ಮೋದಿ ನೇತೃತ್ವದಲ್ಲಿ ಇಂದು ಎಸ್‌ಸಿಒ ಸಭೆ: ಪುಟಿನ್‌, ಜಿನ್‌ಪಿಂಗ್‌, ಷರೀಫ್‌ ಸೇರಿ ಹಲವರು ಭಾಗಿ

ರಷ್ಯಾದಲ್ಲಿ ನಡೆದ ದಂಗೆಯ ಬಳಿಕ ಇದೇ ಮೊದಲ ಬಾರಿಗೆ ಪುಟಿನ್‌ ಸಭೆಯೊಂದರಲ್ಲಿ ಭಾಗಿಯಾಗುತ್ತಿದ್ದಾರೆ. ಈ ಸಭೆಯಲ್ಲಿ ಅಷ್ಘಾನಿಸ್ತಾನದಲ್ಲಿನ ಪರಿಸ್ಥಿತಿ, ಉಕ್ರೇನ್‌ ಯುದ್ಧ, ಸದಸ್ಯ ರಾಷ್ಟ್ರಗಳ ನಡುವಿನ ಸಂಪರ್ಕ, ವ್ಯಾಪಾರ ವೃದ್ಧಿ, ಪೂರ್ವ ಲಡಾಖ್‌ನಲ್ಲಿ ಚೀನಾದ ಉಪಟಳ ಮುಂತಾದ ವಿಷಯಗಳ ಕುರಿತಾಗಿ ಚರ್ಚೆ ನಡೆಯಲಿದೆ.

india to hold sco summit today with putin xi and shehbaz sharif in attendance ash

ನವದೆಹಲಿ (ಜುಲೈ 4, 2023): ಶಾಂಘೈ ಸಹಕಾರ ಒಕ್ಕೂಟ ಸಭೆಯನ್ನು ಈ ಬಾರಿ ಭಾರತ ಆಯೋಜಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಂಗಳವಾರ ವರ್ಚುವಲ್‌ ಆಗಿ ಸಭೆ ನಡೆಯಲಿದೆ. ಪ್ರಾದೇಶಿಕ ಭದ್ರತೆ, ಸಂಪರ್ಕ ಸುಧಾರಣೆ ಮತ್ತು ವ್ಯಾಪಾರ ವೃದ್ಧಿ ಕುರಿತಾಗಿ ಮಾತುಕತೆ ನಡೆಯುವ ಸಾಧ್ಯತೆಗಳಿವೆ.

ಈ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಸೇರಿದಂತೆ ಕಜಕಿಸ್ತಾನ್‌, ಕಿರ್ಗಿಸ್ತಾನ್‌, ತಜಕಿಸ್ತಾನ್‌ ಮತ್ತು ಉಜ್ಬೇಕಿಸ್ತಾನ್‌ದ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ರಷ್ಯಾದಲ್ಲಿ ನಡೆದ ದಂಗೆಯ ಬಳಿಕ ಇದೇ ಮೊದಲ ಬಾರಿಗೆ ಪುಟಿನ್‌ ಸಭೆಯೊಂದರಲ್ಲಿ ಭಾಗಿಯಾಗುತ್ತಿದ್ದಾರೆ. ಈ ಸಭೆಯಲ್ಲಿ ಅಷ್ಘಾನಿಸ್ತಾನದಲ್ಲಿನ ಪರಿಸ್ಥಿತಿ, ಉಕ್ರೇನ್‌ ಯುದ್ಧ, ಸದಸ್ಯ ರಾಷ್ಟ್ರಗಳ ನಡುವಿನ ಸಂಪರ್ಕ, ವ್ಯಾಪಾರ ವೃದ್ಧಿ, ಪೂರ್ವ ಲಡಾಖ್‌ನಲ್ಲಿ ಚೀನಾದ ಉಪಟಳ ಮುಂತಾದ ವಿಷಯಗಳ ಕುರಿತಾಗಿ ಚರ್ಚೆ ನಡೆಯಲಿದೆ.

ಇದನ್ನು ಓದಿ: ಭುಟ್ಟೋ ಉಗ್ರರ ವಕ್ತಾರ; ಬಲಿಪಶುಗಳು, ಅಪರಾಧಿಗಳ ಜತೆ ಕೂರಲಾಗುವುದಿಲ್ಲ: ಜೈಶಂಕರ್‌ ಪ್ರಹಾರ

ಈ ಬಾರಿ ಶಾಂಘೈ ಸಹಕಾರ ಸಂಘದ ಅಂಗಸಂಸ್ಥೆಗಳು ಸೇರಿದಂತೆ ಹಲವು ಜಾಗತಿಕ ಮತ್ತು ಪ್ರದೇಶಿಕ ಒಕ್ಕೂಟಗಳ ಮುಖ್ಯಸ್ಥರಿಗೆ ಆಹ್ವಾನ ನೀಡಲಾಗಿದೆ. ಶಾಂಘೈ ಸಹಕಾರ ಸಂಘ 2001ರಲ್ಲಿ ಸ್ಥಾಪನೆಯಾಗಿದ್ದು, ಭಾರತ ಮತ್ತು ಪಾಕಿಸ್ತಾನಗಳು 2017ರಲ್ಲಿ ಈ ಸಂಘಕ್ಕೆ ಸೇರ್ಪಡೆಯಾಗಿದ್ದವು. ಈ ಸಭೆಯಲ್ಲಿ ಇರಾನ್‌ ದೇಶವನ್ನು ಒಕ್ಕೂಟಕ್ಕೆ ಆಹ್ವಾನಿಸುವ ಸಾಧ್ಯತೆಗಳಿವೆ.

 

ಇದನ್ನೂ ಓದಿ: Shanghai Summit: ವಿಶ್ವದ ಆಹಾರ ಸಮಸ್ಯೆ ನೀಗಿಸಲು ಸಹಕಾರ ಅಗತ್ಯ: ಮೋದಿ

Latest Videos
Follow Us:
Download App:
  • android
  • ios