ಚೀನಾದ ವಿದೇಶಾಂಗ ಸಚಿವ ಹಾಗೂ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರ ಆಪ್ತ ಕ್ವಿನ್‌ ಗಾಂಗ್‌ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದ್ದು, ಸಚಿವ ಕ್ವಿನ್‌ ನಾಪತ್ತೆಯಾಗಿದ್ದಾರಾ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬೀಜಿಂಗ್‌ (ಜುಲೈ 19, 2023): ಕಳೆದ ಕೆಲ ದಿನಗಳಿಂದ ಚೀನಾದ ವಿದೇಶಾಂಗ ಸಚಿವ ಹಾಗೂ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರ ಆಪ್ತ ಕ್ವಿನ್‌ ಗಾಂಗ್‌ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದ್ದು, ಸಚಿವ ಕ್ವಿನ್‌ ನಾಪತ್ತೆಯಾಗಿದ್ದಾರಾ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕಳೆದ ಮೂರು ವಾರಗಳಿಂದ 57 ವರ್ಷದ ಕ್ವಿನ್‌ ಎಲ್ಲಿಯೂ ಉಪಸ್ಥಿತರಿದ್ದುದು ಕಂಡುಬಂದಿಲ್ಲ. ಆದರೆ ಕೆಲ ಆರೋಗ್ಯ ಸಮಸ್ಯೆಯ ಕಾರಣಗಳಿಂದ ಕ್ವಿನ್‌ ಕಾಣಿಸಿಕೊಂಡಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ವಿರುದ್ಧ ವ್ಯಾಗ್ನರ್‌ ಪಡೆ ದಂಗೆಯೆದ್ದ ಬಳಿಕ ಜೂ.25 ರಂದು ಬೀಜಿಂಗ್‌ನಲ್ಲಿ ಶ್ರೀಲಂಕಾ, ವಿಯೆಟ್ನಾಂ ಮತ್ತು ರಷ್ಯಾಗಳು ನಡೆಸಿದ ಸಭೆಯಲ್ಲಿ ಕೊನೆಯದಾಗಿ ಕ್ವಿನ್‌ ಕಾಣಿಸಿಕೊಂಡಿದ್ದರು.

ಇದನ್ನು ಓದಿ: ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರು ನಾಮಕರಣ ಮಾಡಿದ ಚೀನಾ: ಮತ್ತೆ ನರಿ ಬುದ್ಧಿ ಪ್ರದರ್ಶಿಸಿದ ಜಿನ್‌ಪಿಂಗ್

ಚೀನಾ ರಾಜಕಾರಣಿಗಳು ನಾಪತ್ತೆ ಆಗುವುದು ಮೊದಲೇನಲ್ಲ. ಈ ಹಿಂದೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಕೂಡ ಹಲವು ದಿನಗಳ ಕಾಲ ಬಹಿರಂಗವಾಗಿ ಕಾಣಿಸಿಕೊಳ್ಳದೇ ಊಹಾಪೋಹ ಸೃಷ್ಟಿಯಾಗಿದ್ದವು.

ಇದನ್ನೂ ಓದಿ: ಮೋದಿ ನೇತೃತ್ವದಲ್ಲಿ ಇಂದು ಎಸ್‌ಸಿಒ ಸಭೆ: ಪುಟಿನ್‌, ಜಿನ್‌ಪಿಂಗ್‌, ಷರೀಫ್‌ ಸೇರಿ ಹಲವರು ಭಾಗಿ