರೆಗೆ ಕಾರ್ಯನಿರ್ವಹಿಸುತ್ತಾರೆ. ಮಂತ್ರಿಗಳು ಮತ್ತು ಎಲ್ಲಾ ಸಮಯದಲ್ಲೂ ಕಟ್ಟುನಿಟ್ಟಾಗಿ ರಾಜಕೀಯೇತರವಾಗಿ ಉಳಿಯುತ್ತಾರೆ" ಎಂದು ತಿಳಿಸಿದ್ದರು.

14 ದೇಶ ಆಳಿದ ಬ್ರಿಟನ್ ರಾಣಿ ಎಲಿಜಬೆತ್ ಇನ್ನಿಲ್ಲ, ಮರಳಿ ಸಿಗುತ್ತಾ ಭಾರತದಿಂದ ದೋಚಿದ ಕೊಹಿನೂರ್ ವಜ್ರ?

ಬಂಕಿಂಗ್‌ಹ್ಯಾಂ ಅರಮನೆಯಿಂದ (Buckingham Palace ) ಬಂದ ಸಂವಹನದ ಪತ್ರವನ್ನೂ ರಾಷ್ಟ್ರಪತಿಗೆ (President) ಬರೆದ ಪತ್ರದಲ್ಲಿ ಲಗತ್ತಿಸಲಾಗಿದೆ. ಆರು ವರ್ಷಗಳಿಂದ ಈ ವಿಷಯದ ಬಗ್ಗೆ ಏಕೆ ಮೌನವಾಗಿದ್ದೀರಿ ಎಂದು ಕೇಳಿದಾಗ, ಪ್ರಿಯಾ ದರ್ಶನ್ ಪಟ್ನಾಯಕ್ (Priya Darsan Pattnaik) ಅವರು ಇಂಗ್ಲೆಂಡ್‌ಗೆ (England) ಭೇಟಿ ನೀಡಲು ವೀಸಾ ನಿರಾಕರಿಸಲಾಗಿದೆ, ಇದರಿಂದಾಗಿ ಯುಕೆ ಸರ್ಕಾರದೊಂದಿಗೆ ವಿಷಯವನ್ನು ಮುಂದುವರಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು. ಮಹಾರಾಜ ರಂಜಿತ್ ಸಿಂಗ್ (Maharaja Ranjit Singh) ಅವರ ಉತ್ತರಾಧಿಕಾರಿಗಳು, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಂತಹ ಹಲವಾರು ಹಕ್ಕುದಾರರಿದ್ದರೂ ಸೇನೆಯ ಹಕ್ಕು ಸಮರ್ಥನೀಯವಾಗಿದೆ ಎಂದು ಧೀರ್ ಹೇಳಿದರು.

ನಮ್ಮ ಕೊಹಿನೂರ್ ವಜ್ರ ಮರಳಿಸಿ: ರಾಣಿ ಅಗಲಿದ ಬಳಿಕ ಟ್ವಿಟ್ಟರ್‌ನಲ್ಲಿ ಭಾರತೀಯರ ಆಗ್ರಹ

"ಮಹಾರಾಜ ರಂಜಿತ್ ಸಿಂಗ್ ಅವರ ಮರಣದ ಮೊದಲು ಉಯಿಲಿನಲ್ಲಿ ಅವರು ಜಗನ್ನಾಥ  (Lord Jagannath) ದೇವರಿಗೆ ಕೊಹಿನೂರ್ ಅನ್ನು ದಾನ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ದಾಖಲೆಯನ್ನು ಬ್ರಿಟಿಷ್ ಸೇನಾ ಅಧಿಕಾರಿ ಪ್ರಮಾಣೀಕರಿಸಿದ್ದಾರೆ, ಅದರ ಪುರಾವೆ ದೆಹಲಿಯ ರಾಷ್ಟ್ರೀಯ ದಾಖಲೆಗಳಲ್ಲಿ ಲಭ್ಯವಿದೆ" ಎಂದು ಇತಿಹಾಸಕಾರರು ಹೇಳಿದ್ದಾರೆ. ಒಡಿಶಾದ ಆಡಳಿತಾರೂಢ ಬಿಜು ಜನತಾ ದಳ (ಬಿಜೆಡಿ) ಸಂಸದ (ಎಂಪಿ) ಭೂಪಿಂದರ್ ಸಿಂಗ್ ಅವರು ವಜ್ರವನ್ನು ಮರಳಿ ತರುವ ವಿಷಯವನ್ನು 2016 ರಲ್ಲಿ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದರು.

Follow Us:
Download App:
  • android
  • ios